ಜಲಾಂತರ್ಗಾಮಿ ಐಎನ್‌ಎಸ್ ಅರಿಹಂತ್ ಮೂಲಕ ಕ್ಷಿಪಣಿ ಉಡಾವಣೆ
ನೌಕಾ ಶಕ್ತಿಯಲ್ಲಿ ಭಾರತದ ಹೊಸ ಮೈಲುಗಲ್ಲು; ಕ್ಷಿಪಣಿಯ ಐತಿಹಾಸಿಕ ಪರೀಕ್ಷೆ ಯಶಸ್ವಿ
Team Udayavani, Oct 14, 2022, 8:49 PM IST
ನವದೆಹಲಿ: ಭಾರತದ ನೌಕಾ ಸಾಮರ್ಥ್ಯದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಯಾಗಿದೆ. ಐಎನ್‌ಎಸ್ ಅರಿಹಂತ್ ಜಲಾಂತರ್ಗಾಮಿಯು ಶುಕ್ರವಾರ ತಮ್ಮ ಮೇಲ್ಮೈ ನಿಂದ ಖಂಡಾಂತರ ಕ್ಷಿಪಣಿಯೊಂದನ್ನು ಯಶಸ್ವಿಯಾಗಿ ಉಡಾಯಿಸಿದೆ.
ಈವರೆಗೆ ನೀರಿನಡಿ ದೋಣಿಗಳಿಂದ ಮಾಡಿದ ತಾತ್ಕಾಲಿಕ ಸೇತುವೆಗಳ ಮೂಲಕವೇ ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆ ನಡೆಯುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಸ್ವತಃ ಜಲಾಂತರ್ಗಾಮಿಯಿಂದಲೇ ಕ್ಷಿಪಣಿಯನ್ನು ಪ್ರಯೋಗಿಸಲಾಗಿದೆ.
ಈ ಕ್ಷಿಪಣಿಯ ನಿಯೋಜನೆಯ ಬಳಿಕ ಸಮುದ್ರದಾಳದಿಂದಲೇ ಚೀನ, ಪಾಕಿಸ್ತಾನದಂಥ ದೇಶಗಳನ್ನು ಟಾರ್ಗೆಟ್ ಮಾಡಲು ಸಾಧ್ಯವಾಗಲಿದೆ.
ಶಸ್ತ್ರಾಸ್ತ್ರ ವ್ಯವಸ್ಥೆಯ ಎಲ್ಲ ಕಾರ್ಯಾಚರಣೆ ಮತ್ತು ತಾಂತ್ರಿಕ ಮಾನದಂಡಗಳು ಪೂರೈಸಲ್ಪಟ್ಟಿವೆ. ಜಲಾಂತರ್ಗಾಮಿ ಮೂಲಕ ಉಡಾಯಿಸಲಾದ ಖಂಡಾಂತರ ಕ್ಷಿಪಣಿ(ಎಸ್‌ಎಲ್‌ಬಿಎಂ) ಬಂಗಾಳ ಕೊಲ್ಲಿಯ ಪ್ರದೇಶದಲ್ಲಿದ್ದ ಗುರಿಯನ್ನು ನಿಖರವಾಗಿ ತಲುಪಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
3 ಕ್ಷಿಪಣಿ ಜಲಾಂತರ್ಗಾಮಿಗಳು
ಭಾರತದಲ್ಲಿ ಈಗ ಒಟ್ಟು ಮೂರು ಸ್ವದೇಶಿ ನಿರ್ಮಿತ ಖಂಡಾಂತರ ಕ್ಷಿಪಣಿ ಜಲಾಂತರ್ಗಾಮಿಗಳಿವೆ. ಜತೆಗೆ, ಸಬ್‌ಮರೀನ್‌ಗಳಿಂದ ಉಡಾವಣೆಗೊಳ್ಳುವ ನೆಲದಿಂದ ನೆಲಕ್ಕೆ ಚಿಮ್ಮುವಂಥ ಸಾಮರ್ಥ್ಯವುಳ್ಳ ಎರಡು ಕ್ಷಿಪಣಿಗಳೂ (ಕೆ-15 ಮತ್ತು ಕೆ-4) ನಮ್ಮಲ್ಲಿವೆ. ಈ ಪೈಕಿ ಕೆ-4 ಕ್ಷಿಪಣಿಯು 3,500 ಕಿ.ಮೀ. ವ್ಯಾಪ್ತಿ ಹೊಂದಿದೆ. ಇದು ಚೀನಾ ವಿರುದ್ಧ ಅಣ್ವಸ್ತ್ರ ನಿರೋಧಕವಾಗಿ ಕೆಲಸ ಮಾಡುತ್ತದೆ.
ವಿಶ್ವದ 6ನೇ ದೇಶ ಭಾರತ
ಅಣ್ವಸ್ತ್ರಚಾಲಿತ ಜಲಾಂತರ್ಗಾಮಿಗಳನ್ನು ನಿರ್ಮಿಸಿ, ಅವುಗಳಲ್ಲಿ ಸಬ್‌ಮರೀನ್ ಮೂಲಕವೇ ಉಡಾಯಿಸುವಂಥ ಖಂಡಾಂತರ ಕ್ಷಿಪಣಿಗಳನ್ನು ಅಳವಡಿಸುವುದು ಅತ್ಯಂತ ಸಂಕೀರ್ಣ ಹಾಗೂ ಸವಾಲಿನ ಕೆಲಸವಾಗಿತ್ತು. ಈಗ ಅದನ್ನು ಭಾರತ ಸಾಧಿಸಿದೆ. ಇಂಥ ಜಲಾಂತರ್ಗಾಮಿಗಳನ್ನು ಹೊಂದಿರುವ ವಿಶ್ವದ 6ನೇ ರಾಷ್ಟ್ರ ಎಂಬ ಖ್ಯಾತಿಗೂ ಭಾರತ ಪಾತ್ರವಾಗಿದೆ. ಈವರೆಗೆ ಅಮೆರಿಕ, ರಷ್ಯಾ, ಯುಕೆ, ಫ್ರಾನ್ಸ್ ಮತ್ತು ಚೀನಾ ಮಾತ್ರ ಈ ಸಾಧನೆ ಮಾಡಿವೆ.
ಐಎನ್‌ಎಸ್ ಅರಿಹಂತ್
ಭಾರತದ ಮೊತ್ತಮೊದಲ ದೇಶೀಯವಾಗಿ ನಿರ್ಮಿಸಲ್ಪಟ್ಟ ನ್ಯೂಕ್ಲಿಯರ್ ಸಬ್‌ಮರೀನ್. ಜುಲೈ 2009ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಡಾ.ಮನಮೋಹನ್‌ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಅವರು ಕಾರ್ಗಿಲ್ ವಿಜಯ್ ದಿವಸ್ ದಿನ ಇದನ್ನು ಅನಾವರಣಗೊಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.