ಹೊಸ ರೀತಿಯ ಮಂಡಲ ಹಾವು ಪತ್ತೆ
Team Udayavani, May 11, 2019, 6:46 AM IST
ಇಟಾನಗರ: ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ವಿಶಿಷ್ಟ ವಿಧದ ಮಂಡಲ ಹಾವು ಪತ್ತೆಯಾಗಿದೆ. ಇದೇ ಮೊದಲ ಬಾರಿಗೆ ಈ ವಿಧದ ಹಾವು ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಅಶೋಕ್ ಕ್ಯಾಪ್ಟನ್ ಹೇಳಿದ್ದಾರೆ. ಈ ಶೋಧದ ಬಗ್ಗೆ ವಿವರವನ್ನು ರಷ್ಯಾದ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಭಾರತದಲ್ಲಿ ಈವರೆಗೆ ನಾಲ್ಕು ವಿಧದ ಮಂಡಲ ಹಾವುಗಳಿದ್ದವು. ಮಲಬಾರ್, ಹಪ್ಪಟೆ, ಕುದುರೆಲಾಳ ಮಂಡಲ ಹಾವು ಹಾಗೂ ಹಿಮಾಲಯ ಮಂಡಲ ಹಾವುಗಳಿ ದ್ದವು. ಈಗ ಕೆಂಪು ಕಂದು ಮಂಡಲ ಹಾವು ಕಂಡುಬಂದಿದೆ. ಆದರೆ ಈ ಹಾವಿನ ಇತಿ ಹಾಸ ಹಾಗೂ ಇತರ ವಿವರಗಳು ನಮಗೆ ಕಂಡುಬಂದಿಲ್ಲ. ಯಾಕೆಂದರೆ ಸದ್ಯ ಕೇವಲ ಒಂದು ಗಂಡು ಹಾವು ಕಂಡು ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಶೋಧ ನಡೆಯಬೇಕಿದೆ ಎಂದು ಅಶೋಕ್ ಕ್ಯಾಪ್ಟನ್ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.