ನೀಟ್ ಪರೀಕ್ಷೆ ಬರೆದ 55ರ ಹರೆಯದ ರೈತ! ಮಗ ಓದಿದ್ದ ಪುಸ್ತಕಗಳೇ ಓದಿದ ತಂದೆ
Team Udayavani, Jul 18, 2022, 9:00 PM IST
ಚೆನ್ನೈ: 50-60ರ ಹರೆಯದವರು ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಬರೆಯುವುದನ್ನು ಕೇಳಿರುತ್ತೀರಿ. ಆದರೆ ಭಾನುವಾರ ತಮಿಳುನಾಡಿನ ಮಧುರೈನಲ್ಲಿ 55ರ ಹರೆಯದ ರೈತರೊಬ್ಬರು ಅಖಿಲ ಭಾರತೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನೇ ಬರೆದಿದ್ದಾರೆ!
ಕೆ.ರಾಜ್ಯಕ್ಕೋಡಿ 1984ರಲ್ಲಿ ನೀಟ್ ಬರೆದು, ಖಾಸಗಿ ವೈದ್ಯಕೀಯ ಕಾಲೇಜಿಗೆ ಆಯ್ಕೆಯಾಗಿದ್ದರಂತೆ. ಆದರೆ ಆಗ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಅವರಿಗೆ ಕಾಲೇಜು ಸೇರಲು ಆಗಿರಲಿಲ್ಲ. ಅದಾದ ನಂತರ ಕೃಷಿ ಕಾಯಕ ಮಾಡುತ್ತಾ ಜೀವನ ನಡೆಸಿದ ಅವರು ಕಳೆದ ವರ್ಷ ಒಡಿಶಾದಲ್ಲಿ 64 ವರ್ಷದ ವ್ಯಕ್ತಿಯೊಬ್ಬರು ನೀಟ್ ಬರೆದ ಸುದ್ದಿ ಕೇಳಿ ಸ್ಫೂರ್ತಿ ಪಡೆದುಕೊಂಡಿದ್ದಾರೆ.
ರಾಜ್ಯಕ್ಕೋಡಿ ಅವರ ಕಿರಿಯ ಮಗ ವಾಸುದೇವನ್ ನೀಟ್‌ನಲ್ಲಿ 521 ಅಂಕ ಪಡೆದು, ಕಡಲೂರಿನ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಗ ಅಭ್ಯಾಸ ಮಾಡಿದ್ದ ಪುಸ್ತಕಗಳನ್ನು ಇಟ್ಟುಕೊಂಡಿದ್ದ ರಾಜ್ಯಕ್ಕೋಡಿ ಕಳೆದ 1 ವರ್ಷದಿಂದ ದಿನಕ್ಕೆ 3 ತಾಸು ಅಭ್ಯಾಸ ಮಾಡಿದ್ದು, ಭಾನುವಾರ ಪರೀಕ್ಷೆ ಬರೆದಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಕ್ಕರೆ ವಿದ್ಯಾಭ್ಯಾಸ ಮಾಡುವುದಾಗಿಯೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.