![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Oct 1, 2021, 7:15 AM IST
ಹೊಸದಿಲ್ಲಿ: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ), ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲೆ ಹಾಲಿ ಇರುವ ಬಡ್ಡಿ ದರವನ್ನು ಮುಂದುವರಿಸಲಾಗಿದೆ.
ಪ್ರಸಕ್ತ ವಿತ್ತೀಯ ವರ್ಷದ ಅ. 1ರಿಂದ ಡಿ. 31ರ ವರೆಗಿನ 3ನೇ ತ್ತೈಮಾಸಿಕಕ್ಕೆ ಈ ಬಡ್ಡಿದರ ಇರಲಿವೆ ಎಂದು ಸರಕಾರ ಪ್ರಕಟಿಸಿದೆ.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ ಎಂಬ ವಿಶ್ಲೇಷಣೆ ನಡೆದಿದೆ.
ಬೆಳ್ಳಿ ಇಟಿಎಫ್ ಗೆ ಅನುಮತಿ:
ಷೇರು ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ವು ಮ್ಯೂಚುವಲ್ ಫಂಡ್‌ಗಳಿಗೆ ಬೆಳ್ಳಿಯ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ಪರಿಚಯಿಸಲು ಅನುಮತಿ ನೀಡಿದೆ. ಇದು ವರೆಗೆ ಚಿನ್ನದ ಇಟಿಎಎಫ್ ಮಾತ್ರ ಇತ್ತು.
ಚಿನ್ನದ ಬೆಲೆ ಇಳಿಕೆ:
ರಾಷ್ಟ್ರ ರಾಜಧಾನಿಯ ಚಿನಿವಾರಕಟ್ಟೆ ಯಲ್ಲಿ ಗುರುವಾರ 10 ಗ್ರಾಂ ಚಿನ್ನದ ಧಾರಣೆ 154 ರೂ. ಕಡಿಮೆಯಾಗಿದ್ದು, 44,976 ರೂ.ಗಳಾಗಿದ್ದವು. ಚಿನ್ನದ ಅಂತಾರಾಷ್ಟ್ರೀಯ ದರ ಕುಸಿತದಿಂದಾಗಿ ಈ ಬೆಳವಣಿಗೆ ಯಾಗಿದೆ. ಪ್ರತೀ ಕೆ.ಜಿ. ಬೆಳ್ಳಿಗೂ 1,337 ರೂ. ಇಳಿಕೆಯಾಗಿ 58,692 ರೂ. ಆಗಿದೆ.
ಎಷ್ಟು ಬಡ್ಡಿ?:
ಪಿಪಿಎಫ್ :
ಶೇ. 7.1
ಎನ್‌ಎಸ್‌ಸಿ:
ಶೇ. 6.8
ಅಂಚೆ ಮಾಸಿಕ ಆದಾಯ ಖಾತೆ :
ಶೇ. 6.6
ಹಿರಿಯ ನಾಗರಿಕರ ಉಳಿತಾಯ ಖಾತೆ :
ಶೇ. 7.4
1 ವರ್ಷದ ನಿರಖು ಠೇವಣಿ ಶೇ. 5.5
ಸುಕನ್ಯಾ ಸಮೃದ್ಧಿ :
ಶೇ. 7.6
5 ವರ್ಷಗಳ ಆರ್‌ಡಿ ಶೇ. 5.8
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.