ಐತಿಹಾಸಿಕ GST ಯುಗಾರಂಭ
Team Udayavani, Jul 1, 2017, 12:44 AM IST
17 ವರುಷಗಳ ಹಿಂದೆ ಚಿಗುರೊಡೆದ ಕನಸೊಂದು
ಕೊನೆಗೂ ಶುಕ್ರವಾರ ನಡುರಾತ್ರಿ ಸಾಕಾರ ಗೊಂಡಿತು. ಏಕರೂಪ ತೆರಿಗೆ ವ್ಯವಸ್ಥೆ ಜಿಎಸ್‌ಟಿಗೆ ಭಾರತ ತೆರೆದುಕೊಳ್ಳುವುದ ರೊಂದಿಗೆ ದೇಶದ ಆರ್ಥಿಕ ಇತಿಹಾಸದಲ್ಲಿ ಹೊಸ ಯುಗ ಆರಂಭಗೊಂಡಿತು. 1947ರ ಆಗಸ್ಟ್ 14ರ ನಡುರಾತ್ರಿ ರಾಜ ಕೀಯವಾಗಿ ಭಾರತ ಒಂದಾದರೆ, 70 ವರ್ಷ ಗಳ ಅನಂತರ 2017ರ ಜೂ. 30ರ ನಡುರಾತ್ರಿ ಭಾರತ ಆರ್ಥಿಕವಾಗಿಯೂ ಒಂದಾಯಿತು. ಅದು 2000ನೇ ಇಸವಿ, ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರದಲ್ಲಿ ಹೊಳೆದ ಉಪಾಯವಿದು. ನಾವೆಲ್ಲರೂ ಒಂದೇ ಎಂದು ಸ್ವಾತಂತ್ರ್ಯ ಬಂದಾಗಲೇ ಸಾರಿದ ಮೇಲೆ, ಪ್ರತಿ ರಾಜ್ಯವೂ ಒಂದೊಂದು ವಿಧದ ತೆರಿಗೆ ಕ್ರಮ
ಇಟ್ಟುಕೊಂಡಿರುವುದು ಏಕೆ ಎಂಬ ಪ್ರಶ್ನೆಯನ್ನಿಟ್ಟುಕೊಂಡು ರೂಪಿತವಾದ ಕನಸು. ಈ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನನಸಾಗಲಿಕ್ಕೆ ನಾಲ್ಕು ಸರಕಾರಗಳು ಶ್ರಮಿಸಿವೆ. ಅಟಲ್ ಅವಧಿಯಲ್ಲಿ ಈ ಕನಸು ಚಿಗುರಿದರೆ, ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಹೆಮ್ಮರವಾಗಿ ಬೆಳೆಯಿತು. ಈಗ ಪ್ರಧಾನಿ ನರೇಂದ್ರ ಮೋದಿ ಸರಕಾರದಲ್ಲಿ ಜಿಎಸ್‌ಟಿ ಹೂವು-ಹಣ್ಣು ಕೊಡಲು ಆರಂಭಿಸು ವತ್ತ ಹೆಜ್ಜೆ ಹಾಕಿದೆ. ಅರ್ಥಶಾಸ್ತ್ರಜ್ಞರ ರೀತಿಯಲ್ಲಿ ಹೇಳುವು ದಾದರೆ ಜಿಎಸ್‌ಟಿ ಲಾಭ -ನಷ್ಟದ ಲೆಕ್ಕಾಚಾರ ವಷ್ಟೇ. ಆದರೆ ಭಾವನಾತ್ಮಕವಾಗಿ ಇದನ್ನು ವರ್ಣಿ ಸುವುದಾದರೆ “ಒಂದೇ ದೇಶ, ಒಂದೇ ತೆರಿಗೆ’. ಅಲ್ಲದೆ ರಾಜ್ಯ-ರಾಜ್ಯದ ನಡುವೆಯೂ ಪ್ರವೇಶ ತೆರಿಗೆ ವಸೂಲು ಮಾಡುತ್ತಿದ್ದುದು, ಗಣ ತಂತ್ರದ ವಿರುದ್ಧವಾಗಿದೆಯೇನೋ ಎಂಬ ಅನು ಮಾನಕ್ಕೂ ಕಾರಣವಾಗಿತ್ತು. ಹೀಗಾಗಿ ಈ ವರೆಗೆ ಇದ್ದ ಎಲ್ಲ ರೀತಿಯ ತೆರಿಗೆಗಳನ್ನು ತನ್ನೊಳಗೆ ಹಾಕಿಕೊಂಡು ಶುಕ್ರವಾರ ಮಧ್ಯರಾತ್ರಿಯಿಂದ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬಂತು. ಪ್ರಧಾನಿ, ರಾಷ್ಟ್ರಪತಿ ಉಪಸ್ಥಿತಿ: ಶುಕ್ರವಾರ ಮಧ್ಯರಾತ್ರಿ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ನಡೆದ ವೈಭವೋಪೇತ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಹಿತ ಕೇಂದ್ರ ಸರಕಾರದ ಪ್ರಮುಖ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಹಿರಿಯ ಅಧಿಕಾರಿಗಳು, ವಿಪಕ್ಷಗಳ ನಾಯಕರು, ಸಂಸ ದರ ಉಪಸ್ಥಿತಿಯಲ್ಲಿ ಜಿಎಸ್‌ಟಿಗೆ ಚಾಲನೆ ನೀಡಲಾಯಿತು.
ಜಿಎಸ್ ಟಿ ಜಾರಿಯಿಂದ ಕೆಲ ಸಮಯದ ನಂತರ ದೇಶ ಹೊಸ ದಿಕ್ಕಿನತ್ತ ಸಾಗಲಿದೆ. ಜಿಎಸ್ ಟಿ ಕೇವಲ ಒಂದು ಪಕ್ಷದ ಸಾಧನೆಯಲ್ಲ. ನಮ್ಮೆಲ್ಲರ ಸತತ ಪರಿಶ್ರಮದ ಫಲವಾಗಿದೆ. ಜಿಎಸ್ ಟಿ ಜಾರಿಯಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಜಿಎಸ್ ಟಿ ಟೀಂ ಇಂಡಿಯಾದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಜಿಎಸ್ ಟಿಗಾಗಿ ಹಲವು ಕಡೆ ಸತತ 18 ಸಭೆಗಳನ್ನು ನಡೆಸಿದ ಬಳಿಕ ಜಿಎಸ್ ಟಿ ಜಾರಿಯಾಗಿದೆ. ಜಿಎಸ್ ಟಿಯಿಂದ ದೇಶದ ಆರ್ಥಿಕ ಏಕೀಕರಣವಾಗಲಿದೆ. ಲೇಹ್ ನಿಂದ ಲಕ್ಷದ್ವೀಪದವರೆಗೆ, ಗಂಗಾನಗರದಿಂದ ಇಟಾ ನಗರದವರೆಗೆ ಒಂದೇ ತೆರಿಗೆ. ಬಡವರ ಹಿತದ ಬಗ್ಗೆ ಜಿಎಸ್ ಟಿಯಲ್ಲಿ ಗಮನ ಹರಿಸಲಾಗಿದೆ. ಅಲ್ಲದೇ 25 ಲಕ್ಷದವರೆಗೆ ವಹಿವಾಟು ನಡೆಸುವವರಿಗೆ ತೆರಿಗೆ ಇಲ್ಲ. 75 ಲಕ್ಷದವರೆಗೆ ವಹಿವಾಟು ನಡೆಸುವವರಿಗೆ ಸಾಮಾನ್ಯ ತೆರಿಗೆ. ಅಧಿಕಾರಿಗಳಿಂದ ಸಾಮಾನ್ಯ ವ್ಯಾಪಾರಿಗಳಿಗೆ ವಿನಾ ಕಾರಣ ತೊಂದರೆ ಇತ್ತು. ಜಿಎಸ್ ಟಿ ಜಾರಿಯಿಂದಾಗಿ ಶ್ರೀಸಾಮಾನ್ಯ ವ್ಯಾಪಾರಿಗಳು ನಿಟ್ಟುಸಿರು ಬಿಡುವಂತಾಗಲಿದೆ ಎಂದ ಮೋದಿ ಅವರು ತಮ್ಮ ಭಾಷಣದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್, ಚಾಣಕ್ಯರನ್ನು ನೆನಪಿಸಿಕೊಂಡರು. ಜಿಎಸ್ ಟಿ ಜಾರಿಯಿಂದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ.ಜಿಎಸ್ ಟಿ ದೇಶದ ಅರ್ಥ ವ್ಯವಸ್ಥೆಯಲ್ಲಿ ಐತಿಹಾಸಿಕ ಹೆಜ್ಜೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಣ್ಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.