ಪೈಲಟ್ ಕೊರತೆ : 30 ಇಂಡಿಗೋ ವಿಮಾನ ಯಾನ ರದ್ದು
Team Udayavani, Feb 11, 2019, 3:06 AM IST
ಮುಂಬಯಿ: ವಿಮಾನ ಯಾನಿಗಳಿಗೆ ಮಿತವ್ಯಯಕಾರಿ ಎಂದೇ ಪರಿಗಣಿತವಾಗಿರುವ ಇಂಡಿಗೋ ವಿಮಾನ ಯಾನ ಸಂಸ್ಥೆಯು ದೇಶಾದ್ಯಂತ ತನ್ನ ಹಲವಾರು ವಿಮಾನ ಯಾನಗಳನ್ನು ರದ್ದುಗೊಳಿಸಿದೆ. ಅದರಲ್ಲೂ ಮುಖ್ಯವಾಗಿ ಹೈದ್ರಾಬಾದ್, ಚೆನ್ನೈ, ಜೈಪುರ ಭಾಗಗಳಲ್ಲಿ ಪ್ರಮುಖವಾಗಿ ಈ ಯಾನ ರದ್ದತಿಗಳನ್ನು ನಡೆಸಲಾಗಿದೆ ಎಂದು ತಿಳಿದುಬಂದಿದೆ. ವಾರಾಂತ್ಯದಲ್ಲಿ ಈ ಯಾನ ರದ್ದತಿ ನಡೆದಿದ್ದು ಸೋಮವಾರವೂ ಸಹ ಸರಿಸುಮಾರು 30 ಇಂಡಿಗೋ ವಿಮಾನಗಳ ಯಾನ ರದ್ದುಗೊಳ್ಳುವ ಸಂಭವ ಇದೆ. ಇವುಗಳಲ್ಲಿ ಚೆನ್ನೈ ಮೂಲಕ ಹಾರಾಟ ನಡೆಸುವ ಸುಮಾರು 8, ಹೈದ್ರಾಬಾದ್ ಮೂಲಕ ಹಾರಾಟ ನಡೆಸುವ ಸುಮಾರು 6 ಮತ್ತು ಜೈಪುರದಿಂದ 3 ವಿಮಾನಗಳ ಯಾನ ಸೋಮವಾರ ರದ್ದುಗೊಳ್ಳುವ ಮುನ್ಸೂಚನೆ ದೊರೆತಿದೆ.
ಪೈಲಟ್ ಗಳ ಲಭ್ಯತೆಯ ಕೊರತೆಯೇ ಈ ದಿಢೀರ್ ಯಾನ ರದ್ದತಿಗೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಇಂಡಿಗೋ ಸಂಸ್ಥೆಯ ಹೇಳಿಕೆಯ ಪ್ರಕಾರ ವಾತಾವರಣದಲ್ಲಿನ ಏರುಪೇರಿನ ಕಾರಣದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.