India ಆರ್ಥಿಕತೆಯು ಬೆಳೆಯುತ್ತಿದೆ ಆದರೆ… : ರಾಹುಲ್ ಗಾಂಧಿ
ಹಾರ್ವರ್ಡ್ ವಿವಿ ವಿದ್ಯಾರ್ಥಿಗಳೊಂದಿಗೆ ಸಂವಾದ...
Team Udayavani, Dec 23, 2023, 5:24 PM IST
ಹೊಸದಿಲ್ಲಿ: ಭಾರತದ ಆರ್ಥಿಕತೆಯು ಬೆಳೆಯುತ್ತಿದೆ ಆದರೆ ಸಂಪತ್ತು ಕೆಲವೇ ಕೈಯಲ್ಲಿ ಕೇಂದ್ರೀಕೃತವಾಗುತ್ತಿದೆ ಮತ್ತು ನಿರುದ್ಯೋಗದ ಸವಾಲು ಮುಂದುವರೆದಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯ ಹೊರ ಹಾಕಿದ್ದಾರೆ.
ಡಿಸೆಂಬರ್ 15 ರಂದು ನಡೆದ ಸಂವಾದದ ವಿಡಿಯೋವನ್ನು ಶನಿವಾರ ಎಕ್ಸ್ ನಲ್ಲಿ ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ಕೇಳಿದಾಗ, ಕಾಂಗ್ರೆಸ್ ನಾಯಕ ಉತ್ತರಿಸಿಸಿ “ಎಲ್ಲಾ ವಿದ್ಯಾರ್ಥಿಗಳಿಗೆ ನನ್ನ ಸಲಹೆ – ನಿಜವಾದ ಶಕ್ತಿಯು ಜನರೊಂದಿಗೆ ಸಂಪರ್ಕ ಹೊಂದುವುದು, ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಆಳವಾಗಿ ಆಲಿಸುವುದು ಮತ್ತು ಜನರ ಬಗ್ಗೆ ದಯೆ ತೋರುವುದರಿಂದ ಬರುತ್ತದೆ.” ಎಂದು ಪರೋಕ್ಷವಾಗಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.
“ನೀವು ಆರ್ಥಿಕ ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ ಆ ಆರ್ಥಿಕ ಅಭಿವೃದ್ಧಿ ಯಾರ ಹಿತಾಸಕ್ತಿಯಲ್ಲಿದೆ ಎಂಬ ಪ್ರಶ್ನೆಯನ್ನು ನೀವು ಕೇಳಬೇಕು.ಆ ಬೆಳವಣಿಗೆಯ ಸ್ವರೂಪ ಏನು ಮತ್ತು ಅದರಿಂದ ಯಾರು ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದು ಕೇಳಬೇಕಾದ ಪ್ರಶ್ನೆ. ಭಾರತದಲ್ಲಿನ ಬೆಳವಣಿಗೆಯ ಅಂಕಿ ಅಂಶದ ಜತೆಯಲ್ಲೇ ಭಾರತದಲ್ಲಿ ನಿರುದ್ಯೋಗದ ಅಂಕಿಅಂಶವಿದೆ. ಭಾರತವು ಸಂಪತ್ತನ್ನು ಕೆಲವೇ ಜನರ ಕಡೆಗೆ ಕೇಂದ್ರೀಕರಿಸುವ ಮೂಲಕ ಬೆಳೆಯುತ್ತಿದೆ, ”ಎಂದು ಹೇಳಿದ್ದಾರೆ.
My advice to all students – True power comes from connecting with people, listening deeply to what they’re saying, and being kind to yourself.
Dive into my interaction with Harvard students:https://t.co/RnH52kQhHy pic.twitter.com/QWIp0aLHah
— Rahul Gandhi (@RahulGandhi) December 23, 2023
“ನಮ್ಮಲ್ಲಿ ಅದಾನಿ ಇದ್ದಾರೆ, ಅವರು ಪ್ರಧಾನ ಮಂತ್ರಿಯೊಂದಿಗೆ ನೇರವಾದ ಸಂಪರ್ಕ ಹೊಂದಿದ್ದಾರೆಂದು ಎಲ್ಲರಿಗೂ ತಿಳಿದಿದೆ. ನಮ್ಮ ದೇಶದ ಎಲ್ಲಾ ಬಂದರುಗಳು, ವಿಮಾನ ನಿಲ್ದಾಣಗಳು, ನಮ್ಮ ಮೂಲಸೌಕರ್ಯಗಳನ್ನು ಹೊಂದಿದ್ದಾರೆ. ಆ ರೀತಿಯ ಏಕಸಾಮ್ಯತೆಯಿಂದ ಬೆಳವಣಿಗೆಯನ್ನು ಪಡೆಯುತ್ತೀರಿ ಎಂದಾದರೆ ಯಾವುದೇ ಹಂಚಿಕೆಯನ್ನು ಪಡೆಯುವುದಿಲ್ಲ”ಎಂದರು.
“ನ್ಯಾಯಯುತ ಮಾಧ್ಯಮ, ನ್ಯಾಯಯುತ ಕಾನೂನು ವ್ಯವಸ್ಥೆ, ನ್ಯಾಯಯುತ ಚುನಾವಣ ಆಯೋಗ, ಹಣಕಾಸು ಪ್ರವೇಶ, ತಟಸ್ಥ ಸಂಸ್ಥೆಗಳ ಅಗತ್ಯವಿದೆ. ಐಆರ್‌ಎಸ್, ಎಫ್‌ಬಿಐನ ಪೂರ್ಣ ಸಮಯದ ಕೆಲಸವು ಪ್ರತಿಪಕ್ಷಗಳ ಜೀವನವನ್ನು ನಾಶಪಡಿಸುತ್ತಿರುವ ಯುನೈಟೆಡ್ ಸ್ಟೇಟ್ಸ್ ಅನ್ನು ಕಲ್ಪಿಸಿಕೊಳ್ಳಿ” ಎಂದರು.
ನಾನು 4,000 ಕಿಲೋಮೀಟರ್ ನಡೆದೆ ಏಕೆಂದರೆ, ನಮ್ಮ ಸಂದೇಶ ತಲುಪಲು ಬೇರೆ ಮಾರ್ಗವಿಲ್ಲದ ಕಾರಣ ನಾನು 4,000 ಕಿಲೋಮೀಟರ್ ನಡೆದಿದ್ದೇನೆ, ”ಎಂದು ಭಾರತ್ ಜೋಡೋ ಯಾತ್ರೆಯನ್ನು ಉಲ್ಲೇಖಿಸಿದರು.
“ನನ್ನ ಸಾಮಾಜಿಕ ಮಾಧ್ಯಮವನ್ನು ಸಹ ಸಂಪೂರ್ಣವಾಗಿ ಮುಚ್ಚಲಾಗಿದೆ. ಯಾವುದೇ ಮುನ್ಸೂಚನೆಯೇ ಇಲ್ಲದೆ 24/7 ನಿಷೇಧವನ್ನು ಹೇರಲಾಗಿದೆ.ನನ್ನ ಟ್ವಿಟರ್ ನಿಯಂತ್ರಣದಲ್ಲಿದ್ದು, ಯೂಟ್ಯೂಬ್ ಕೂಡ ನಿಯಂತ್ರಣದಲ್ಲಿದೆ. ಆದರೂ ನಾನು ಒಬ್ಬಂಟಿಯಾಗಿಲ್ಲ. ಭಾರತವು ಇನ್ನು ಮುಂದೆ ಮುಕ್ತ ಮತ್ತು ನ್ಯಾಯಯುತ ಪ್ರಜಾಪ್ರಭುತ್ವವನ್ನು ನಡೆಸುತ್ತಿದೆ ಎಂದು ನಾನು ಭಾವಿಸುವುದಿಲ್ಲ. ದೇಶದಲ್ಲಿ ಜಾತಿ ಎಂಬುದು ನಿಜವಾದ ಸಮಸ್ಯೆಯಾಗಿದೆ ಎಂದು ಅದನ್ನು ವರ್ಣಭೇದ ನೀತಿಗೆ ಹೋಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.