ಬೌದ್ಧಿಕ ಅಪ್ರಾಮಾಣಿಕತೆ, ರಾಜಕೀಯ ದ್ರೋಹ: ಮೋದಿ

ವಿಪಕ್ಷಗಳ ಇಬ್ಬಗೆ ನೀತಿ ವಿರುದ್ಧ ಪ್ರಧಾನಿ ಗುಡುಗು

Team Udayavani, Oct 3, 2021, 6:15 AM IST

ಬೌದ್ಧಿಕ ಅಪ್ರಾಮಾಣಿಕತೆ, ರಾಜಕೀಯ ದ್ರೋಹ: ಮೋದಿ

ಹೊಸದಿಲ್ಲಿ: “ಕೃಷಿ ಕಾಯ್ದೆಗಳನ್ನು ವಿರೋಧಿಸುವವರು ರಾಜಕೀಯ ದ್ರೋಹಿಗಳು.'”ನಾನು ಟೀಕೆಗಳನ್ನು ಗೌರವಿಸುತ್ತೇನೆ. ಆದರೆ ನೈಜ ಟೀಕಾಕಾರರ ಸಂಖ್ಯೆ ಕಡಿಮೆಯಿದೆ.'”ಸನ್ನಿವೇಶ ನನ್ನನ್ನು ರಾಜಕೀಯ ಸ್ವೀಕರಿಸುವಂತೆ ಮಾಡಿತು…’

-ಇವು ಚುನಾವಣ ರಾಜಕೀಯದಲ್ಲಿ 2 ದಶಕಗಳ ಅವಧಿ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಅವರ ಮನದಾಳದ ಮಾತುಗಳು. “ಓಪನ್‌ ಮ್ಯಾಗಸಿನ್‌’ಗೆ ನೀಡಿರುವ ಸಂದರ್ಶನದಲ್ಲಿ ಮೋದಿ ತಮ್ಮ ರಾಜಕೀಯ ಪ್ರವೇಶದಿಂದ ಹಿಡಿದು ತಮ್ಮ ಸರಕಾರದ ನೀತಿಗಳು, ವಿಪಕ್ಷಗಳ ಟೀಕೆ, ಕೃಷಿ ಕಾಯ್ದೆಗೆ ವಿರೋಧ, ಕೊರೊನಾ ಸೋಂಕಿ ನವರೆಗೆ ಹಲವು ವಿಚಾರಗಳ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ.

ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮಾತನಾಡಿದ ಮೋದಿ, ರೈತರ ಪರ ನಾವು ತಂದಿರುವ ಸುಧಾರಣ ಕ್ರಮಗಳನ್ನು ವಿರೋಧಿಸುವವರಲ್ಲಿ ನೀವು ನಿಜವಾದ “ಬೌದ್ಧಿಕ ಅಪ್ರಾಮಾಣಿಕತೆ’ ಮತ್ತು “ರಾಜಕೀಯ ದ್ರೋಹ’ವನ್ನು ಕಾಣಬಹುದು. ಇದೇ ರೀತಿಯ ವಂಚನೆಯನ್ನು ನೀವು ಆಧಾರ್‌, ಜಿಎಸ್‌ಟಿ ಜಾರಿ ವೇಳೆಯೂ ನೋಡಿರುತ್ತೀರಿ. ಬಹುಸಂಖ್ಯೆಯ ಜನರ ಹಿತಾಸಕ್ತಿಯನ್ನು ಹೊಂದಿರುವ ನಿರ್ಧಾರಗಳನ್ನು ಜಾರಿ ಮಾಡುವುದು ಸರಕಾರದ ಹೊಣೆಗಾರಿಕೆಯಾಗಿರುತ್ತದೆ. ವಿಪಕ್ಷ ಕಾಂಗ್ರೆಸ್‌ಗೆ “ರಾಜಕೀಯ’ ಮತ್ತು “ಆರ್ಥಿಕ ಚಿಂತನೆ’ ಗಳ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಸಿಕ್ಕಿಂನಲ್ಲಿ ಮಿನರಲ್‌ ನೀರಿನ ಬಾಟಲ್‌ಗೆ ನಿಷೇಧ

ಕಳಂಕ ತರುವವರು ಇಲ್ಲೇ ಇದ್ದಾರೆ
ಕೋವಿಡ್‌ ಸೋಂಕು ಮತ್ತು ಲಸಿಕೆ ವಿತರಣೆ ಕುರಿತು ಪ್ರಸ್ತಾವಿಸಿದ ಮೋದಿ, ಜಗತ್ತಿನ ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಸೋಂಕಿನ ವಿರುದ್ಧ ಪ್ರಬಲ ಹೋರಾಟ ನಡೆಸಿದೆ. ಅಲ್ಲದೆ ಲಸಿಕೆ ವಿತರಣೆಯಲ್ಲಿ ನಾವುಯಶಸ್ಸು ಸಾಧಿಸಲು ದೇಶದ ಸ್ವಾವಲಂಬನೆ ಮತ್ತು ತಂತ್ರಜ್ಞಾನವೇ ಕಾರಣ. ಹೀಗಿದ್ದರೂ ನಮ್ಮ ನಡುವೆಯೇ ಇರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದೇಶಕ್ಕೆ ಕಳಂಕ ತರುವ ಪ್ರಯತ್ನಗಳನ್ನು ಮಾಡುತ್ತಲೇ ಇವೆ ಎಂದು ಕಿಡಿ ಕಾರಿದ್ದಾರೆ.

ಪ್ರಮುಖ ಅಂಶಗಳು
1. ಅಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದ ನಾನು 20 ವರ್ಷಗಳ ಹಿಂದೆ ಪರಿಸ್ಥಿತಿಗೆ ಕಟ್ಟುಬಿದ್ದು ಸಂಪೂರ್ಣವಾಗಿ ಭಿನ್ನವಾದ ರಾಜಕೀಯ ಪ್ರಪಂಚಕ್ಕೆ ಕಾಲಿರಿಸಿದೆ.
2. ಕೃಷಿ ಕಾಯ್ದೆಗಳನ್ನು ವಿರೋಧಿಸುವವರಲ್ಲಿ ನೀವು ನೈಜ “ಬೌದ್ಧಿಕ ಅಪ್ರಾಮಾಣಿಕತೆ’ ಮತ್ತು “ರಾಜಕೀಯ ದ್ರೋಹ’ ಗಳನ್ನು ಕಾಣಬಹುದು.
3. ಆಶ್ವಾಸನೆ ನೀಡುವುದು, ಅದಕ್ಕಾಗಿ ವಾದಿಸುವುದು, ಕೊನೆಗೆ ನಾವದನ್ನು ಜಾರಿ ಮಾಡುವಾಗ ಅದನ್ನೇ ವಿರೋಧಿಸುವುದು ವಿಪಕ್ಷಗಳ ಕಾಯಕ.
4. ಹಿಂದೆ ಆಳಿದವರು “ಸರಕಾರ ನಡೆಸುವುದೇ ಚುನಾವಣೆ ಯಲ್ಲಿ ಪಕ್ಷವನ್ನು ಗೆಲ್ಲಿಸಲು’ ಎಂದು ನಂಬಿದ್ದರು. ಆದರೆ ನಾನು ಸರಕಾರ ನಡೆಸುವುದು ನನ್ನ ದೇಶವನ್ನು ಗೆಲ್ಲಿಸಲು.
05. ನಾನು ಟೀಕಾಕಾರರನ್ನು ಗೌರವಿಸುತ್ತೇನೆ. ಆದರೆ ಅಂಥವರ ಸಂಖ್ಯೆ ಕಡಿಮೆಯಿದೆ. ಪೂರ್ವಗ್ರಹದೊಂದಿಗೆ ಆರೋಪ ಮಾಡುವವರೇ ಹೆಚ್ಚಿದ್ದಾರೆ.
06. ಬಡವರ ಪರ, ಉದ್ದಿಮೆ ಪರ ನೀತಿಯು ಪರಸ್ಪರ ನಂಟು ಹೊಂದಿರುವಂಥದ್ದು. ನನ್ನ ಪ್ರಕಾರ ನೀತಿನಿರೂಪಣೆಯು ಜನಪರವಾಗಿದ್ದರೆ ಸಾಕು.
07. ಇಂದು ಕೋವಿಡ್‌ ವಿರುದ್ಧ ಲಸಿಕೆ ವಿತರಣೆಯಲ್ಲಿ ಭಾರತದ ಯಶಸ್ಸಿಗೆ ನಮ್ಮ ದೇಶವು ಆತ್ಮನಿರ್ಭರವಾಗಿ ಬೆಳೆದದ್ದೇ ಕಾರಣ.

ಟಾಪ್ ನ್ಯೂಸ್

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

udupi

udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.