![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 14, 2023, 3:44 PM IST
ಹೊಸದಿಲ್ಲಿ: 2019ರಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ ಗುಪ್ತಚರ ವೈಫಲ್ಯದಿಂದ 40 ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಮಂಗಳವಾರ ಹೇಳಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ರಾಜ್ಯಸಭಾ ಸಂಸದ ದಿಗ್ವಿಜಯ ಸಿಂಗ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
2019ರ ಫೆಬ್ರವರಿ 14 ರಂದು, 22 ವರ್ಷದ ಆತ್ಮಾಹುತಿ ಬಾಂಬರ್ ಆದಿಲ್ ಅಹ್ಮದ್ ದಾರ್, ಐಇಡಿ ತುಂಬಿದ ವಾಹನವನ್ನು ಸಿಆರ್ ಪಿಎಫ್ ಬೆಂಗಾವಲುಪಡೆಗೆ ಢಿಕ್ಕಿ ಹೊಡೆದು ಸ್ಫೋಟಿಸಿದ್ದ. ಘಟನೆಯಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.
“ಇಂದು ನಾವು ಪುಲ್ವಾಮಾದಲ್ಲಿ ಗುಪ್ತಚರ ವೈಫಲ್ಯದಿಂದ ಮಡಿದ 40 ಸಿಆರ್‌ಪಿಎಫ್ ಹುತಾತ್ಮರಿಗೆ ನಮನ ಸಲ್ಲಿಸುತ್ತೇವೆ. ಹುತಾತ್ಮರಾದ ಎಲ್ಲಾ ಕುಟುಂಬಗಳನ್ನು ಸೂಕ್ತವಾಗಿ ಪುನರ್ವಸತಿ ಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ.” ಎಂದು ಸಿಂಗ್ ಅವರು ಟ್ವೀಟ್ ಮಾಡಿದ್ದಾರೆ.
Today we pay homage to the 40 CRPF Martyrs who died because of the blatant Intelligence Failure in Pulwama.
I hope all the Martyred Families have been suitably rehabilitated.— digvijaya singh (@digvijaya_28) February 14, 2023
ಪುಲ್ವಾಮಾ ದಾಳಿ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ಇದು ದಿಗ್ವಿಜಯ ಸಿಂಗ್ ಅವರ ಮೆದುಳಿನ ವೈಫಲ್ಯ ಎಂದು ನಾನು ಭಾವಿಸುತ್ತೇನೆ. ಅವರು ಸೇನೆಯನ್ನು ಅವಮಾನಿಸುತ್ತಾರೆ, ಪಾಕಿಸ್ತಾನದ ಭಾಷೆ ಮಾತನಾಡುತ್ತಾರೆ ಮತ್ತು ಸೇನೆಯನ್ನು ಕೆಳಮಟ್ಟಕ್ಕಿಳಿಸಲು ಪ್ರಯತ್ನಿಸುತ್ತಾರೆ. ರಾಷ್ಟ್ರ ಮತ್ತು ಸೇನೆಯ ವಿರುದ್ಧ ಮಾತನಾಡಲು ಅವನ ಮೆದುಳಿನಲ್ಲಿ ಯಾರು ಬೀಜಗಳನ್ನು ಬಿತ್ತುತ್ತಾರೆ”, ಎಂದು ಚೌಹಾಣ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.