ಢಾಕಾ ಆಗಸ: ಕೂದಲೆಳೆಯಲ್ಲಿ ತಪ್ಪಿದ ಇಂಡಿಗೋ-ಏರ್ ಡೆಕ್ಕನ್ ಢಿಕ್ಕಿ
Team Udayavani, May 11, 2018, 5:38 PM IST
ಮುಂಬಯಿ : ಕಳೆದ ಮೇ 2ರಂದು ಢಾಕಾ ವಾಯು ಪ್ರದೇಶದಲ್ಲಿ ಹಾರಾಟದಲ್ಲಿದ್ದ ಇಂಡಿಗೋ ಮತ್ತು ಏರ್ ಡೆಕ್ಕನ್ ಪ್ರಯಾಣಿಕರ ವಿಮಾನಗಳು ಅಪಾಯಕಾರಿ ಎನಿಸುವಷ್ಟು ಪರಸ್ಪರ ನಿಕಟಕ್ಕೆ ಬಂದಾಗ ಸ್ವಯಂಚಾಲಿತವಾಗಿ ನೀಡಲ್ಪಟ್ಟ ಎಚ್ಚರಿಕೆಯ ಫಲವಾಗಿ ವಿಮಾನಗಳು ಆಗಸದಲ್ಲಿ ಪರಸ್ಪರ ಢಿಕ್ಕಿಯಾಗುವ ಭಾರೀ ದುರಂತವೊಂದು ಕೂದಲೆಳೆಯಲ್ಲಿ ತಪ್ಪಿತೆಂದು ಮೂಲಗಳು ತಿಳಿಸಿವೆ.
ಮೇ 2ರಂದು ಅಗರ್ತಲಾಕ್ಕೆ ಹೋಗುತ್ತಿದ್ದ ಇಂಡಿಗೋ ವಿಮಾನ ಮತ್ತು ಅಗರ್ತಲಾದಿಂದ ಕೋಲ್ಕತಾಗೆ ಬರುತ್ತಿದ್ದ ಏರ್ ಡೆಕ್ಕನ್ ವಿಮಾನ ಢಾಕಾ ವಾಯು ಪ್ರದೇಶದಲ್ಲಿ ಅತ್ಯಂತ ಅಪಾಯಕಾರಿ ಎನಿಸುವಷ್ಟು ನಿಕಟಕ್ಕೆ ಬಂದಿದ್ದವು. ಆ ಸಂದರ್ಭದಲ್ಲಿ ಸ್ವಯಂಚಾಲಿತ ಎಚ್ಚರಿಕೆ ಗೋಚರವಾಗಿ ಎರಡೂ ವಿಮಾನಗಳ ಪೈಲಟ್‌ಗಳು ಸಂಭವನೀಯ ಮಹಾ ದುರಂತವನ್ನು ತಪ್ಪಿಸುವಲ್ಲಿ ಸಫಲರಾದರು ಎಂದು ಮೂಲಗಳು ಹೇಳಿವೆ.
ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು ವಿಮಾನಾಪಘಾತ ತನಿಖಾ ದಳ (ಎಎಐಬಿ) ಇದರ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.