ಸೇನಾ ಪ್ರಾಣಿಗಳಿಗೂ ಸ್ಮಾರಕ ; ರಕ್ಷಣಾ ಇಲಾಖೆಯಿಂದ ಶೀಘ್ರ ಅನುಮೋದನೆ?
Team Udayavani, Jan 24, 2020, 7:57 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಹೊಸದಿಲ್ಲಿ: ಯುದ್ಧಗಳಲ್ಲಿ ಹುತಾತ್ಮರಾದ, ಕಾರ್ಯಾಚರಣೆಗಳಲ್ಲಿ ಪ್ರಾಣಾರ್ಪಣೆ ಮಾಡಿದ ಯೋಧರಿಗಾಗಿ ಸ್ಮಾರಕ ನಿರ್ಮಾಣ ಸಹಜ. ಇದೀಗ ಸೇನೆಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಪ್ರಾಣಾರ್ಪಣೆ ಮಾಡಿದ ಪ್ರಾಣಿಗಳಿಗೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಮೊತ್ತಮೊದಲ ಸ್ಮಾರಕ ನಿರ್ಮಾಣವಾಗಲಿದೆ.
ಕಾರ್ಗಿಲ್ ಯುದ್ಧ ಮತ್ತು ಉಗ್ರ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಜೀವ ಕಳೆದುಕೊಂಡ ಹೇಸರಗತ್ತೆಗಳು, ಕುದುರೆಗಳು, 300 ಶ್ವಾನಗಳು, 350 ಮಂದಿ ಹ್ಯಾಂಡ್ಲರ್‌ಗಳ ಕರ್ತವ್ಯಗಳನ್ನು ಅಲ್ಲಿ ದಾಖಲೀಕರಿಸಿ, ಸ್ಮರಿಸುವ ಪ್ರಯತ್ನ ಇದಾಗಿದೆ. ಸೇನೆಯ ವಿವಿಧ ವಿಭಾಗಗಳಲ್ಲಿ ಮಾನವರಂತೆಯೇ ನಿಸ್ಪೃಹೆಯಿಂದ ದೇಶ ಸೇವೆ ಮಾಡಿದ ಇತರ ಜೀವಿಗಳನ್ನು ಸ್ಮರಿಸುವ ವಿಶೇಷ ಕರ್ತವ್ಯದ ನಿಟ್ಟಿನಲ್ಲಿ ಅದನ್ನು ಕೈಗೆತ್ತಿಕೊಳ್ಳಲಾಗಿದೆ.
ಮೀರತ್‌ನ ರೆಮೌಂಟ್ ಆ್ಯಂಡ್ ವೆಟರ್ನರಿ ಕಾರ್ಪ್ಸ್ (ಆರ್‌ವಿಸಿ) ಸೆಂಟರ್ ಆ್ಯಂಡ್ ಕಾಲೇಜಿನಲ್ಲಿ ಅದು ನಿರ್ಮಾಣವಾಗಲಿದೆ. ಇದೇ ಕೇಂದ್ರದಲ್ಲಿ ಸೇನೆಯ ಬಳಕೆಗಾಗಿ ಇರುವ ಶ್ವಾನ, ಕುದುರೆ, ಹೇಸರಗತ್ತೆಗಳನ್ನು ಬೆಳೆಸಿ, ತರಬೇತಿ ನೀಡಲಾಗುತ್ತದೆ. ಪ್ರಸ್ತಾವಿತ ಸ್ಮಾರಕದ ಬಗ್ಗೆ ರಕ್ಷಣಾ ಇಲಾಖೆ ಶೀಘ್ರದಲ್ಲಿಯೇ ಅನುಮೋದನೆ ನೀಡುವ ಸಾಧ್ಯತೆ ಇದೆ. ಹಿರಿಯ ಅಧಿಕಾರಿ ಮಾತನಾಡಿ, ಉದ್ದೇಶಿತ ಯೋಜನೆ ಹೊಸದಿಲ್ಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಂತೆ ಇರಲಿದೆ. ಆದರೆ ಸಣ್ಣ ಪ್ರಮಾಣದಲ್ಲಿ ಇರಲಿದೆ ಎಂದಿದ್ದಾರೆ.
ಸ್ಮಾರಕದಲ್ಲಿ ಕೆತ್ತಲಾಗುವ ಪ್ರಾಣಿಗಳ ಪೈಕಿ ಮಾನಸಿ ಎಂಬ ಲ್ಯಾಬ್ರಡಾರ್ ತಳಿಯ ಶ್ವಾನ ಪ್ರಧಾನವಾಗಿದೆ. ಅದಕ್ಕೆ ತರಬೇತಿ ಮತ್ತು ಆರೈಕೆ ಮಾಡುತ್ತಿದ್ದ ಬಶೀರ್ ಅಹ್ಮದ್ ವಾರ್‌ಗೂ ಈಗಾಗಲೇ ಮರಣೋತ್ತರ ಗೌರವ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Sabarimala: ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.