ಒಳನುಸುಳುವಿಕೆ ಯತ್ನ: ಇಬ್ಬರು ಉಗ್ರರ ಹತ್ಯೆ
Team Udayavani, May 21, 2017, 11:36 AM IST
ಶ್ರೀನಗರ: ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ನೌಗಾಮ್ ವಲಯದಲ್ಲಿ ಉಗ್ರರ ನುಸುಳುವಿಕೆ ಯತ್ನವನ್ನು ಸೇನೆಯು ವಿಫಲಗೊಳಿಸಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಆದರೆ, ಒಳನುಸುಳಲು ಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನೂ ಸೇನಾಪಡೆ ಸದೆಬಡಿದಿದೆ.
ಇನ್ನೊಂದೆಡೆ, ಜಮ್ಮು ಮತ್ತು ಕಾಶ್ಮೀರದ ಪೂಂಛ… ಜಿಲ್ಲೆಯ ಎಲ್‌ಒಸಿ ಸಮೀಪ ನೆಲಬಾಂಬ್‌ವೊಂದು ಸ್ಫೋಟಗೊಂಡ ಪರಿಣಾಮ, ಯೋಧರೊಬ್ಬರು ಗಾಯಗೊಂಡಿದ್ದಾರೆ. ಮೆಂಧಾರ್ ವಲಯದಲ್ಲಿ ಅಕಸ್ಮಾತಾಗಿ ಯೋಧ ನೆಲಬಾಂಬ್ ಮೇಲೆಯೇ ಕಾಲಿಟ್ಟ ಪರಿಣಾಮ ಸ್ಫೋಟ ಸಂಭವಿಸಿದೆ.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ ಎಂದು ಸೇನೆ ತಿಳಿಸಿದೆ. ಏತನ್ಮಧ್ಯೆ, ಶನಿವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಹಿಮಾಲಯನ್ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ್ದಾರೆ. ಚೀನ-ಭಾರತ ಗಡಿಯಲ್ಲಿ ಆದಷ್ಟು ಹೆಚ್ಚಿನ ನಿಗಾ ವಹಿಸಬೇಕಾದ ಅಗತ್ಯವಿದೆ. ಇಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ಜನರು ವಲಸೆ ಹೋಗದಂತೆ ತಡೆಯಿರಿ ಎಂದು ರಾಜ್ಯಗಳಿಗೆ ಸಿಂಗ್ ಸೂಚಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.