Industrial production ಕಳೆದ ನವೆಂಬರ್‌ನಲ್ಲಿ ಹೆಚ್ಚು: ಕೇಂದ್ರ ಸರ್ಕಾರ
Team Udayavani, Jan 10, 2025, 11:19 PM IST
ನವದೆಹಲಿ: ದೇಶದಲ್ಲಿ ಕೈಗಾರಿಕಾ ಉತ್ಪಾದನಾ ಪ್ರಮಾಣ (ಐಐಪಿ) 2024ರ ನವೆಂಬರ್‌ನಲ್ಲಿ ಶೇ.5.2 ಹೆಚ್ಚಳವಾಗಿದೆ. ಈ ಮೂಲಕ 6 ತಿಂಗಳ ಗರಿಷ್ಠಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2024ರ ಮೇನಲ್ಲಿ ಶೇ.6.3 ಪ್ರಮಾಣದಲ್ಲಿ ಕೈಗಾರಿಕೆ ಉತ್ಪಾದನಾ ಪ್ರಮಾಣವಾಗಿತ್ತು. ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಹಬ್ಬಗಳ ಋತುವಾಗಿದ್ದರಿಂದ ಗ್ರಾಹಕರ ಬೇಡಿಕೆಯೊಂದಿಗೆ ಉತ್ಪಾದನೆ ಮಟ್ಟ ಹೆಚ್ಚಾಗಿತ್ತು ಎಂದು ಸರ್ಕಾರ ಹೇಳಿದೆ. ಜೂನ್‌ನಲ್ಲಿ ಶೇ.4.9 ಹಾಗೂ ಜುಲೈನಲ್ಲಿ ಶೇ.5ರಷ್ಟು ಏರಿಕೆ ಕಂಡಿತ್ತು. 2023ರ ನವೆಂಬರ್‌ನಲ್ಲಿ ಶೇ.2.5ರಷ್ಟು ಬೆಳವಣಿಗೆ ಕಂಡಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.