14 ತಿಂಗಳ ಬಳಿಕ ಅಮರಾವತಿಗೆ “ಶುಕ್ರದೆಸೆ’
ಅರ್ಧಕ್ಕೆ ನಿಂತ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲು ಸೂಚನೆ; ಯಥಾಸ್ಥಿತಿಗೆ ಹೈಕೋರ್ಟ್ ಆದೇಶ
Team Udayavani, Aug 16, 2020, 6:15 AM IST
ಅಮರಾವತಿ: ಬರೋಬ್ಬರಿ 14 ತಿಂಗಳ ಬಳಿಕ ಆಂಧ್ರ ಪ್ರದೇಶ ರಾಜಧಾನಿ ಅಮರಾವತಿಗೆ ಹಿಡಿದಿದ್ದ “ಗ್ರಹಣ’ ತೊಲಗಿ “ಶುಕ್ರದೆಸೆ’ ಶುರು ವಾಗಿದೆ. ಅಮರಾವತಿಯಲ್ಲಿ ಕಳೆದ 14 ತಿಂಗಳಿ ನಿಂದ ನನೆಗುದಿಗೆ ಬಿದ್ದಿರುವ ಕಟ್ಟಡ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರಕಾರ ಇದೀಗ ನಿರ್ಧ ರಿಸಿದೆ. ಅಪೂರ್ಣಗೊಂಡಿರುವ ಎಲ್ಲ ಕಟ್ಟಡಗಳು, ರಸ್ತೆಗಳು, ಮೂಲಸೌಲಭ್ಯಗಳನ್ನು ಪೂರ್ಣಗೊಳಿ ಸಬೇಕು. ಈ ಸಂಬಂಧ ಯೋಜನೆಯನ್ನು ರೂಪಿಸಿ ಎಂದು ಅಮರಾವತಿ ನಗರ ಅಭಿವೃದ್ಧಿ ಪ್ರಾಧಿ ಕಾರಕ್ಕೆ ಜಗನ್ ಸೂಚಿಸಿದ್ದಾರೆ.
ಈ ಕಟ್ಟಡ ಕಾಮಗಾರಿಗಳನ್ನು ಪೂರ್ಣ ಗೊಳಿ ಸಲು ಕನಿಷ್ಠ 15 ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಅಧಿಕಾರಿಗಳು ಜಗನ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಣಕಾಸು ಇಲಾಖೆ ಜೊತೆ ಚರ್ಚಿಸಿ ಹೆಚ್ಚುವರಿ ಅನುದಾನವನ್ನು ಕ್ರೋಢೀ ಕರಿಸುವ ಮಾರ್ಗಗಳನ್ನು ಕಂಡುಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಜಗನ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಅಮರಾವತಿಯನ್ನು ಆಂಧ್ರದ ರಾಜಧಾನಿಯನ್ನಾಗಿ ಘೋಷಿಸಿ, ಬೃಹತ್ ಪ್ರಮಾಣದಲ್ಲಿ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿದ್ದರು. ಇದಕ್ಕಾಗಿ 30 ಸಾವಿರ ಎಕರೆ ಭೂಮಿಯನ್ನೂ ಸ್ವಾಧೀನಪಡಿಸಿಕೊಂಡಿದ್ದರು.
ಸಹಸ್ರಾರು ಕೋಟಿ ರೂ. ವೆಚ್ಚದಲ್ಲಿ ಹಲವು ಕಟ್ಟಡಗಳನ್ನು ನಿರ್ಮಿಸಲಾಗುತ್ತಿತ್ತು. 2019ರ ಮೇ ತಿಂಗಳಿನಲ್ಲಿ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗುತ್ತಿ ದ್ದಂತೆಯೇ ಅಮರಾವತಿಯಲ್ಲಿ ನಡೆಯುತ್ತಿದ್ದ ಕೆಲಸ ಸ್ಥಗಿತಗೊಳಿಸಿದ್ದರು. ಅ ಈ ನಡುವೆ ಕಳೆದ ತಿಂಗಳು ಆಂಧ್ರಪ್ರದೇಶಕ್ಕೆ ಮೂರು ರಾಜ ಧಾನಿಗಳ ವಿಧೇಯಕ ಅಂಗೀಕರಿಸಿ, ಅಮರಾವತಿ, ವಿಶಾಖಪಟ್ಣಣ, ಕರ್ನೂಲು ಅನ್ನು ರಾಜಧಾನಿಯನ್ನಾಗಿ ರಚಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Fight Alone: ಮಹಾರಾಷ್ಟ್ರದಲ್ಲೂ ಇಂಡಿ ಮೈತ್ರಿಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?
Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ
Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!
Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.