ಮಹಾರಾಷ್ಟ್ರದಲ್ಲಿ 2,347 ಹೊಸ ಪ್ರಕರಣ, ದೇಶದಲ್ಲಿ 90 ಸಾವಿರ ದಾಟಿದ ಸೋಂಕಿತರ ಸಂಖ್ಯೆ
Team Udayavani, May 18, 2020, 8:03 AM IST
ಸೂರತ್ ನಲ್ಲಿ ಬಸ್ ಗಾಗಿ ಕಾಯುತ್ತಿರುವ ವಲಸೆ ಕಾರ್ಮಿಕರು.
ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 2.347 ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಒಂದೇ ದಿನದಲ್ಲಿ ಇಲ್ಲಿಯವರೆಗೂ ದಾಖಲಾದ ಅತೀ ದೊಡ್ಡ ಮೊತ್ತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮಾತ್ರವಲ್ಲದೆ ಭಾನುವಾರ 63 ಜನರು ಈ ಮಹಾಮಾರಿಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದದೆ.
ಈ ರಾಜ್ಯದಲ್ಲಿ ಒಟ್ಟಾರೆಯಾಗಿ ಸೋಂಕಿತರ ಪ್ರಮಾಣ 33,053ಕ್ಕೆ ಎರಿಕೆಯಾಗಿದ್ದು ಮೃತರ ಪ್ರಮಾಣ 1,198ಕ್ಕೆ ಜಿಗಿದಿದೆ. ಮುಂಬೈನಲ್ಲಂತೂ ಈ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು ಒಂದೇ ದಿನ 1,571 ಪ್ರಕರಣಗಳು ದಾಖಲಾಗಿವೆ. ಈ ನಗರವೊಂದರಲ್ಲೇ ಸುಮಾರು 19,967 ಸೋಂಕಿತರಿದ್ದು, ಮೃತರ ಸಂಖ್ಯೆ 734ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಇಂದಿನಿಂದ ( ಸೋಮವಾರ) ನಾಲ್ಕನೇ ಹಂತದ ಲಾಕ್ ಡೌನ್ ಆರಂಭವಾಗಿದ್ದು ಹಲವಾರು ಹೊಸ ಮಾರ್ಗ ಸೂಚಿಗಳನ್ನು ಅಳವಡಿಸಲಾಗುತ್ತಿದೆ. ಮಾತ್ರವಲ್ಲದೆ ಈ ಲಾಕ್ ಡೌನ್ ಮೇ 31ರ ವರೆಗೂ ಮುಂದುವರೆಯುತ್ತದೆ.
ಭಾರತದಲ್ಲಿ ಒಟ್ಟಾರೆಯಾಗಿ ಸೋಂಕಿತರ ಪ್ರಮಾಣ 90 ಸಾವಿರದ ಗಡಿ ದಾಟಿದ್ದು 2,872 ಜನರು ಮೃತಟ್ಟಿದ್ದಾರೆ. ದೇಶದಲ್ಲಿ 53,946 ಸಕ್ರೀಯ ಸೋಂಕಿತ ಪ್ರಕರಣಗಳಿದ್ದು, 34,108 ಜನರು ಸೋಂಕಿನಿಂದ ಮುಕ್ತರಾಗಿದ್ದಾರೆ. ಗುಜರಾತ್ (10,988), ತಮಿಳುನಾಡು(10,585) ಗಳಲ್ಲೂ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
MUST WATCH
ಹೊಸ ಸೇರ್ಪಡೆ
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
Viral Video: ಟಿಕ್‌ಟಾಕ್ ಸ್ಟಾರ್ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.