ಭಾರತೀಯ ಮಹಿಳೆಯರ ಸರಾಸರಿ ಸಂತಾನ ಪ್ರಮಾಣ ಶೇ. 2ಕ್ಕೆ ಇಳಿಕೆ
ಕೇಂದ್ರ ಆರೋಗ್ಯ ಇಲಾಖೆಯ ಸಮೀಕ್ಷೆಯಲ್ಲಿ ಬಹಿರಂಗ; 2015-2017ರವರೆಗಿನ ಸಮೀಕ್ಷೆಯಲ್ಲಿ ಶೇ. 2.2ರಷ್ಟಿದ್ದ ಪ್ರಮಾಣ
Team Udayavani, Nov 25, 2021, 6:30 AM IST
ನವದೆಹಲಿ: ಕೆಲವೇ ವರ್ಷಗಳ ಹಿಂದೆ ಶೇ. 2.2ರಷ್ಟಿದ್ದ ಭಾರತೀಯ ಮಹಿಳೆಯರ ಸರಾಸರಿ ಸಂತಾನ ಪ್ರಮಾಣವು (ಟಿಎಫ್ಆರ್) ಶೇ. 2ಕ್ಕೆ ಇಳಿದಿದೆ.
ಗರ್ಭ ನಿರೋಧಕತೆಗೆ ಮೊರೆ ಹೋಗುವವರ ಪ್ರಮಾಣ (ಸಿಪಿಆರ್) ಶೇ. 54ರಿಂದ ಶೇ. 67ಕ್ಕೆ ಹೆಚ್ಚಿದೆ ಎಂದು “ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-5’ರ ವರದಿಯಲ್ಲಿ ಹೇಳಲಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ನಡೆಸಿದ್ದ ಈ ಸಮೀಕ್ಷೆಯ ವಿವರಗಳನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.ದೇಶದ ಜನಸಂಖ್ಯೆಯ ವಿಚಾರಕ್ಕೆ ಸಂಬಂಧಿಸಿದಂತೆ ಇದು ಪ್ರಮುಖವಾದ ವಿಚಾರ.
ಒಬ್ಬ ಮಹಿಳೆಯು ತನ್ನ ಜೀವಿತಾವಧಿಯಲ್ಲಿ ಎಷ್ಟು ಮಕ್ಕಳಿಗೆ ಜನ್ಮ ನೀಡಬಲ್ಲಳು ಎಂಬುದರ ಆಧಾರದಲ್ಲಿ ಸರಾಸರಿ ಲೆಕ್ಕಾಚಾರ ಹಾಕುವುದಕ್ಕೆ ಟಿಎಫ್ಆರ್ ಎಂದು ಕರೆಯುತ್ತಾರೆ. 2015 ಹಾಗೂ 2016ರ ಅವಧಿಯಲ್ಲಿ ನಡೆಸಲಾಗಿದ್ದ ಅಧ್ಯಯನದ ಪ್ರಕಾರ ತಯಾರಿಸಲಾಗಿದ್ದ ಟಿಎಫ್ಆರ್-4ರ ವರದಿಯಲ್ಲಿ ಮಹಿಳೆಯರ ಸಂತಾನೋತ್ಪತ್ತಿ ಪ್ರಮಾಣ ಶೇ. 2.2ರಷ್ಟಿರುವುದಾಗಿ ಉಲ್ಲೇಖಿಸಲಾಗಿತ್ತು. ಆದರೆ, 2019 ಹಾಗೂ 2021ರ ಅವಧಿಯಲ್ಲಿ ನಡೆಸಲಾಗಿರುವ ಸಮೀಕ್ಷೆಯ ವರದಿಯಲ್ಲಿ (ಟಿಎಫ್ಆರ್-5) ಇದು ಇಳಿಕೆಯಾಗಿರುವುದು ಕಂಡುಬಂದಿದೆ.
ಇದನ್ನೂ ಓದಿ:ಯುನೈಟೆಡ್ ಕಿಂಗ್‌ಡಮ್ ಸಂಸತ್ತಿನ ಒಳಗೆ ಮಕ್ಕಳಿಗೆ ನಿಷೇಧಕ್ಕೆ ಭಾರೀ ಆಕ್ರೋಶ
ರಕ್ತಹೀನತೆ:
ದೇಶದ 14 ರಾಜ್ಯಗಳಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ರಕ್ತಹೀನತೆ ಸಮಸ್ಯೆ ಹೆಚ್ಚಾಗಿ ಬಾಧಿಸುತ್ತಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಪ್ರಮಾಣ ದೇಶವ್ಯಾಪಿ ಪ್ರಮಾಣದಲ್ಲಿ ಏರಿಕೆಯಾಗಿದೆ.
ಗರ್ಭನಿರೋಧಕತೆಯಲ್ಲಿ ಹೆಚ್ಚಳ
ದೇಶಾದ್ಯಂತ ಗರ್ಭನಿರೋಧಕ ಕ್ರಮಗಳನ್ನು ಅಳವಡಿಸಿಕೊಂಡಿರುವವರ ಸಂಖ್ಯೆ ಗಣನೀಯವಾಗಿ (ಶೇ. 54ರಿಂದ ಶೇ. 67) ಹೆಚ್ಚಿದೆ. ಆದರೆ, ಕುಟುಂಬ ಯೋಜನೆಯ ಉದ್ದೇಶಗಳು ಈಡೇರಿಲ್ಲ,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.