ಭಾರತೀಯರ ಜೀವಿತಾವಧಿ 2 ವರ್ಷ ಹೆಚ್ಚಳ: ಈಗ ಸರಾಸರಿ ಆಯಸ್ಸು 69.7 ವರ್ಷ
; 4 ದಶಕಗಳಲ್ಲಿ 20 ವರ್ಷದಷ್ಟು ಏರಿಕೆ
Team Udayavani, Jun 14, 2022, 7:25 AM IST
ಹೊಸದಿಲ್ಲಿ: ಭಾರತೀಯರ ಜನನ ಸಮಯದ ಜೀವಿತಾವಧಿಗೆ 2015-19ರ ನಡುವಣ ನಾಲ್ಕು ವರ್ಷಗಳ ಅವಧಿಯಲ್ಲಿ 2ವರ್ಷ ಸೇರ್ಪಡೆ ಯಾಗಿದ್ದು, ಜೀವಿತಾವಧಿಯು ಸರಾಸರಿ 69.7 ವರ್ಷಗಳಿಗೆ ಏರಿಕೆಯಾಗಿದೆ. ಆದರೆ ಇದು ಜಾಗತಿಕ ಸರಾಸರಿಯಾಗಿರುವ 72.6 ವರ್ಷ ಗಳಿಗಿಂತ ಬಹಳ ಕಡಿಮೆಯಿದೆ.
ಇತ್ತೀಚೆಗೆ ಬಿಡುಗಡೆಯಾದ “ಅಬ್ರಿಡ್ಜ್ಡ್ ಲೈಫ್ ಟೇಬಲ್ಸ್ 2015-19′ ವರದಿಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ಭಾರತೀಯರ ಜೀವಿತಾವಧಿ 2 ವರ್ಷ ಹೆಚ್ಚಳವಾಗಲು ಬರೋಬ್ಬರಿ 10 ವರ್ಷಗಳು ಬೇಕಾದವು ಎಂದು ವರದಿ ಹೇಳಿದೆ. ಜನನ ಸಮಯದ ಜೀವಿತಾವಧಿ ದೊಡ್ಡ ಮಟ್ಟಿನ ಏರಿಕೆ ಕಾಣದಿರಲುಜನನ ಸಮಯದಲ್ಲಿ ಶಿಶು ಮರಣ ಮತ್ತು 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಹೆಚ್ಚಿರುವುದೇ ಕಾರಣ.
ಭಾರತದ ಗ್ರಾಮೀಣ ಪ್ರದೇಶಗಳ ಜನರ ಸರಾಸರಿ ಜೀವಿತಾವಧಿ 68.3 ವರ್ಷ, ನಗರ ಪ್ರದೇಶಗಳಲ್ಲಿ ಈ ಪ್ರಮಾಣ 73 ವರ್ಷ. ರಾಷ್ಟ್ರೀಯ ಮಟ್ಟದಲ್ಲಿ ಪುರುಷರ ಜೀವಿತಾವಧಿ 68.4 ವರ್ಷಗಳಾದರೆ, ಮಹಿಳೆಯರದ್ದು 71.1 ವರ್ಷಗಳಾಗಿವೆ. 1970-75ರಲ್ಲಿ ಭಾರತೀಯರ ಜನನ ಸಮಯದ ಜೀವಿತಾವಧಿ 49.7 ವರ್ಷ ಗಳಾಗಿದ್ದವು. 2015-19ರ ಅವಧಿಯಲ್ಲಿ ಇದು 69.7 ವರ್ಷಗಳಿಗೇರಿದೆ. 4 ದಶಕಗಳಲ್ಲಿ ಜೀವಿತಾವಧಿಯು 20 ವರ್ಷಗಳಷ್ಟು ಹೆಚ್ಚಳ ಕಂಡಿದೆ. ರಾಜ್ಯದಲ್ಲಿ ಪುರುಷರ ಜೀವಿತಾವಧಿ: 67.9 ವರ್ಷ, ಮಹಿಳೆಯರ ಜೀವಿತಾವಧಿ: 71.3 ವರ್ಷ, ಒಟ್ಟಾರೆ ಜೀವಿತಾವಧಿ ಸರಾಸರಿ: 69.5.
ದಿಲ್ಲಿಯಲ್ಲಿ ಹೆಚ್ಚು
ದೇಶದಲ್ಲಿ ಅತೀ ಹೆಚ್ಚು ಜೀವಿತಾವಧಿ ಇರುವ ರಾಜ್ಯವೆಂದರೆ ದಿಲ್ಲಿ. ಇಲ್ಲಿ ಸರಾಸರಿ ಜೀವಿತಾವಧಿ 75.9 ವರ್ಷಗಳು. 2ನೇ ಸ್ಥಾನದಲ್ಲಿ ಕೇರಳ ಇದ್ದು, ಇಲ್ಲಿನ ಜನರ ಜೀವಿತಾವಧಿ 75.2 ವರ್ಷಗಳು. ಜನರ ಆಯಸ್ಸು ಕಡಿಮೆಯಿರುವ ರಾಜ್ಯವೆಂದರೆ ಛತ್ತೀಸ್‌ಗಢ-65.3 ವರ್ಷಗಳು.
ಜಾಗತಿಕ ಸ್ಥಿತಿಗತಿ
ಅತೀ ಹೆಚ್ಚು ಜೀವಿತಾವಧಿ ಇರುವ ದೇಶ ಜಪಾನ್: 85 ವರ್ಷಗಳು ನಾರ್ವೆ, ಆಸ್ಟ್ರೇಲಿಯಾ, ಸ್ವಿಜರ್ಲೆಂಡ್, ಐಸ್‌ಲ್ಯಾಂಡ್: 83 ವರ್ಷ ಭಾರತ: 69.7 ವರ್ಷಗಳು ಬಾಂಗ್ಲಾದೇಶ: 72.1 ವರ್ಷಗಳು ನೇಪಾಲ: 70.5 ವರ್ಷಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.