ನೀಲಗಿರಿ, ಖಂಡೇರಿ ಸಮರ್ಪಣೆ
Team Udayavani, Sep 29, 2019, 5:08 AM IST
ಭಾರತೀಯ ನೌಕಾಪಡೆಗಾಗಿ ಅಭಿವೃದ್ಧಿಪಡಿಸಲಾಗಿರುವ “ಖಂಡೇರಿ’ ಮತ್ತು “ನೀಲಗಿರಿ’ ಎಂಬ ಎರಡು ಜಲಾಂತರ್ಗಾಮಿ ನೌಕೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ರಾಷ್ಟ್ರಕ್ಕೆ ಸಮರ್ಪಿಸಿದರು. ಸ್ವದೇಶಿ ತಂತ್ರಜ್ಞಾನದೊಂದಿಗೆ ಜಲಾಂತರ್ಗಾಮಿಗಳನ್ನು ಸಿದ್ಧಪಡಿಸುತ್ತಿರುವ 8 ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ಎರಡು ಹೊಸ ನೌಕೆಗಳ ಸೇರ್ಪಡೆಯಿಂದ ಭಾರತೀಯ ನೌಕಾಪಡೆಯ ಕರಾವಳಿ ಕಣ್ಗಾವಲಿಗೆ ಹೆಚ್ಚು ಶಕ್ತಿ ಒದಗಿದೆ.
ನೀಲಗಿರಿ
ಬ್ರಿಟಿಷ್ ಜಲಾಂತರ್ಗಾಮಿ “ಲಿಯಾಂಡರ್’ನ ತಂತ್ರಜ್ಞಾನ ಎರವಲು ಪಡೆದು ನಿರ್ಮಿಸಲಾಗಿರುವ ಮೊದಲ ಭಾರತೀಯ ಸಮರ ನೌಕೆಯಿದು. “ಲಿಯಾಂಡರ್’ ಆಧರಿಸಿ ಒಟ್ಟು 6 ನೌಕೆ ನಿರ್ಮಿಸಲಾಗಿತ್ತು. ಅವೆಲ್ಲವೂ ಈಗ ನಿವೃತ್ತಿಗೊಂಡಿವೆ. ಮತ್ತೆ 7 ನೌಕೆ ನಿರ್ಮಿಸಲಾಗುತ್ತಿದ್ದು, ನೀಲಗಿರಿ ಮೊದಲನೆಯದು.
113ಮೀ.:ಒಟ್ಟು ಉದ್ದ
2,682ಟನ್ : ನೌಕೆಯ ತೂಕ
4: ನೌಕೆಯ ಎಂಜಿನ್‌ಗಳು
28ನಾಟಿಕಲ್ ಮೈಲು: ಸಾಗಬಲ್ಲ ಗರಿಷ್ಠ ವೇಗ (ಪ್ರತಿ ತಾಸಿಗೆ)
4,000 ನಾಟಿಕಲ್ ಮೈಲು: ಒಮ್ಮೆ ಇಂಧನ ಭರ್ತಿ ಮಾಡಿದರೆ ಸಾಗಬಲ್ಲ ಗರಿಷ್ಠ ದೂರ.
ವ್ಯವಸ್ಥೆಗಳು: ಸರ್ಪೆಸ್ , ನ್ಯಾವಿಗೇಶನ್ ರಾಡಾರ್, 2 ವೈಕರ್ಸ್ 115 ಎಂಎಂ ಗನ್, 4 ಎ.ಕೆ. 230, 300 ಎಂಎಂ ಗನ್, 2 ಒಯೆರಿಕೊನ್ 20 ಎಂಎಂ ಗನ್, 2 ಟ್ರಿಪಲ್ ಐಎಲ್‌ಎಎಸ್ ಎರಡು 324 ಎಂಎಂ ಟಾಪೆìಡೊ, ಎನ್‌ಎಸ್‌ಟಿ 58 ಟಾರ್ಪೆಡೊ.
ಏರ್‌ಕ್ರಾಫ್ಟ್: ಎಚ್‌ಎಎಲ್ ಚೇತಕ್
ಖಂಡೇರಿ
ಐಎನ್‌ಎಸ್ ಖಂಡೇರಿ ಮಾದರಿ ಯಲ್ಲಿ ಭಾರತ ಈ ಹಿಂದೆಯೂ
ಒಂದು ನೌಕೆಯನ್ನು ಅಭಿವೃದ್ಧಿಪಡಿ ಸಿತ್ತು, ಇದು ಎರಡನೆಯದು. 1968ರ ಡಿಸೆಂಬರ್‌ನಲ್ಲಿ ನೌಕಾ ಪಡೆಯ ಸೇವೆಗೆ ಸೇರ್ಪಡೆಗೊಂಡಿದ್ದ ಮೊದಲ ಖಂಡೇರಿ 1989ರಲ್ಲಿ ನಿವೃತ್ತಿ ಗೊಂಡಿತು. ಈಗ ಹೊಸ “ಖಂಡೇರಿ’ ನೌಕಾಪಡೆ ಸೇರಿದೆ.
67.5 ಮೀ.: ನೌಕೆಯ ಉದ್ದ
12.3 ಮೀ. : ನೌಕೆಯ ಎತ್ತರ
20ನಾಟಿಕಲ್ ಮೈಲು: ನೌಕೆಯ ಗರಿಷ್ಠ ವೇಗ (ಪ್ರತಿ ತಾಸಿಗೆ)
6,500 ನಾಟಿಕಲ್ ಮೈಲು : ಒಮ್ಮೆ ಇಂಧನ ಭರ್ತಿ ಮಾಡಿದರೆ ಸಾಗಬಲ್ಲ ಗರಿಷ್ಠ ದೂರ.
ವ್ಯವಸ್ಥೆ : ಆ್ಯಂಟಿ ಟಾರ್ಪೆಡೊ
ಶಸ್ತ್ರಾಸ್ತ್ರ: ಆರು 533 ಎಂಎಂ ಟಾಪೆìಡೊ ಟ್ಯೂಬ್‌ಗಳು, 39 ಆ್ಯಂಟಿ-ಶಿಪ್ ಕ್ಷಿಪಣಿಗಳು.
ಶತ್ರುತ್ವ ಸಾಧಿಸುತ್ತಿರುವ ನೆರೆಯ ದೇಶದ ಗುಪ್ತ ದಾಳಿ ಗಳಿಂದ ದೇಶವನ್ನು ರಕ್ಷಿಸಲು ಇಂಥ ಜಲಾಂತರ್ಗಾಮಿಗಳ ಅಗತ್ಯವಿದೆ.
– ರಾಜನಾಥ್ ಸಿಂಗ್, ರಕ್ಷಣಾ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.