ಬ್ರೆಜಿಲ್ ತಲುಪಿದ ಭಾರತದ ಕೋವಿಡ್ ‘ಸಂಜೀವಿನಿ’
20 ಲಕ್ಷ ಗುತ್ತಿಗೆ ಪ್ರಮಾಣದ ಲಸಿಕೆಗಳು ಭಾರತದಿಂದ ಬ್ರೆಜಿಲ್‌ಗೆ
Team Udayavani, Jan 23, 2021, 11:52 AM IST
ನವದೆಹಲಿ: ಭಾರತ ಮೂಲದ ಕೋವಿಡ್ -19 ಲಸಿಕೆಗಳ ಸುಮಾರು 20 ಲಕ್ಷ ಗುತ್ತಿಗೆ ಪ್ರಮಾಣದ ಲಸಿಕೆಗಳು ಭಾರತದಿಂದ ಬ್ರೆಜಿಲ್‌ಗೆ ತಲುಪಿದೆ ಎಂದು ಟ್ವೀಟ್ ನಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಎಂ ಬೋಲ್ಸನಾರೊ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.
‘ಸಂಜೀವಿನಿ’ ಒಂದು “ಮಾಂತ್ರಿಕ ಮೂಲಿಕೆ” ಹನುಮಂತನು ಆ ಇಡೀ ಸಂಜೀವಿನಿ ಪರ್ವತವನ್ನು ಎತ್ತಿ ತಂದನು ಎಂದು ಬ್ರೆಜಿಲ್ ಅಧ್ಯಕ್ಷರು ರಾಮಾಯಣ ಪ್ರಸಂಗವನ್ನು ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ. “ಜಾಗತಿಕ ಅಡಚಣೆಯನ್ನು ನಿವಾರಿಸುವ ಪ್ರಯತ್ನಕ್ಕೆ ಉತ್ತಮ ಪಾಲುದಾರಿಕೆಯನ್ನು ಹೊಂದಲು ಬ್ರೆಜಿಲ್ ಹೆಮ್ಮೆ ಪಡುತ್ತದೆ. ಭಾರತದಿಂದ ಬ್ರೆಜಿಲ್ ಗೆ ಲಸಿಕೆ ಕಳುಹಿಸಿ ನಮಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು.”
ಇದನ್ನೂ ಓದಿ : ಸ್ಪೋಟಕ ಸಾಗಿಸುವವರನ್ನು ಬಿಟ್ಟು, ಮರಳು ತುಂಬಿದ ಗಾಡಿ ಮಾತ್ರ ವಶಪಡೆಯುತ್ತಾರೆ: ಖಾದರ್ ಆಕ್ರೋಶ
ಬ್ರೆಜಿಲ್ ಅಧ್ಯಕ್ಷರು ‘ಹನುಮಾನ್’ ಮತ್ತು ‘ರಾಮಾಯಣ’ ಕುರಿತು ಉಲ್ಲೇಖಿಸಿದ್ದು ಇದು ಮೊದಲನೇ ಭಾರಿ ಅಲ್ಲ. ಕಳೆದ ವರ್ಷ ಅವರು ಮೋದಿಯವರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಕೋರಿ ಪತ್ರ ಬರೆದಿದ್ದರು ಮತ್ತು ಕೋವಿಡ್ ಸೋಂಕು ನಿವಾರಿಸುವಲ್ಲಿ ಭಾರತದ ಪ್ರಯತ್ನಗಳನ್ನು ಶ್ಲಾಘಿಸಿದ್ದರು.
ಆ ಪತ್ರದಲ್ಲಿ “ಭಗವಾನ್ ರಾಮನ ಸಹೋದರ ಲಕ್ಷ್ಮಣನ ಪ್ರಾಣ ಉಳಿಸಲು ಹನುಮಾನ್ ಹಿಮಾಲಯದಿಂದ ಪವಿತ್ರ ಗಿಡಮೂಲಿಕೆ ಔಷಧಿಯನ್ನು ತಂದಂತೆಯೇ … ಭಾರತ ಮತ್ತು ಬ್ರೆಜಿಲ್ ಈ ಜಾಗತಿಕ ಬಿಕ್ಕಟ್ಟನ್ನು ನಿವಾರಿಸುತ್ತದೆ ಎಂದು ಬರೆದಿದ್ದರು.”
ಇಡೀ ಪ್ರಪಂಚಕ್ಕೆ ಲಸಿಕೆ ರಫ್ತಿಗೆ ಭಾರತ ಮುಂದಾಗಿದೆ, ಬ್ರೆಜಿಲ್ ಹೊರತುಪಡಿಸಿ, ಮೊರಾಕೊ ಶುಕ್ರವಾರ ಲಸಿಕೆಗಳನ್ನು ಪಡೆದುಕೊಳ್ಳುವುದರ ಮೂಲಕ, ಲಸಿಕೆ ಸ್ವೀಕರಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಶೀಘ್ರದಲ್ಲೇ ಸಾಮಗ್ರಿಗಳನ್ನು ಪಡೆಯುವ ನಿರೀಕ್ಷೆಯಿದೆ.ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಎರಡೂ ಭಾರತದಿಂದ 30 ಮಿಲಿಯನ್ ಡೋಸ್ ಲಸಿಕೆಗಳನ್ನು ಪಡೆದಿವೆ. ಮುಂದಿನ ವಾರದಿಂದ ಬಾಂಗ್ಲಾದೇಶಕ್ಕೆ ಲಸಿಕೆಗಳ ಸರಬರಾಜು ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಷೇರು ಆಮಿಷ: ನೂರಾರು ಕೋಟಿ ವಂಚನೆ
ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಆಕ್ಸ್ ಫರ್ಡ್ ಯೂನಿವರ್ಸಿಟಿ-ಅಸ್ಟ್ರಾಜೆನೆಕಾ ಲಸಿಕೆ – ಕೋವಿಶೀಲ್ಡ್‌ನಿಂದ ಜನವರಿಯಲ್ಲಿ ಒಂದು ಮಿಲಿಯನ್ ಡೋಸ್ ಕೋವಿಡ್ -19 ಲಸಿಕೆ ಮತ್ತು ಫೆಬ್ರವರಿಯಲ್ಲಿ 500,000 ಡೋಸ್‌ಗಳನ್ನು ಪಡೆಯುವುದಾಗಿ ದಕ್ಷಿಣ ಆಫ್ರಿಕಾ ಸರ್ಕಾರ ಘೋಷಿಸಿದೆ.
ಕಳೆದ ವಾರ ಭಾರತವು “ನೆರೆಯ ದೇಶಗಳ ಪಾಲುದಾರಿಕೆ” ನೀತಿಯ ಭಾಗವಾಗಿ 7 ದೇಶಗಳಾದ ಭೂತಾನ್ (150,000), ಮಾಲ್ಡೀವ್ಸ್ (100,000), ನೇಪಾಳ (ಒಂದು ಮಿಲಿಯನ್), ಬಾಂಗ್ಲಾದೇಶ (2 ಮಿಲಿಯನ್), ಮ್ಯಾನ್ಮಾರ್ (1.5 ಮೀ), ಸೀಶೆಲ್ಸ್ (50,000), ಮಾರಿಷಸ್ (100,000),ಗಳಿಗೆ ಕೋವಿಡ್ -19 ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದೆ.
ಮಾರಿಷಸ್‌ನಲ್ಲಿ ದೇಶದ ರಾಯಭಾರಿ ನಂದಿನಿ ಸಿಂಗ್ಲಾ ಅವರೊಂದಿಗೆಲಸಿಕೆಗಳನ್ನು ಸ್ವೀಕರಿಸಲು ಪ್ರಧಾನಿ ಪ್ರವೀಂದ್ ಜುಗ್ನಾಥ್ ಅವರು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. “ನಾವು ಭಾರತವನ್ನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇವೆ. ಭಾರತದ ಸ್ನೇಹ ಸಂಬಂಧವನ್ನು ಹೊಂದಿರುವ ದೇಶಗಳಿಗೆ ಪಿಎಂ ಮೋದಿ ಜಿ ಅವರು ಕೋವಿಡ್ -19 ಲಸಿಕೆಯನ್ನು ದಾನ ಮಾಡುತ್ತಿದ್ದಾರೆ. ಮಾರಿಷಸ್ ಕೂಡ ಅಂತಹದರಲ್ಲಿ ಒಂದು ಎಂದರು.”
ಪಿಎಂ ಜುಗ್ನಾಥ್ ಅವರು ಭೂತಾನ್ ದೇಶದ ಪಿಎಂ ಲೋಟೇ ಶೆರಿಂಗ್, ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್, ನೇಪಾಳದ ಪ್ರಧಾನಿ ಕೆಪಿ ಶರ್ಮಾ ಒಲಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತವು ವಿಶ್ವದ 60% ಲಸಿಕೆಗಳನ್ನು ಉತ್ಪಾದಿಸುತ್ತದೆ, ವಿಶ್ವ ಆರೋಗ್ಯ ಸಂಸ್ಥೆ ತನ್ನ 70% ಲಸಿಕೆಗಳನ್ನು ದೇಶದಿಂದ ಪಡೆಯುತ್ತಿದೆ. ಸಾಂಕ್ರಾಮಿಕ ರೋಗದ ಮಧ್ಯೆ ಕಳೆದ ವರ್ಷ, ಭಾರತೀಯ ಸರ್ಕಾರವು 150 ದೇಶಗಳಿಗೆ ಎಚ್‌ಸಿಕ್ಯು ಮತ್ತು ಪ್ಯಾರೆಸಿಟಮಾಲ್ ಅನ್ನು ಕಳುಹಿಸಿತು, ಆ ಮೂಲಕ ವಿಶ್ವದ ಫಾರ್ಮಾಔಷಧದ ರಾಜಧಾನಿಯಾಗಿ ತನ್ನ ಸ್ಥಾನವನ್ನು ಪುನರುಚ್ಚರಿಸಿದೆ.
ಇದನ್ನೂ ಓದಿ : ನೆಗೆಟಿವ್ ಇದ್ದರಷ್ಟೇ ಎಂಟ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.