ಅನುಮತಿಯೊಂದಿಗೆ ಸಣ್ಣ ಪುಟ್ಟ ಕೆಲಸ ;ಇನ್ಫೋಸಿಸ್ ಉದ್ಯೋಗಿಗಳಿಗೆ ಷರತ್ತಿನ ಅನುಮತಿ!
ಮೂನ್ಲೈಟ್ ವಿರುದ್ಧ ಕಠಿಣ ನಿಲುವು ಸಡಿಲಿಕೆ
Team Udayavani, Oct 22, 2022, 7:30 AM IST
ನವದೆಹಲಿ:“ಮೂನ್ಲೈಟಿಂಗ್’ಗೆ ಅವಕಾಶವೇ ಇಲ್ಲ ಎಂದು ತಿಂಗಳ ಹಿಂದಷ್ಟೇ ಉದ್ಯೋಗಿಗಳಿಗೆ ಖಡಕ್ಕಾಗಿ ಸೂಚಿಸಿದ್ದ ಐಟಿ ಕಂಪನಿ ಇನ್ಫೋಸಿಸ್, ಈಗ ತನ್ನ ನಿಲುವನ್ನು ಸ್ವಲ್ಪಮಟ್ಟಿಗೆ ಸಡಿಲಿಸಿದೆ.
ಉದ್ಯೋಗಿಗಳು ತಮ್ಮ ಕಂಪನಿಯ ಕೆಲಸಕ್ಕೆ ತೊಂದರೆಯಾಗದಂತೆ ಬಿಡುವಿನ ಸಮಯದಲ್ಲಿ ಬೇರೆ ಸಣ್ಣಪುಟ್ಟ ಕೆಲಸ(ಗಿಗ್ ವರ್ಕ್) ಮಾಡಲು ಅವಕಾಶವಿದೆ. ಆದರೆ, ಇದಕ್ಕೆ ಅವರು ಕಂಪನಿಯ ಮ್ಯಾನೇಜರ್ಗಳ ಅನುಮತಿ ಪಡೆಯುವುದು ಕಡ್ಡಾಯ ಎಂದು ಕಂಪನಿ ಹೇಳಿದೆ.
ಉದ್ಯೋಗಿಗಳಿಗೆ ಕಳುಹಿಸಿರುವ ಆಂತರಿಕ ಸಂದೇಶದಲ್ಲಿ ಇನ್ಫೋಸಿಸ್ ಈ ವಿಚಾರವನ್ನು ತಿಳಿಸಿದೆ. ಇನ್ಫೋಸಿಸ್ನ ಈ ನಿರ್ಧಾರದಿಂದಾಗಿ ನೌಕರರಿಗೆ ಹೆಚ್ಚುವರಿ ಆದಾಯ ಗಳಿಕೆಯ ಮಾರ್ಗವು ತೆರೆದುಕೊಳ್ಳುವ ಕಾರಣ, ಕಂಪನಿ ತೊರೆಯುವವರ ಸಂಖ್ಯೆ ಇಳಿಮುಖವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಕಂಪನಿಯ ಸಂದೇಶವೇನು?:
ಕಂಪನಿಯ ಯಾವುದಾದರೂ ಉದ್ಯೋಗಿಯು ಗಿಗ್ ವರ್ಕ್(ಇತರೆ ಸಣ್ಣಪುಟ್ಟ ಕೆಲಸ) ಮಾಡಲು ಇಚ್ಛಿಸಿದರೆ, ಅದಕ್ಕೆ ಅವಕಾಶ ನೀಡುತ್ತೇವೆ. ಆದರೆ, ಅಂಥ ಕೆಲಸ ಮಾಡುವ ಮುನ್ನ ಮ್ಯಾನೇಜರ್ ಮತ್ತು ಬಿಪಿ-ಎಚ್ಆರ್ ಅನುಮತಿ ಪಡೆಯಬೇಕು. ಅಲ್ಲದೇ, ನೀವು ಬಿಡುವಿನ ವೇಳೆಯಲ್ಲಿ ಮಾಡುವ ಕೆಲಸವು, ಇನ್ಫೋಸಿಸ್ ಅಥವಾ ಇನ್ಫೋಸಿಸ್ನ ಕ್ಲೈಂಟ್ಗಳೊಂದಿಗೆ ಸ್ಪರ್ಧಿಸುವಂಥದ್ದಾಗಿರಬಾರದು. ಜತೆಗೆ, ಹೊರಗಿನ ಕೆಲಸವು ಇನ್ಫೋಸಿಸ್ನಲ್ಲಿನ ನಿಮ್ಮ ಕಾರ್ಯಕ್ಷಮತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಿರಬಾರದು ಎಂಬ ಸಂದೇಶವನ್ನು ಉದ್ಯೋಗಿಗಳಿಗೆ ಕಂಪನಿ ರವಾನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.