ಇದು ಪ್ರಥಮ ಲಕ್ಷುರಿ ಹಡಗು
Team Udayavani, Oct 20, 2018, 6:00 AM IST
ನವದೆಹಲಿ: ಭಾರತದ ಮೊದಲ ಐಷಾರಾಮಿ ಪ್ರಯಾಣಿಕ ಹಡಗು ಆಂಗ್ರಿಯಾ ಅ.20 ರಂದು ಉದ್ಘಾಟನೆಗೊಳ್ಳಲಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಈ ಹಡಗು ಉದ್ಘಾಟನೆ ಮಾಡಲಿದ್ದು, ಇದು ಮುಂಬೈನಿಂದ ಗೋವಾಗೆ ಪ್ರಯಾಣಿಸಲಿದೆ. ವಾಣಿಜ್ಯ ಕಾರ್ಯಾಚರಣೆ ಅ.24 ರಿಂದ ಆರಂಭ ವಾಗಲಿದೆ. ವಾರಕ್ಕೆ ನಾಲ್ಕು ಪ್ರಯಾಣ ಮಾಡಲಿರುವ ಈ ಹಡಗಿಗೆ ಮರಾಠಾ ಪಡೆಯ ಅಡ್ಮಿರಲ್ ಕನ್ಹೋಜಿ ಆಂಗ್ರೆ ಸ್ಮರಣಾರ್ಥ ಆಂಗ್ರಿಯಾ ಎಂದು ಹೆಸರಿಡಲಾಗಿದೆ. ಇದರಲ್ಲಿ ಸಕಲ ಐಷಾರಾಮಿ ಸೌಕರ್ಯಗಳೂ ಇರಲಿವೆ.
104 ಕೋಣೆಗಳಿದ್ದು, ಡಿಲಕ್ಸ್ ಹಾಗೂ ಲಕ್ಷುರಿ ಕೋಣೆಗಳನ್ನು ಇದು ಹೊಂದಿರಲಿದೆ. ಅಷ್ಟೇ ಅಲ್ಲ ನೀರಿನ ಅಡಿಯೇ ತೆರಳಿದಂತೆ ಭಾಸವಾಗುವ ಅಂಡರ್‌ವಾಟರ್ ಲಕ್ಷುರಿ ಕೋಣೆಗಳೂ ಇದರಲ್ಲಿವೆ. ಎರಡು ರೆಸ್ಟೋ ರೆಂಟ್‌ಗಳು, ಆರು ಬಾರ್‌ಗಳು, ಈಜುಕೊಳ ಹಾಗೂ ನೀರಿನ ಮಟ್ಟಕ್ಕಿಂತ ಕೆಳಗೆ ಸ್ಪಾ ಇರಲಿದೆ. ಒಟ್ಟು 399 ಪ್ರಯಾಣಿಕರನ್ನು ಇದು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿದೆ. ಇದರ ಟಿಕೆಟ್ ಬೆಲೆ 6 ಸಾವಿರ ರೂ. ಇಂದ 10 ಸಾವಿರ ರೂ.ವರೆಗೆ ಇರಲಿದೆ. ಸಂಜೆ 4.30 ಕ್ಕೆ ಮುಂಬೈನಿಂದ ಹೊರಡುವ ಆಂಗ್ರಿಯಾ, ಮರುದಿನ ಬೆಳಗ್ಗೆ 8 ಗಂಟೆಗೆ ಗೋವಾ ತಲುಪಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.