ಇನ್ಸ್‌ಪೆಕ್ಟರ್ ಹತ್ಯೆಗೆ ಟ್ವಿಸ್ಟ್: ಯೋಧನಿಂದ ಗುಂಡೇಟು?
Team Udayavani, Dec 8, 2018, 6:00 AM IST
ಲಕ್ನೋ: ಉತ್ತರಪ್ರದೇಶದ ಬುಲಂದ್ ಶಹರ್‌ನಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಹತ್ಯೆ ಪ್ರಕರಣಕ್ಕೆ ವಿಚಿತ್ರ ತಿರುವೊಂದು ಸಿಕ್ಕಿದೆ. ಅಂದು ಉದ್ರಿಕ್ತ ಗುಂಪಿನಲ್ಲಿದ್ದ ಜೀತು ಫೌಜಿ ಎಂಬ ಯೋಧನ ಬಂದೂಕಿನಿಂದ ಹಾರಿದ ಗುಂಡು ಸಿಂಗ್ ಅವರನ್ನು ಬಲಿ ಪಡೆಯಿತು ಎಂದು ಅಂದಿನ ಗಲಭೆ ಯಲ್ಲಿ ಭಾಗಿಯಾಗಿದ್ದ ಕೆಲವರು ನೀಡಿರುವ ಹೇಳಿಕೆಯನ್ನು ಆಧರಿಸಿ ಇದೀಗ ಪೊಲೀಸರು ಜೀತು ಬೆನ್ನು ಬಿದ್ದಿದ್ದಾರೆ.
ಜೀತು ಯಾರು, ಎಲ್ಲಿಯವರು?: ಮಹಾವ್ ಜಿಲ್ಲೆಯವರಾದ ಜೀತು, ಸದ್ಯಕ್ಕೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಮಾಹಿತಿ ಲಭ್ಯ ವಾಗಿದೆ. ಘಟನೆ ನಡೆದಾಗಿನಿಂದ ತಲೆ ಮರೆಸಿಕೊಂಡಿದ್ದಾರೆ. ಬಂಧನಕ್ಕೆ ಪೊಲೀಸರ ತಂಡವೊಂದು ಜಮ್ಮು ಕಾಶ್ಮೀರಕ್ಕೆ ಹೋಗಿದೆ. ಜೀತು ಸಿಕ್ಕಿಬಿದ್ದರೆ ನಿಜಾಂಶ ಹೊರಬೀಳಲಿದೆ ಎಂದು ಮೀರತ್ ವಲಯದ ವಿಭಾಗೀಯ ಪೊಲೀಸ್ ಮಹಾ ನಿರ್ದೇಶಕ ರಾಮ್ ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜೀತು ತಾಯಿ ರತನ್ ಕೌರ್, ಗಲಭೆ ವಿಡಿಯೋ ಗಳಲ್ಲಿ ತನ್ನ ಮಗನಿರುವುದನ್ನು ಕಂಡು ಹಿಡಿಯಲಾಗಿಲ್ಲ ಎಂದಿದ್ದಾರೆ.
ಬುಲಂದ್ ಶಹರ್ ಹತ್ಯೆ ಒಂದು ಆಕಸ್ಮಿಕ ಘಟನೆ. ಇನ್ಸ್ ಪೆಕ್ಟರ್ ಸಿಂಗ್ ಅವರ ಹತ್ಯೆಗೆ ಕಾರಣರಾದವರನ್ನು ಆದಷ್ಟು ಬೇಗನೇ ಬಂಧಿಸಿ ಶಿಕ್ಷೆಗೊಳಪಡಿಸಲಾಗುತ್ತದೆ.
ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.