ಮೆಮೋ ಚಾಲೆಂಜ್ ವಿರುದ್ಧ ಎಚ್ಚರಿಕೆ ವಹಿಸಿ: ಕೇಂದ್ರ ಸೂಚನೆ
Team Udayavani, Aug 31, 2018, 6:00 AM IST
ನವದೆಹಲಿ: ಮಕ್ಕಳ ಪ್ರಾಣ ತೆಗೆದ ಬ್ಲೂ ವೇಲ್ ಗೇಮ್‌ನ ಭೀತಿ ಕಡಿಮೆಯಾಗುತ್ತಿದ್ದಂತೆ ಇದೀಗ ಇಂಥದ್ದೇ ಮೋಮೋ ಚಾಲೆಂಜ್ ಮಕ್ಕಳು ಹಾಗೂ ಹದಿಹರೆಯದವರನ್ನು ಕಾಡಲು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಇಲೆಕ್ಟ್ರಾನಿಕ್ಸ್ ಸಚಿವಾಲಯ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಪ್ರಕಟಿಸಿದೆ. ಅನಾಮಿಕ ವ್ಯಕ್ತಿಗಳೊಂದಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂವಹನ ನಡೆಸಿ ವಿಚಿತ್ರ ಸವಾಲುಗಳನ್ನು ಸ್ವೀಕರಿಸುವ ಈ ಮೋಮೋ ಚಾಲೆಂಜ್ ಕಳೆದ ಕೆಲವು ದಿನಗಳಿಂದ ವೈರಲ್ ಆಗಿದೆ. ಹೀಗಾಗಿ ಮಕ್ಕಳಲ್ಲಿನ ಬದಲಾವಣೆಗಳನ್ನು ಗಮನಿಸುವಂತೆ ಸಚಿವಾಲಯ ಹೆತ್ತವರಿಗೆ ಸೂಚಿಸಿದೆ.
ಸ್ನೇಹಿತರು ಮತ್ತು ಕುಟುಂಬದವರಿಂದ ಮಕ್ಕಳು ದೂರವಾಗುವುದು, ಬೇಸರ, ಚಿಂತೆ ಹಾಗೂ ನಿತ್ಯದ ಕೆಲಸವನ್ನು ಮಾಡದೇ ಇರುವುದು ಅಥವಾ ಹಠಾತ್ ಸಿಟ್ಟಾಗುವಂತಹ ವರ್ತನೆಗಳನ್ನು ಮಕ್ಕಳು ತೋರುತ್ತಿದ್ದಾರೆಯೇ ಎಂದು ಗಮನಿಸಿ. ಮಕ್ಕಳ ಆನ್‌ಲೈನ್ ಹಾಗೂ ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಮೇಲೆ ಕಣ್ಣಿಡಿ ಎಂದು ಸೂಚನೆಗಳಲ್ಲಿ ವಿವರಿಸಲಾಗಿದೆ. ಅಪಾಯಕಾರಿ ಆಟದ ಬಗ್ಗೆ ತಿಳಿದಿಲ್ಲದಿದ್ದರೆ, ಪಾಲಕರು ಈ ಬಗ್ಗೆ ಮಕ್ಕಳೊಂದಿಗೆ ಮಾತನಾಡಬಾರದು. ಹೀಗೆ ಮಾತನಾಡುವ ಮೂಲಕ ಮಕ್ಕಳಲ್ಲಿ ಈ ಬಗ್ಗೆ ಕುತೂಹಲ ಮೂಡಿಸಿದಂತಾಗುತ್ತದೆ ಎಂದು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.