ನಿರುದ್ಯೋಗ ಪ್ರಮಾಣ ಶೇ.8.3ಕ್ಕೇರಿಕೆ: ಸಿಎಂಐಇ ವರದಿ
ಉದ್ಯೋಗ ದರ ಶೇ.37.1 ಹೆಚ್ಚಳ
Team Udayavani, Jan 2, 2023, 6:50 AM IST
ಹೊಸದಿಲ್ಲಿ: ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಭಾರತದ ನಿರುದ್ಯೋಗ ಪ್ರಮಾಣ ಶೇ.8.3ಕ್ಕೆ ಏರಿಕೆಯಾಗಿದೆ. ನಿರುದ್ಯೋಗ ಇಷ್ಟೊಂದು ಏರಿಕೆಯಾಗಿದ್ದು, 16 ತಿಂಗಳಲ್ಲೇ ಮೊದಲು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(ಸಿಎಂಐಇ) ವರದಿ ಹೇಳಿದೆ.
ರವಿವಾರ ಈ ದತ್ತಾಂಶ ಬಿಡುಗಡೆ ಯಾಗಿದೆ. ನವೆಂಬರ್ ತಿಂಗಳಲ್ಲಿ ದೇಶದ ನಗರ ಪ್ರದೇಶಗಳಲ್ಲಿ ನಿರುದ್ಯೋಗವು ಶೇ.8.96ರಷ್ಟಿತ್ತು. ಡಿಸೆಂಬರ್‌ನಲ್ಲಿ ಅದು ಶೇ.10.09ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣವು ನವೆಂಬರ್‌ನಲ್ಲಿ ಶೇ.7.55 ಇದ್ದಿದ್ದು, ಡಿಸೆಂಬರ್‌ಗೆ ಶೇ.7.44ಕ್ಕೆ ಇಳಿಕೆಯಾಗಿದೆ.
ಗಮನಾರ್ಹ ಅಂಶವೆಂದರೆ ಡಿಸೆಂಬರ್ ತಿಂಗಳಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣವು ಶೇ.37.1ರಷ್ಟು ಹೆಚ್ಚಳವಾಗಿದ್ದು, 2022ರ ಜನವರಿ ಅನಂತರ ಇಷ್ಟೊಂದು ಏರಿಕೆಯಾಗಿದ್ದು ಇದೇ ಮೊದಲು ಎಂದೂ ವರದಿ ಹೇಳಿದೆ.
ಶೇ.11 ಕುಸಿದ ರೂ.!
ಡಾಲರ್ ಎದುರು ರೂಪಾಯಿ ಮೌಲ್ಯ ಕಳೆದ ವರ್ಷ ಶೇ.11ರಷ್ಟು ಕುಸಿತ ಕಂಡಿತ್ತು. 2013ರ ಬಳಿಕ ರೂಪಾಯಿಯ ಕಳಪೆ ಸಾಧನೆ ಇದು. ಅಲ್ಲದೇ ಏಷ್ಯಾದ ಕರೆನ್ಸಿಗಳ ಪೈಕಿ ಅತೀ ಹೆಚ್ಚು ಕುಸಿತ ದಾಖಲಿಸಿದ ಕರೆನ್ಸಿ ಎಂಬ ಕುಖ್ಯಾತಿಗೂ ರೂಪಾಯಿ ಪಾತ್ರವಾಗಿದೆ. 2021ರ ಅಂತ್ಯದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 74.29 ರೂ. ಆಗಿತ್ತು. 2022ರ ಡಿಸೆಂಬರ್ ಅಂತ್ಯಕ್ಕೆ ಇದು 82.61 ರೂ. ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.