![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Dec 13, 2021, 9:47 AM IST
ಐಲಾಟ್ (ಇಸ್ರೇಲ್): ಸೌಂದರ್ಯ ಸ್ಪರ್ಧೆ ಮಿಸ್ ಯುನಿವರ್ಸ್ ನಲ್ಲಿ ಭಾರತದ ಚೆಲುವೆ ಹರ್ನಾಜ್ ಸಂಧು ಗೆಲುವು ಸಾಧಿಸಿದ್ದಾರೆ. ಈ ಮೂಲಕ 21 ವರ್ಷಗಳ ಬಳಿಕ ಮಿಸ್ ಯುನಿವರ್ಸ್ ಕಿರೀಟ ಭಾರತದ ಬೆಡಗಿಯ ಪಾಲಾಗಿದೆ.
ಇಸ್ರೇಲ್ ನ ಐಲಾಟ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ಅವರು ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸ್ಪರ್ಧಿಗಳನ್ನು ಸೋಲಿಸಿದರು. ಮೆಕ್ಸಿಕೋದ ಮಾಜಿ ವಿಶ್ವ ಸುಂದರಿ 2020 ರ ಆಂಡ್ರಿಯಾ ಮೆಜಾ ಅವರು ಸಮಾರಂಭದಲ್ಲಿ ಹರ್ನಾಜ್ ಸಂಧುಗೆ ಕಿರೀಟವನ್ನು ತೊಡಿಸಿದರು.
ಮೊದಲ ಮತ್ತು ಎರಡನೇ ರನ್ನರ್ ಅಪ್ ಕ್ರಮವಾಗಿ ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರ ಪಾಲಾಯಿತು.
ಇದನ್ನೂ ಓದಿ:ಡಿ.31ಕ್ಕೆ ರಕ್ಷಿತ್ ನಟನೆಯ ಚಾರ್ಲಿ ಬರಲ್ಲ
ಹರ್ನಾಜ್ ಗಿಂತ ಮೊದಲು, ಇಬ್ಬರು ಭಾರತೀಯರು ಮಾತ್ರ ಮಿಸ್ ಯುನಿವರ್ಸ್ ಕಿರೀಟವನ್ನು ಗೆದ್ದಿದ್ದಾರೆ. 1994ರಲ್ಲಿ ಸುಶ್ಮಿತಾ ಸೇನ್ ಮತ್ತು 2000ನೇ ಇಸವಿಯಲ್ಲಿ ಲಾರಾ ದತ್ತಾ ಮಿಸ್ ಯುನಿವರ್ಸ್ ಕಿರೀಟ ಗೆದ್ದುಕೊಂಡಿದ್ದರು.
The new Miss Universe is…India!!!! #MISSUNIVERSE pic.twitter.com/DTiOKzTHl4
— Miss Universe (@MissUniverse) December 13, 2021
ಅಕ್ಟೋಬರ್‌ನಲ್ಲಿ ಹರ್ನಾಜ್ ಮಿಸ್ ಯೂನಿವರ್ಸ್ ಇಂಡಿಯಾ 2021 ಕಿರೀಟವನ್ನು ಗೆದ್ದುಕೊಂಡಿದ್ದರು. 21 ವರ್ಷದ ಸೌಂದರ್ಯ ರಾಣಿ ಪ್ರಸ್ತುತ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.
View this post on Instagram
ಹರ್ನಾಜ್ ಸಂಧು ಅವರು ಕೇವಲ 17 ವರ್ಷದವರಾಗಿದ್ದಾಗ ತಮ್ಮ ಸೌಂದರ್ಯ ಸ್ಪರ್ಧೆಯ ಪ್ರಯಾಣವನ್ನು ಪ್ರಾರಂಭಿಸಿದರು. ಅವರು ಈ ಹಿಂದೆ ಮಿಸ್ ದಿವಾ 2021, ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2019 ಕಿರೀಟವನ್ನು ಪಡೆದಿದ್ದಾರೆ ಮತ್ತು ಅವರು ಫೆಮಿನಾ ಮಿಸ್ ಇಂಡಿಯಾ 2019 ರಲ್ಲಿ ಟಾಪ್ 12 ರಲ್ಲಿ ಸ್ಥಾನ ಪಡೆದಿದ್ದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.