ಭಾರತಕ್ಕೆ ಐತಿಹಾಸಿಕ ಮಿಷನ್‌ ಶಕ್ತಿ

ಒಡಿಶಾದ ಬಾಲಾಸೋರ್‌ನಲ್ಲಿ ನಡೆಸಲಾದ ಕ್ಷಿಪಣಿ ಪ್ರಯೋಗ ಯಶಸ್ವಿ

Team Udayavani, Mar 28, 2019, 6:00 AM IST

s-13

ಹೊಸದಿಲ್ಲಿ: ರಕ್ಷಣಾ ತಂತ್ರಜ್ಞಾನ ವಿಚಾರದಲ್ಲಿ ಈಗಾಗಲೇ ನೆಲ, ಜಲ, ವಾಯು ಪ್ರದೇಶಗಳಲ್ಲಿ ಸದೃಢವಾಗಿರುವ ಭಾರತ, ಈಗ ಅಂತರಿಕ್ಷದಲ್ಲೂ ತನ್ನ ಪರಾಕ್ರಮ ತೋರಿದೆ. ಬಾಹ್ಯಾಕಾಶದಿಂದಲೇ ದೇಶದ ಮೇಲೆ ಗೂಢಚಾರ ನಡೆಸುವಂಥ ಉಪಗ್ರಹಗಳನ್ನು ಹೊಡೆದುರುಳಿಸುವ ವಿಶಿಷ್ಟ ತಂತ್ರಜ್ಞಾನದ ಕ್ಷಿಪಣಿಯನ್ನು (ಎ-ಸ್ಯಾಟ್‌) ಯಶಸ್ವಿಯಾಗಿ ಪ್ರಯೋಗಿಸಿರುವ ಭಾರತ, ಈ ಮೂಲಕ ಇಂಥ ತಂತ್ರಜ್ಞಾನ ಹೊಂದಿರುವ ವಿಶ್ವದ ನಾಲ್ಕನೇ ದೇಶವಾಗಿ ಹೊರಹೊಮ್ಮಿದೆ. ಬುಧವಾರ ಅಪರಾಹ್ನ ಪ್ರಧಾನಿ ನರೇಂದ್ರ ಮೋದಿ ಅವರೇ ದೇಶವನ್ನುದ್ದೇಶಿಸಿ ಮಾತನಾಡಿ, ಈ ವಿಷಯ ಅರುಹಿದ್ದಾರೆ.

“ಸಂಪೂರ್ಣವಾಗಿ ದೇಶೀಯವಾಗಿ ತಯಾರಿಸ ಲಾಗಿರುವ ಈ ಕ್ಷಿಪಣಿ ಮೂಲಕ ನೆಲದಿಂದ 300 ಕಿ.ಮೀ. ಎತ್ತರದಲ್ಲಿ ಸಂಚ ರಿಸುತ್ತಿದ್ದ ಭಾರತದ ನಿಷ್ಕ್ರಿಯ ಉಪಗ್ರಹವೊಂದನ್ನು ಹೊಡೆ ದುರುಳಿಸಲಾಗಿದೆ. ಈ ಮೂಲಕ ಇಂಥ ವ್ಯವಸ್ಥೆ ಹೊಂದಿದ್ದ ಅಮೆರಿಕ, ರಷ್ಯಾ, ಚೀನ ದೇಶಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ. ಈ ತಂತ್ರಜ್ಞಾನಕ್ಕೆ “ಮಿಷನ್‌ ಶಕ್ತಿ’ ಎಂದು ಹೆಸರಿಡಲಾಗಿದೆ’ ಎಂದು ಘೋಷಿಸಿದರು. ಅಲ್ಲದೆ, “ಎ-ಸ್ಯಾಟ್‌ ಪರಿಕಲ್ಪನೆಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ವಿಜ್ಞಾನಿಗಳು ದೇಶೀಯವಾಗಿ ಅಭಿವೃದ್ಧಿಗೊಳಿಸಿದ “ಕೈನೆಟಿಕ್‌ ಕಿಲ್‌ ವೆಹಿಕಲ್‌’ ಎಂಬ ತಂತ್ರಜ್ಞಾನದಡಿ ಉಪಗ್ರಹವನ್ನು ಧ್ವಂಸಗೊಳಿಸಲಾಗಿದೆ. ಈ ಮೂಲಕ ಭಾರತದ ಮೇಲೆ ಭೂಮಿ, ಜಲ, ಆಗಸ ಮಾತ್ರವಲ್ಲ ಒಂದೊಮ್ಮೆ ಬಾಹ್ಯಾಕಾಶದ ಮೂಲಕವೂ ದಾಳಿ ಮಾಡಲು ಯತ್ನಿಸಿದರೆ ಭಾರತ ಅದನ್ನು ಸೂಕ್ತ ರೀತಿಯಲ್ಲಿ ಹಿಮ್ಮೆಟ್ಟಿಸುತ್ತದೆ. ತನ್ನ ಬಾಹ್ಯಾಕಾಶ ವ್ಯಾಪ್ತಿಯನ್ನು ಸಂರಕ್ಷಿಸಿಕೊಳ್ಳುತ್ತದೆ ಎಂಬ ಸಂದೇಶವನ್ನು ಭಾರತವು ವಿಶ್ವ ಸಮುದಾಯಕ್ಕೆ ರವಾನಿಸಿದೆ’ ಎಂದರು. ಈ ತಂತ್ರಜ್ಞಾನದ ಅಭಿವೃದ್ಧಿಗೆ ಕಾರಣರಾದ ಡಿಆರ್‌ಡಿಒ ವಿಜ್ಞಾನಿಗಳನ್ನು ಮೋದಿ ಶ್ಲಾ ಸಿದರು.

ಒಡಿಶಾದ ಬಾಲಾಸೋರ್‌ನಲ್ಲಿ ಬೆಳಗ್ಗೆ 11.16ಕ್ಕೆ ಡಾ| ಅಬ್ದುಲ್‌ ಕಲಾಂ ಉಡ್ಡಯನ ಕೇಂದ್ರದಿಂದ ಮಿಷನ್‌ ಶಕ್ತಿ ಕ್ಷಿಪಣಿಯನ್ನು ಪ್ರಯೋಗಿಸಲಾಯಿತು. ಭಾರತದ್ದೇ ಆದ ಹಳೆಯ ಮತ್ತು ನಿಷ್ಕ್ರಿಯಗೊಂಡಿದ್ದ ಉಪಗ್ರಹವೊಂದನ್ನು ಧ್ವಂಸಗೊಳಿಸಲಾಗಿದೆ. ಆಕಾಶದಲ್ಲಿ ಸಾವಿರಾರು ಕಿ.ಮೀ. ವೇಗದಲ್ಲಿ ಸಂಚರಿಸುವ ಉಪಗ್ರಹವನ್ನು ಗುರಿಯಾಗಿಸಿ ಅದರ ಮೇಲೆ ದಾಳಿ ಮಾಡಿ, ಅದನ್ನು ಉರುಳಿಸುವುದು ಸುಲಭದ ಕೆಲಸವೇನಲ್ಲ. ವೇಗವಾಗಿ ಚಲಿಸುವ ಒಂದು ಬುಲೆಟ್‌ನ್ನು ಇನ್ನೊಂದು ಬುಲೆಟ್‌ ಗುರಿಯಾಗಿಸಿ ದಾಳಿ ಮಾಡುವಷ್ಟೇ ತ್ರಾಸದಾಯಕ.

ಎಲೈಟ್‌ ಕ್ಲಬ್‌ಗ ಭಾರತ
ಇದುವರೆಗೆ ಈ ತಂತ್ರಜ್ಞಾನವನ್ನು ಕೇವಲ ಮೂರು ದೇಶಗಳಷ್ಟೇ ಅಭಿವೃದ್ಧಿಪಡಿಸಿದ್ದವು. ಅವುಗಳೆಂದರೆ ಅಮೆರಿಕ, ರಷ್ಯಾ, ಚೀನ. ಈಗ ಇವುಗಳ ಸಾಲಿಗೆ ಭಾರತವೂ ಸೇರ್ಪಡೆಗೊಂಡಿದೆ. ಅಮೆರಿಕ ತನ್ನಲ್ಲಿನ ಎ-ಸ್ಯಾಟ್‌ ತಂತ್ರಜ್ಞಾನವನ್ನು ಮೊದಲು ಪರೀಕ್ಷೆ ಮಾಡಿದ್ದು 1958ರಲ್ಲಿ. ಅನಂತರ, ರಷ್ಯಾ 1964ರಲ್ಲಿ ಮತ್ತು ಚೀನ 2007ರಲ್ಲಿ ಈ ತಂತ್ರಜ್ಞಾನದ ಯಶಸ್ವಿ ಪ್ರಯೋಗ ಮಾಡಿವೆ. ಭಾರತ ಈ ಸಾಧನೆ ಮಾಡಿದ ನಾಲ್ಕನೇ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನೇ ತಮ್ಮ ಭಾಷಣದಲ್ಲಿ ಬಣ್ಣಿಸಿದ ಮೋದಿ, “ಪ್ರತಿಯೊಂದು ದೇಶವೂ ತನ್ನದೇ ಆದ ಐತಿಹಾಸಿಕ ಸಾಧನೆಗಳನ್ನು ಮಾಡುವ ದಿನಗಳನ್ನು ಕಂಡಿರುತ್ತದೆ. ಭಾರತದ ಮಟ್ಟಿಗೆ ಇಂದು ಅಂಥದ್ದೇ ಒಂದು ಮಹಾ ಸುದಿನ’ ಎಂದಿದ್ದಾರೆ.

ಆ ಒಂದು ಗಂಟೆ….
“ಇಂದು ಬೆಳಗ್ಗೆ 11.45ರಿಂದ 12ರೊಳಗೆ ಟಿವಿ, ರೇಡಿಯೋ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಾನು ದೇಶವನ್ನು ಉದ್ದೇಶಿಸಿ ಮಾತನಾಡುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಬೆಳಗ್ಗೆ 11.20ರ ಸುಮಾರಿಗೆ ಟ್ವೀಟ್‌ ಮಾಡಿದ್ದರು. ಈ ಹಿಂದೆ 2016ರ ನ.8ರ ರಾತ್ರಿ ನೋಟು ಅಪಮೌಲ್ಯದ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದ ಕಾರಣಕ್ಕಾಗಿ ಎಲ್ಲರಲ್ಲೂ ಮೋದಿಯವರ ಈ ಟ್ವೀಟ್‌ ಕುತೂಹಲ ಹುಟ್ಟಿಸಿತ್ತು. ಅಂತೆಯೇ, 12.20ರ ಹೊತ್ತಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮಿಷನ್‌ ಶಕ್ತಿ ತಂತ್ರಜ್ಞಾನವನ್ನು ಪ್ರಕಟಿಸಿದಾಗ ಎಲ್ಲರೂ ನಿರುಮ್ಮಳರಾದರು! ಈ ಒಂದು ಗಂಟೆ ಅವಧಿಯಲ್ಲಿ ಇಡೀ ದೇಶಕ್ಕೆ ದೇಶವೇ ಕಾದುಕೂತಿತ್ತಲ್ಲದೆ, ಒಬ್ಬೊಬ್ಬರು ಒಂದೊಂದು ಊಹೆಗಳನ್ನು ಹರಿಯಬಿಡುತ್ತಿದ್ದರು.

2008-09ರಲ್ಲಿ ಯೋಜನೆ ಆರಂಭ
ಎ -ಸ್ಯಾಟ್‌ ಯೋಜನೆ ಆರಂಭವಾಗಿದ್ದು ಯುಪಿಎ ಆಡಳಿತವಿದ್ದ 2008-09ರಲ್ಲೇ. 2007ರಲ್ಲಷ್ಟೇ ಚೀನ ಇಂಥದ್ದೊಂದು ಪ್ರಯೋಗ ಮಾಡಿ ಯಶಸ್ವಿಯಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತವೂ ಈ ತಂತ್ರಜ್ಞಾನ ಅಳವಡಿಸಿ ಕೊಳ್ಳಬೇಕು ಎಂಬ ಉದ್ದೇಶದಿಂದ ಈ ಯೋಜನೆಗೆ ಕೈಹಾಕಿತ್ತು. ಈಗಿನ ನೀತಿ ಆಯೋಗದ ಸದಸ್ಯ ಹಾಗೂ ಆಗಿನ ಡಿಆರ್‌ಡಿಒ ಅಧ್ಯಕ್ಷ ಡಾ| ವಿಜಯ ಸಾರಸ್ವತ್‌ ಅವರೇ ಇದರ ರೂವಾರಿ. 2012ರ ವೇಳೆಗೆ ಪೃಥ್ವಿ ಮಿಸೈಲ್‌ ಅನ್ನು ಅಭಿವೃದ್ಧಿಗೊಳಿಸಿದ್ದರು. ಆಗಲೇ, ಭಾರತ ಅಂತರಿಕ್ಷದಲ್ಲಿ ಉಪಗ್ರಹಗಳನ್ನು ಹೊಡೆದುಹಾಕುವ ಸಾಮರ್ಥ್ಯ ಹೊಂದಿದೆ ಎಂದು ವಿಜಯ ಸಾರಸ್ವತ್‌ ಅವರೇ ಹೇಳಿದ್ದರು. ಆದರೆ ಆಗ ಈ ಕ್ಷಿಪಣಿಯ ಪರೀಕ್ಷೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಈಗ ಸರಕಾರ ಪರೀಕ್ಷೆಗೆ ಒಪ್ಪಿಗೆ ನೀಡಿದ್ದು, ಯಶಸ್ವಿಯಾಗಿ ಪೂರೈಸಲಾಗಿದೆ.

ಎ-ಸ್ಯಾಟ್‌ ಎಂದರೇನು?
ಅಸಲಿಗೆ, ಬ್ಯಾಲಿಸ್ಟಿಕ್‌ ಮಿಸೈಲ್‌ ಡಿಫೆನ್ಸ್‌ ಕಾರ್ಯಕ್ರಮದಡಿ ಡಿ.ಆರ್‌.ಡಿ.ಒ. ಹಲವಾರು ಪ್ರಯೋಗಗಳನ್ನು ನಡೆಸುತ್ತಲೇ ಬಂದಿದೆ. ಇದರಲ್ಲಿ, “ಬ್ಯಾಲಿಸ್ಟಿಕ್‌ ಮಿಸೈಲ್‌ ಡಿಫೆನ್ಸ್‌ ಇಂಟರ್‌ಸೆಪ್ಟರ್‌’ ತಂತ್ರಜ್ಞಾನವೂ ಒಂದು. ಈ ಮಾದರಿಯ ಇಂಟರ್‌ಸೆಪ್ಟರ್‌ ತಂತ್ರಜ್ಞಾನದ ಅಡಿಯಲ್ಲಿ ಭಾರತ ತನ್ನದೇ ಆದ ಹೊಸ ಆವಿಷ್ಕಾರಗಳನ್ನು ಮಾಡಿದ್ದು, ಅದೆಲ್ಲವನ್ನೂ ಈ ಕಾರ್ಯಕ್ರಮದಲ್ಲಿ ಅಂತರ್ಗತಗೊಳಿಸಲಾಗಿದೆ. ಇದರಡಿಯಲ್ಲಿ, ಉಪಗ್ರಹ ನಿಗ್ರಹ ಶಸ್ತ್ರಾಸ್ತ್ರ (ಎ-ಸ್ಯಾಟ್‌)ಗಳ ಅಭಿವೃದ್ಧಿಗೆ ಕೈಹಾಕಲಾಗಿದೆ. ಇದಕ್ಕಾಗಿ ಉಪಗ್ರಹ ನಿಗ್ರಹ ಕ್ಷಿಪಣಿಗಳನ್ನು ತಯಾರಿಸಲಾಗಿದೆ. ನಮ್ಮ ದೇಶದ ಮೇಲೆ ಬೇಹುಗಾರಿಕೆ ಮಾಡುವ, ದಾಳಿ ನಡೆಸುವ ಉದ್ದೇಶವುಳ್ಳ ವಿದೇಶಿ ಉಪಗ್ರಹಗಳನ್ನು ಈ ಕ್ಷಿಪಣಿಗಳ ಮೂಲಕ ನಾಶ ಮಾಡುವ ವಿಶೇಷ, ವಿಶಿಷ್ಟ ತಂತ್ರಜ್ಞಾನವಿದು.

ಡಿಆರ್‌ಡಿಒ ವಿಜ್ಞಾನಿಗಳಿಗೆ ಅಭಿನಂದನೆಗಳು. ನಿಮ್ಮ ಸಾಧನೆ ಶ್ಲಾಘನೀಯ. ಜತೆಗೆ ವಿಶ್ವ ರಂಗಭೂಮಿ ದಿನಾಚರಣೆಯ ಈ ದಿನ ಪ್ರಧಾನಿ ಮೋದಿಯವರಿಗೂ ಅಭಿನಂದನೆ.
- ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಭಾರತದ ಪರಮಾಣು ಯೋಜನೆಗಳು ಸದಾ ಕಾಲ ಮುಂದುವರಿಯುವಂಥವು. ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಇದನ್ನು ಖಂಡಿಸುತ್ತಾರೆ ಎಂಬ ಕಾರಣಕ್ಕಾಗಿ ಅಂಥ ಮಹತ್ವದ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ.
-ಅರುಣ್‌ ಜೇಟ್ಲಿ, ಕೇಂದ್ರ ಹಣಕಾಸು ಸಚಿವ

ಭಾರತವು ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದೆ. ಈ ಅವಿಸ್ಮರಣೀಯ ಹಿರಿಮೆ ಇಸ್ರೋ ಹಾಗೂ ಡಿಆರ್‌ಡಿಒದಲ್ಲಿರುವ ವಿಜ್ಞಾನಿಗಳಿಗೆ ಸಲ್ಲುತ್ತದೆ. ನಿಮ್ಮ ಬಗ್ಗೆ ಹೆಮ್ಮೆಯಿದೆ.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಎ-ಸ್ಯಾಟ್‌ ಮಿಸೈಲ್‌ ಹೇಗೆ ಕೆಲಸ ಮಾಡುತ್ತೆ ?
1 ಸಾಮಾನ್ಯವಾಗಿ ಎ-ಸ್ಯಾಟ್‌ ಕ್ಷಿಪಣಿಗಳು ಬಹುದೂರ
ಕ್ರಮಿಸುವ ಶಸ್ತ್ರಾಸ್ತ್ರಗಳಾಗಿರುತ್ತವೆ. ಇವುಗಳಿಗೆ ಕೈನೆಟಿಕ್‌ ಕಿಲ್‌ ವೆಹಿಕಲ್‌ಗ‌ಳನ್ನು ಅಳವಡಿಸಲಾಗಿರುತ್ತದೆ.

2 ಎ-ಸ್ಯಾಟ್‌ ಕ್ಷಿಪಣಿಗಳಿಗೆ ಒಂದೇ ಏಟಿಗೆ ನಾಶ ಮಾಡುವ ರೀತಿಯಲ್ಲಿ ಗುರಿ, ಪ್ರತಿಬಂಧಕ, ನಿರ್ವ ಹಣೆ ಮತ್ತು ನಾಶ ಮಾಡುವ ತಂತ್ರಜ್ಞಾನ ಅಳವಡಿಸಲಾಗಿರುತ್ತದೆ.

3 ಭಾರತದ ಉಪಗ್ರಹ ನಾಶ ಕ್ಷಿಪಣಿ ರೂಪದಲ್ಲಿ ಅಗ್ನಿ-5 ಅನ್ನು ಬಳಕೆ ಮಾಡಿಕೊಂಡಿರುವ ಸಾಧ್ಯತೆ ಇದೆ.

ಹಂತ 1
ರಾಡಾರ್‌ ಮೂಲಕ ನಾಶ ಮಾಡಬೇಕಾದ ಸ್ಯಾಟ ಲೈಟ್‌ ಗುರುತು, ಅದರ ಚಲನೆ ಮೇಲೆ ನಿಗಾ.

ಹಂತ 2
ಲಾಂಚ್‌ಪ್ಯಾಡ್‌ನಿಂದ ಆ್ಯಂಟಿ ಬ್ಯಾಲೆಸ್ಟಿಕ್‌ ಮಿಸೈಲ್‌ ಉಡಾವಣೆ. ರಾಡಾರ್‌ನಿಂದ ಸ್ಯಾಟಲೈಟ್‌ ಕ್ಷಿಪಣಿಗೆ ಮಾಹಿತಿ ರವಾನೆ.

ಹಂತ 3
ಕ್ಷಿಪಣಿಯ ಕೆಳಗಿನ ಎರಡು ಭಾಗ ಮತ್ತು ಮೇಲಿನ ಹೀಟ್‌ ಶೀಲ್ಡ್‌ನ ಭಾಗ ಪ್ರತ್ಯೇಕ. ಬಳಿಕ ನೇರವಾಗಿ ಸ್ಯಾಟಲೈಟ್‌ಗೆ ಹೊಡೆತ.

ಪೃಥ್ವಿ ರಕ್ಷಣಾ ವಾಹನ ಮೂಲದ ಸುಧಾರಿತ ಕ್ಷಿಪಣಿ ಯನ್ನು ಬಳಸಿಕೊಂಡು ಈ ಮಿಷನ್‌ ಪೂರೈಸಲಾಗಿದೆ.
-ಡಾ| ಸತೀಶ್‌ ರೆಡ್ಡಿ, ಡಿಆರ್‌ಡಿಒ ಅಧ್ಯಕ್ಷ

ಟಾಪ್ ನ್ಯೂಸ್

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.