ಗಂಡನಿಂದ ದೂರವಾಗಿ ರಸ್ತೆಬದಿ ಲಿಂಬೆ ಪಾನಕ ಮಾರುತ್ತಿದ್ದ ಯುವತಿ ಈಗ ಪೊಲೀಸ್ ಇನ್ಸ್ ಪೆಕ್ಟರ್
Team Udayavani, Jun 28, 2021, 12:02 PM IST
ತಿರುವನಂತಪುರ: ಆತ್ಮವಿಶ್ವಾಸ, ಅಚಲ ನಂಬಿಕೆ, ಇಚ್ಛಾಶಕ್ತಿ, ಕಠಿಣ ಪರಿಶ್ರಮವಿದ್ದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಕೇರಳದ ಈ ಯುವತಿಯೇ ಸಾಕ್ಷಿ. ಜೀವನ ಸಾಗಿಸಲು ರಸ್ತೆ ಬದಿಯಲ್ಲಿ ಲಿಂಬೆ ಶರಬತ್ತು, ಐಸ್ ಕ್ರೀಮ್ ಮಾರುತ್ತಿದ್ದ ಯುವತಿ ಈಗ ಪೊಲೀಸ್ ಇನ್ಸ್ ಪೆಕ್ಟರ್.
ಹೌದು, ಈಕೆಯ ಹೆಸರು ಅ್ಯನಿ ಶಿವ. ಕೇರಳದ ವರ್ಕಲಾ ನಗರದ ನಿವಾಸಿ. 18 ವರ್ಷಕ್ಕೆ ಮದುವೆಯಾದ ಗಂಡನಿಂದ, ಮನೆಯವರಿಂದ ದೂರವಾಗಿ, ಹೊಟ್ಟೆ ಪಾಡಿಗಾಗಿ ವರ್ಕಲಾದಲ್ಲಿ ಲಿಂಬೆ ಶರಬತ್ತು, ಐಸ್ ಕ್ರೀಮ್ ಮಾರುತ್ತಿದ್ದ ಆ್ಯನಿ, ಇದೀಗ ವರ್ಕಲಾ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್!
ಸದ್ಯ 31 ವರ್ಷದ ಆ್ಯನಿ, ಕಾಂಜಿರಾಮ್ಕುಲಂ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ಓದುವ ಸಮಯದಲ್ಲಿ ತನ್ನ ಮನೆಯವರ ವಿರೋಧ ಕಟ್ಟಿಕೊಂಡು ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಿದ್ದರು. ಆದರೆ ಒಂದು ಮಗುವಾದ ಬಳಿಕ ಗಂಡ ದೂರವಾಗಿದ್ದ. ಬಳಿಕ ಮನೆಗೆ ಮರಳಲು ಪ್ರಯತ್ನಿಸಿದರೂ, ಕುಟುಂಬವು ಅವಳನ್ನು ಸ್ವೀಕರಿಸಲಿಲ್ಲ. ತನ್ನ ಆರು ತಿಂಗಳ ಮಗ ಶಿವಸೂರ್ಯನೊಂದಿಗೆ ಅಜ್ಜಿಯ ಮನೆಯಲ್ಲಿ ಶೆಡ್ ಒಂದರಲ್ಲಿ ಕೆಲ ಕಾಲ ಉಳಿದುಕೊಂಡಿದ್ದಳು. ಬಳಿಕ ಆದಾಯಕ್ಕಾಗಿ ಕೆಲಸ ಮಾಡಬೇಕು ಎಂದು ಅಲ್ಲಿಂದ ವರ್ಕಲಾಗೆ ತೆರಳಿದ್ದಳು.
ಇದನ್ನೂ ಓದಿ:ಸೆಲ್ಫಿಗಿಂತ ಪ್ರಾಣ ಮುಖ್ಯ: ಚಾರ್ಮಾಡಿಯ ಜಾರುವ ಬಂಡೆಗಳ ಮೇಲೆ ಪ್ರವಾಸಿಗರ ಸರ್ಕಸ್!
“ವರ್ಕಲಾ ಶಿವಗಿರಿ ಆಶ್ರಮದ ಸ್ಟಾಲ್‌ಗಳಲ್ಲಿ ನಾನು ನಿಂಬೆ ಪಾನಕ, ಐಸ್‌ಕ್ರೀಮ್, ಕೈಯಿಂದ ತಯಾರಿಸಿದ ಕರಕುಶಲ ವಸ್ತುಗಳಿಗೆ ಮಾರಾಟ ಮಾಡುವಂತಹ ಅನೇಕ ಸಣ್ಣ ಉದ್ಯಮಗಳನ್ನು ಪ್ರಯತ್ನಿಸಿದೆ. ಆದರೆ ಎಲ್ಲವೂ ವಿಫಲವಾಯಿತು. ಆಗ ಒಬ್ಬ ವ್ಯಕ್ತಿಯು ಪೊಲೀಸ್ ಪರೀಕ್ಷೆಗೆ ಕಲಿಯಲು ಮತ್ತು ಬರೆಯಲು ಸೂಚಿಸಿ ಹಣಕಾಸಿನ ಸಹಾಯ ಮಾಡಿದರು” ಎನ್ನುತ್ತಾರೆ ಆ್ಯನಿ ಶಿವ.
ನಾನು ಯಾವಾಗಲೂ ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾಗಬೇಕೆಂದು ಬಯಸಿದ್ದೆ. ಆದರೆ ಹಣೆಯಲ್ಲಿ ಬೇರೆಯದೆ ಬರೆದಿತ್ತು. ಈಗ ನನ್ನ ಫೇಸ್‌ಬುಕ್ ಪೋಸ್ಟ್ ಅನ್ನು ಅನೇಕರು ಹಂಚಿಕೊಂಡ ನಂತರ ನಾನು ಪಡೆಯುತ್ತಿರುವ ಬೆಂಬಲದಿಂದ ಸಂತೋಷವಾಗುತ್ತಿದೆ ಎನ್ನುತ್ತಾರೆ ಆ್ಯನಿ.
ಇದನ್ನೂ ಓದಿ: ಗಾಜಿಯಾಬಾದ್: ಮನೆಯೊಳಗೆ ನುಗ್ಗಿ ಗುಂಡಿನ ದಾಳಿ, ಮಕ್ಕಳು ಸೇರಿ ಮೂವರ ಹತ್ಯೆ
ಆ್ಯನಿ ಶಿವಗೆ ಅಭಿನಂದನೆ ಸಲ್ಲಿಸಿದ ಕೇರಳ ಪೊಲೀಸರು, “ಈಕೆ ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸದ ನಿಜವಾದ ಮಾದರಿ. ಪತಿ ಮತ್ತು ಕುಟುಂಬದಿಂದ ತ್ಯಜಿಸಲ್ಪಟ್ಟ ನಂತರ 6 ತಿಂಗಳ ಮಗುವಿನೊಂದಿಗೆ ಬೀದಿಗೆ ಬಿದ್ದ 18 ವರ್ಷದ ಬಾಲಕಿಯೊಬ್ಬಳು ಈಗ ವರ್ಕಲಾ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾಳೆ” ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.