Indore: ಮೂರನೇ ಪತ್ನಿಯ ಸಂತೋಷಕ್ಕಾಗಿ ತನ್ನ 7 ವರ್ಷದ ಮಗನನ್ನು ಕತ್ತು ಹಿಸುಕಿ ಕೊಲೆಗೈದ ತಂದೆ
Team Udayavani, May 17, 2023, 11:55 AM IST
ಇಂದೋರ್: ತಂದೆಯೊಬ್ಬ ತನ್ನ 7 ವರ್ಷದ ಮಗನನ್ನು ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಪ್ರತೀಕ್ ಮೃತ ಬಾಲಕ.
ಯಾವಗಲೂ ತನ್ನ ಅಜ್ಜ – ಅಜ್ಜಿಯೊಂದಿಗೆ ಮಲಗುತ್ತಿದ್ದ ಪ್ರತೀಕ್ ಗೆ ಭಾನುವಾರ( ಮೇ.14 ರಂದು) ಅಪ್ಪ ಶಶಿಪಾಲ್ ಮುಂಡೆ (26) ಕೂಲರ್ ಇದೆ ನನ್ನ ರೂಮ್ ಅಲ್ಲಿ ಮಲಗು ಎಂದಿದ್ದಾರೆ. ಅಪ್ಪನ ಮಾತಿಗೆ ಖುಷಿಯಿಂದ ಆಯಿತೆಂದು ಪ್ರತೀಕ್ ರೂಮ್ ಗೆ ತೆರಳಿದ್ದಾನೆ. ಮಗ ಮಲಗಿದ ಬಳಿಕ ಟಿವಿಯ ವಾಲ್ಯೂಮ್ ನ್ನು ಜಾಸ್ತಿ ಮಾಡಿ, ಮಗನ ಕತ್ತು ಹಿಸುಕಿ ಕೊಲೆಗೈದಿದ್ದಾನೆ.
ಮಗನನ್ನು ಹತ್ಯೆ ಮಾಡಿದ ಬಳಿಕ ತನ್ನ ಮೂರನೇ ಪತ್ನಿ ಪಾಯಲ್ ಗೆ ವಿಡಿಯೋ ಕಾಲ್ ಮಾಡಿದ್ದಾನೆ. ಆ ಬಳಿಕ ವಿಡಿಯೋವನ್ನು ಪತ್ನಿಗೆ ಕಳುಹಿಸಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮಂಗಳವಾರ ಈ ಸಂಬಂಧ ಶಶಿಪಾಲ್ ಹಾಗೂ ಆತನ ಮೂರನೇ ಪತ್ನಿ ಪಾಯಲ್ ನ್ನು ಪೊಲೀಸರು ಬಂಧಿಸಿದ್ದಾರೆ.
ಮೂರನೇ ಪತ್ನಿಯಾಗಿರುವ ಪಾಯಲ್ ಗೆ ಪ್ರತೀಕ್ ನನ್ನು ನೋಡಿದರೆ ಆಗುತ್ತಿರಲಿಲ್ಲ. ಇದೇ ಕಾರಣದಿಂದ ಒಂದು ನಾನು ಇರಬೇಕು ಇಲ್ಲದಿದ್ರೆ ಆತನನ್ನು ನೀನು ಸಾಯಿಸಬೇಕೆಂದು ಹೇಳಿ ತನ್ನ ಪುಟ್ಟ ಮಗುವಿನೊಂದಿಗೆ ಗಂಡನ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಮಗನನ್ನು ಪ್ಲ್ಯಾನ್ ಮಾಡಿ ಕೊಲೆಗೈದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ನಾನು ಮಗನನ್ನು ಕೊಂದಿದ್ದೇನೆ. ಈಗ ನಿನಗೆ ಯಾರೂ ತೊಂದರೆ ಕೊಡಲ್ಲ ಎಂದು ಹೇಳುವ ವಿಡಿಯೋ ಶಶಿಪಾಲ್ ಮೊಬೈಲ್ ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತನಗೂ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಾಯಲ್ ಹೇಳಿದ್ದಾರೆ. ನನ್ನ ಪತಿಗೆ ತನ್ನ ಏಳು ವರ್ಷದ ಮಗನನ್ನು ಸಾಯಿಸುವಂತೆ ನಾನು ಯಾವತ್ತೂ ಹೇಳಿಲ್ಲ ಎಂದು ಮಾಧ್ಯಮದವರ ಮುಂದೆ ಹೇಳಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.