ಹಣದುಬ್ಬರ ದಾಖಲೆಯ ಶೇ.2.18ಕ್ಕೆ ಇಳಿಕೆ
Team Udayavani, Jun 13, 2017, 1:41 AM IST
ಹೊಸದಿಲ್ಲಿ: ತರಕಾರಿ, ಬೇಳೆಕಾಳುಗಳ ಬೆಲೆ ಇಳಿಕೆ ಕಾರಣ, ಹಣದುಬ್ಬರ ಸರ್ವಾಧಿಕ ದಾಖಲೆಯ ಶೇ.2.18ರಷ್ಟಕ್ಕೆ ಇಳಿಕೆ ಕಂಡಿದೆ. ಬಟ್ಟೆ, ವಸತಿ, ತೈಲ ಬೆಲೆಗಳೂ ಹಣದುಬ್ಬರ ಇಳಿಕೆಗೆ ಕಾರಣವಾಗಿದೆ. ಗ್ರಾಹಕ ದರ ಸೂಚ್ಯಂಕ ಆಧಾರವಾಗಿ ಹಣದುಬ್ಬರ ಏಪ್ರಿಲ್ ತಿಂಗಳಲ್ಲಿ ಶೇ.2.99ರಷ್ಟಿತ್ತು. 2016 ಮೇನಲ್ಲಿ ಶೇ.5.76ರಷ್ಟಿತ್ತು. ಇನ್ನು ಕಳೆದ ಮೇ ತಿಂಗಳಲ್ಲಿ ಒಟ್ಟು ಆಹಾರ ಉತ್ಪನ್ನಗಳ ಹಣದುಬ್ಬರವೂ ಇಳಿಕೆ ಕಂಡಿದ್ದು ಶೇ.(-)1.05ಕ್ಕೆ ತಲುಪಿದೆ. ತರಕಾರಿಗಳ ದರ ಶೇ.13.44ರಷ್ಟು ಇಳಿಕೆಯಾಗಿದ್ದು, ಬೇಳೆಕಾಳು ಇತರ ಉತ್ಪನ್ನಗಳ ಬೆಲೆ ಶೇ.19.45ಕ್ಕೆ ಇಳಿಕೆಯಾಗಿದೆ. ಈ ಮೊದಲು ಹಣದುಬ್ಬರದ ಕಾರಣಕ್ಕಾಗಿಯೇ, ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಯಥಾಸ್ಥಿತಿಯಲ್ಲಿಟ್ಟಿತ್ತು.
ಇದೇ ವೇಳೆ ಎಪ್ರಿಲ್‌ನಲ್ಲಿ ಕೈಗಾರಿಕಾ ಉತ್ಪಾದನೆ ತೀವ್ರ ಇಳಿಕೆ ಕಂಡಿದ್ದರಿಂದ ಕೈಗಾರಿಕಾ ಉತ್ಪಾದನಾ ಅಭಿವೃದ್ಧಿಯೂ ಶೇ.3.1ಕ್ಕೆ ಕುಸಿದಿದೆ. ಬಂಡವಾಳ ಸರಕುಗಳು, ಗ್ರಾಹಕ ಉತ್ಪನ್ನಗಳ ಉತ್ಪಾದನೆ ಕುಂಠಿತದಿಂದ ಈ ಪರಿಣಾಮವಾಗಿದೆ. ಕಳೆದ ವರ್ಷ ಕೈಗಾರಿಕಾ ಉತ್ಪಾದನಾ ದರ ಸೂಚ್ಯಂಕ (ಐಐಪಿ) ಶೇ.6.5ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.