ಚುನಾವಣ ಸುಧಾರಣೆಗೆ ಅನ್ವರ್ಥರಾಗಿದ್ದ ಶೇಷನ್
ಚುನಾವಣ ಆಯೋಗಕ್ಕೆ ಇದ್ದ ಸ್ವಾಯತ್ತೆಯನ್ನು ನಿಜಾರ್ಥದಲ್ಲಿ ತೋರ್ಪಡಿಸಿದ ದಕ್ಷ ಅಧಿಕಾರಿ
Team Udayavani, Nov 11, 2019, 2:14 AM IST
ಚೆನ್ನೈ: ಕೇಂದ್ರದಲ್ಲಿ ಪಿ.ವಿ. ನರಸಿಂಹ ರಾವ್ ಸರಕಾರವಿದ್ದಾಗ ಭಾರತದ ಮುಖ್ಯ ಚುನಾವಣ ಆಯುಕ್ತರ ಹುದ್ದೆಗೆ ನೇಮಕವಾದರು. ಅವರ ಅವಧಿಯಲ್ಲಿಯೇ ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಚುನಾವಣೆ ವೇಳೆ, ರಾಜಕೀಯ ನೇತಾರರು, ಪಕ್ಷಗಳು, ಪೋಸ್ಟರ್, ಬ್ಯಾನರ್ ಮುಂತಾದ ಪ್ರಚಾರ ಕೈಗೊಳ್ಳುವುದನ್ನು ನಿಷೇಧಿಸಿದ ಹೆಗ್ಗಳಿಕೆ ಅವರದ್ದು.
1932ರಲ್ಲಿ ಕೇರಳದ ಪಾಲಕ್ಕಾಡ್‌ನಲ್ಲಿ ಡಿ. 15ರಂದು ಜನಿಸಿದ್ದ ಅವರು, ಭಾರತೀಯ ಆಡಳಿತ ಸೇವೆಗೆ ತಮಿಳುನಾಡು ಕೇಡರ್‌ನಿಂದ 1955ರಲ್ಲಿ ಸೇರ್ಪಡೆಗೊಂಡಿದ್ದರು. ತಮಿಳು ನಾಡು ಸರಕಾರದ ನಾನಾ ಇಲಾಖೆಗಳಲ್ಲಿ ಉನ್ನತ ಜವಾಬ್ದಾರಿಗಳನ್ನು ನಿಭಾಯಿಸಿದ ಅವರು, ಆನಂತರ ಕೇಂದ್ರದಲ್ಲಿ ಕೆಲವಾರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಕರ್ನಾಟಕದಲ್ಲಿ ರಾಜ್ಯಪಾಲರಾಗಿದ್ದ ವಿ.ಎಸ್. ರಮಾದೇವಿಯವರ ಅನಂತರ, ಕೇಂದ್ರದಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದರು.
ಖದರ್ ತೋರಿಸಿದ್ದರು: ಶೇಷನ್ ಅವರ ಅವಧಿಯಲ್ಲಿಯೇ ಅರ್ಹ ಮತದಾರರಿಗೆ ಗುರುತಿನ ಚೀಟಿ ಜಾರಿಗೊಳಿಸಲಾಯಿತು. ಚುನಾವಣೆ ನಾಮಪತ್ರ ಸಲ್ಲಿಕೆಯ ವೇಳೆ ಅಭ್ಯರ್ಥಿಗಳು, ಪಕ್ಷಗಳು ಪಾಲಿಸಬೇಕಾದ ನಿಬಂಧನೆಗಳು ಸೇರಿದಂತೆ, ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಿಂದ ಹಿಡಿದು, ನಾಯಕರ ಬಹಿರಂಗ ಪ್ರಚಾರಗಳು, ಅವರ ಭಾಷಣಗಳು, ನಡೆ- ನುಡಿಗಳು, ಖರ್ಚು-ವೆಚ್ಚಗಳು ಮುಂತಾದ ವಿಚಾರಗಳಲ್ಲಿ ಬಿಗಿ ನಿಯಮಗಳನ್ನು ಜಾರಿಗೊಳಿಸಿದರು. ಜತೆಗೆ ಮತದಾನದ ದಿನದಂದು ಕೈಗೊಳ್ಳಬೇಕಾದ ಭದ್ರತೆಗಳು ಹಾಗೂ ಪಾಲಿಸಬೇಕಾದ ನಿಯಮಗಳ ಬಗ್ಗೆಯೂ ಮಾರ್ಗಸೂಚಿಗಳನ್ನು ಜಾರಿಗೊಳಿಸಿ, ಚುನಾವಣಾ ಆಕ್ರಮಗಳಿಗೆ ಕಡಿವಾಣ ಹಾಕಿದರು.
ಈ ಮೂಲಕ ದೇಶದೆಲ್ಲೆಡೆ, ಶಾಂತಿಯುತ, ಸ್ವಚ್ಛವಾದ ಮತದಾನ ನಡೆಯುವಂಥ ವಾತಾವರಣ ಸೃಷ್ಟಿಸಿದರು. ಹಾಗಾಗಿಯೇ ಅವರು ‘ಪ್ರಜಾತಂತ್ರ ವ್ಯವಸ್ಥೆಯ ಸ್ತಂಭ’ ಎಂಬ ಮೆಚ್ಚುಗೆಗೂ ಪಾತ್ರರಾಗಿದ್ದರು. ಅವರ ಬಳಿಕ ದೇಶದ ಚುನಾವಣಾ ವ್ಯವಸ್ಥೆಯ ಅಧ್ಯಯನಕ್ಕೆ ವಿದೇಶಗಳಿಂದ ಆಗಮಿಸಿ, ಅವರು ಜಾರಿ ಮಾಡಿದ್ದ ಸುಧಾರಣೆಗಳನ್ನು ತಮ್ಮ ದೇಶದಲ್ಲಿಯೂ ಜಾರಿಗೊಳಿಸಿದ್ದರು.
1997ರಲ್ಲಿ ನಡೆದಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್‌ನಿಂದ ಕೆ.ಆರ್. ನಾರಾಯಣನ್ ಸ್ಪರ್ಧಿಸಿದ್ದರು. ಬೆಂಬಲ ಕೋರಿ ಶೇಷನ್ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಾಯಕರಿಗೆ ಔತಣಕೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಅವರೇ ಬಡಿಸಲು ನಿಂತಿದ್ದ ಫೋಟೋ ಪ್ರಮುಖವಾಗಿ ಪ್ರಕಟವಾಗಿತ್ತು.
ಚುನಾವಣೆಯೇ ರದ್ದಾಗಿತ್ತು!
ಅತ್ಯಂತ ಜಾಣ್ಮೆಯ ಆಡಳಿತಗಾರರಾಗಿದ್ದ ಅವರು, ಚುನಾವಣಾ ಆಯುಕ್ತರಾಗಿ ಹೊಸದರಲ್ಲೇ ಆಯುಕ್ತರ ಖದರ್ ಹೇಗಿರುತ್ತದೆ ಎಂದು ತೋರ್ಪಡಿಸಿದ್ದರು. ಮಧ್ಯಪ್ರದೇಶದ ಆಗಿನ ರಾಜ್ಯಪಾಲರೊಬ್ಬರು, ತಮ್ಮ ಪುತ್ರನ ಪರ ಪ್ರಚಾರಕ್ಕೆ ಇಳಿದಿದ್ದ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಚುನಾವಣೆಯನ್ನು ರದ್ದುಗೊಳಿಸುವ ಮೂಲಕ ಬಿಸಿ ಮುಟ್ಟಿಸಿದ್ದರು ಶೇಷನ್. ಉತ್ತರ ಪ್ರದೇಶದಲ್ಲಿ ಚುನಾವಣಾ ಬಹಿರಂಗ ಪ್ರಚಾರ ಅಂತ್ಯಗೊಂಡ ಅನಂತರವೂ ಪ್ರಚಾರ ರ್ಯಾಲಿಯೊಂದರಲ್ಲಿ ಭಾಗವಹಿಸಿದ್ದ ಅಲ್ಲಿನ ಸಚಿವರೊಬ್ಬರನ್ನು ಬಲವಂತವಾಗಿ ವೇದಿಕೆಯಿಂದ ಕೆಳಗಿಳಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್ ಬೆಳ್ಳುಳ್ಳಿ ವಶಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Dinner Politics: ಮುಖ್ಯಮಂತ್ರಿ ಊಟಕ್ಕೆ ಹೋದ್ರೆ ತಪ್ಪೇನಿದೆ?: ಸಚಿವ ಎಂ.ಬಿ.ಪಾಟೀಲ್
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.