ಇಂಡೋ-ಬಾಂಗ್ಲಾ ಜಲಸಾರಿಗೆ
Team Udayavani, Sep 6, 2020, 5:00 AM IST
ಅಗರ್ತಲಾ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಒಳನಾಡು ಜಲಸಾರಿಗೆ ಪ್ರಾಯೋಗಿಕವಾಗಿ ಆರಂಭಗೊಂಡಿದೆ. ಬಾಂಗ್ಲಾದೇಶದಿಂದ ಹೊರಟ 50 ಮೆಟ್ರಿಕ್ ಟನ್ ಸಿಮೆಂಟು ಸರಕು ಹೊತ್ತ ದೋಣಿ ತ್ರಿಪುರಾದ ಸೋನಾಮುರ ಬಂದರನ್ನು ತಲುಪಲಿದೆ.
ತ್ರಿಪುರಾಕ್ಕೆ ಆಗಮಿಸುವ ಈ ದೋಣಿಯನ್ನು ಕೇಂದ್ರ ಸಚಿವ ಮನ್‌ಸುಖ್ ಮಾಂಡವಿಯಾ ನವದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಸ್ವಾಗತಿಸಲಿದ್ದಾರೆ. ಇಲ್ಲಿಯ ತನಕ ಭೂಮಾರ್ಗಗಳ ಮೂಲಕ ಈಶಾನ್ಯ ರಾಜ್ಯ ತ್ರಿಪುರಾಕ್ಕೆ ಸರಕು ಸಂಚಾರ ನಡೆಸಲಾಗುತ್ತಿತ್ತು. ಈ ಸಾಗಾಟ ದುಬಾರಿಯಾದ ಕಾರಣ, ಬಾಂಗ್ಲಾ ಬಂದರುಗಳನ್ನು ಬಳಸಿಕೊಂಡು ಒಳನಾಡು ಜಲಮಾರ್ಗಗಳ ಮೂಲಕ ತ್ರಿಪುರಾಕ್ಕೆ ಸರಕು ಸಾಗಿಸಲು ಕೇಂದ್ರ ಸರ್ಕಾರ ಯೋಜಿಸಿತ್ತು.
ಮೇ ತಿಂಗಳಿನಲ್ಲಿ “ಇಂಡೋ- ಬಾಂಗ್ಲಾ ಪ್ರೊಟೊ ಕಾಲ್’ (ಐಬಿಪಿ) ಮಾರ್ಗಗಳಿಗೆ ಸೋನಾಮುರ (ತ್ರಿಪುರಾ)- ದೌಡ್ಕಂಡಿ (ಬಾಂಗ್ಲಾದೇಶ) ಜಲ ಮಾರ್ಗ ವನ್ನು ಸೇರಿಸುವ ಒಪ್ಪಂದಕ್ಕೂ ಉಭಯ ರಾಷ್ಟ್ರಗಳು ಸಹಿಹಾಕಿದ್ದವು.
ಗೋಮತಿ- ಮೇಘನಾ: ಬಾಂಗ್ಲಾದೇಶ ಅಧಿಕಾರಿಗಳ ಸರ್ವೇ ಪ್ರಕಾರ, ಸೋನಾಮುರಾ- ದೌಡ್ಕಂಡಿ ಪ್ರೊಟೊಕಾಲ್ ಮಾರ್ಗ 90 ಕಿ.ಮೀ.ಗಳಲ್ಲಿ 89.5 ಕಿ.ಮೀ. ಬಾಂಗ್ಲಾದೇಶದಲ್ಲಿಯೇ ಬರುತ್ತದೆ. ತ್ರಿಪುರಾದ ಗೋಮತಿ ನದಿ, ಬಾಂಗ್ಲಾದೇಶದ ಮೇಘನಾ ನದಿ ಮೂಲಕ ಭಾರತದ ರಾಷ್ಟ್ರೀಯ ಜಲಮಾರ್ಗಗಳೊಂದಿಗೆ ಸಂಪರ್ಕ ಬೆಸೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.