ಇಂಡೋ-ರಷ್ಯಾ ಸಮರಾಭ್ಯಾಸ
Team Udayavani, Oct 21, 2017, 6:00 AM IST
ನವದೆಹಲಿ: ರಕ್ಷಣಾ ವಲಯದಲ್ಲಿ ಪರಸ್ಪರ ಸಹಕಾರದ ಪ್ರತೀಕವಾಗಿ ಭಾರತ ಹಾಗೂ ರಷ್ಯಾ ದೇಶಗಳು ಇದೇ ಮೊದಲ ಬಾರಿಗೆ 10 ದಿನಗಳ ಜಂಟಿ ಸಮರಾಭ್ಯಾಸವನ್ನು ಶುಕ್ರವಾರದಿಂದ ಆರಂಭಿಸಿವೆ. ರಷ್ಯಾದ ವ್ಲಾದಿವೊಸ್ಟೋಕ್‌ನಲ್ಲಿ ಈ ಸಮರಾಭ್ಯಾಸ ಶುರುವಾಗಿದ್ದು, ಇದರಲ್ಲಿ ಉಭಯ ದೇಶಗಳ ಭೂ ಸೇನೆ, ವಾಯು ಸೇನೆ, ನೌಕಾಪಡೆಯ ಸೈನಿಕರು ಪಾಲ್ಗೊಂಡಿದ್ದಾರೆ.
ಭಾರತೀಯ ಸೇನೆಯಿಂದ 450 ಸಿಬ್ಬಂದಿ ಹಾಗೂ ರಷ್ಯಾದ ಕಡೆಯಿಂದ 1000ಕ್ಕೂ ಹೆಚ್ಚು ಸೇನಾ ತುಕಡಿಗಳು ಪಾಲ್ಗೊಂಡಿವೆ. ಉಭಯ ದೇಶಗಳ ಗಡಿಗಳಲ್ಲಿ ಆಗುತ್ತಿರುವ ಅಕ್ರಮ ಒಳನುಸುಳುವಿಕೆಯಂಥ ಪ್ರಯತ್ನಗಳನ್ನು ನಿಗ್ರಹಿಸುವ ಬಗ್ಗೆ ಈ ಸಮರಾಭ್ಯಾಸದಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಶುಕ್ರವಾರ ಬೆಳಗ್ಗೆ ವ್ಲಾದಿವೊಸ್ಟೋಕ್‌ನಲ್ಲಿ ಸಮರಾಭ್ಯಾಸಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ, ಎರಡೂ ರಾಷ್ಟ್ರಗಳ ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆಗಳ ಸೈನಿಕರು ಅಕ್ಕಪಕ್ಕದ ಗುಂಪುಗಳಾಗಿ ನಿಂತು ಆಕರ್ಷಕ ಪಥಸಂಚಲನ ನಡೆಸಿದರು. ಬಳಿಕ ಭಾರತೀಯ ಯೋಧರಿಂದ ಸಾಂಪ್ರದಾಯಿಕ ಮಾರ್ಷಲ್ ಆರ್ಟ್ಸ್ ಪ್ರದರ್ಶನ ನಡೆಯಿತು.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ರಕ್ಷಣಾ ಸಚಿವಾಲಯ, “ಭಾರತ ಹಾಗೂ ರಷ್ಯಾಗಳು ತಮ್ಮ ಗಡಿ ಭಾಗಗಳಲ್ಲಿ ಒಂದೇ ತೆರನಾದ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಮರಾಭ್ಯಾಸ ನಡೆಸಲಾಗುತ್ತಿದೆ. ಇದು ಎರಡೂ ರಾಷ್ಟ್ರಗಳ ಸೈನಿಕರು ಈ ಸಮಸ್ಯೆಗಳನ್ನು ಎದುರಿಸುವಲ್ಲಿ ಪಡೆದಿರುವ ಅನುಭವ, ಜ್ಞಾನವನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಗಡಿಯಲ್ಲಿನ ಸವಾಲುಗಳನ್ನು ಎದುರಿಸಲು ಎರಡೂ ದೇಶಗಳ ಸೈನಿಕರಿಗೆ ಹೆಚ್ಚಿನ ಆತ್ಮವಿಶ್ವಾಸ ಸಿಗಲಿದೆ’ ಎಂದು ಆಶಿಸಿದೆ.
ಸಮರಾಭ್ಯಾಸದ ಮಹತ್ವ
ಗಡಿ ಪ್ರದೇಶಗಳಲ್ಲಿ ನೆರೆಯ ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನ ರಾಷ್ಟ್ರಗಳು ರಗಳೆ ತಗೆಯುತ್ತಿರುವ ಹಿನ್ನೆಲೆಯಲ್ಲಿ ಭಾರತ, ತನ್ನ ಮಿತ್ರ ರಾಷ್ಟ್ರಗಳೊಂದಿಗೆ ಇಂಥ ಜಂಟಿ ಸಮರಾಭ್ಯಾಸಕ್ಕೆ ಇತ್ತೀಚೆಗೆ ಭಾರಿ ಮಹತ್ವ ನೀಡುತ್ತಿದೆ. ಇದು ತನ್ನ ಸೇನಾ ತಾಕತ್ತು ಹಾಗೂ ಮಿತ್ರ ರಾಷ್ಟ್ರಗಳ ಕಡೆಯಿಂದ ತನಗಿರುವ ಸೇನಾ ಬೆಂಬಲವನ್ನು ವಿಶ್ವ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನವೂ ಆಗಿದೆ. ಕೆಲವು ತಿಂಗಳು ಹಿಂದೆ, ಡೋಕ್ಲಾಂನಲ್ಲಿ ಚೀನಾದ ಸೈನಿಕರು ಭಾರತಕ್ಕೆ ಸಡ್ಡು ಹೊಡೆದು ನಿಂತಾಗಲೂ ಭಾರತ, ಅಮೆರಿಕದ ಸೈನ್ಯದೊಂದಿಗೆ ಕೇರಳದ ಮಲಬಾರ್‌ನಲ್ಲಿ ಜಂಟಿ ಸಮರಾಭ್ಯಾಸ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಂಕಿ-ಅಂಶ:
10 : ಹತ್ತು ದಿನಗಳ ಕಾಲ ನಡೆಯಲಿರುವ ಭಾರತ, ರಷ್ಯಾ ಸಮರಾಭ್ಯಾಸ
450 : ಸಮರಾಭ್ಯಾಸದಲ್ಲಿ ಭಾರತದ ಕಡೆಯಿಂದ ಪಾಲ್ಗೊಳ್ಳುತ್ತಿರುವ ಸೈನಿಕರು
1,000 ಪ್ಲಸ್ : ರಷ್ಯಾದಿಂದ ಪಾಲ್ಗೊಳ್ಳುತ್ತಿರುವ ತುಕಡಿಗಳ ಸಂಖ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.