Goa ಪೊಲೀಸರಿಂದ ಅಂತಾರಾಷ್ಟ್ರೀಯ ವೇಶ್ಯಾವಾಟಿಕೆ ಜಾಲ ಭೇದನ
ವಿದೇಶದ ಇಬ್ಬರು ಪಿಂಪ್ ಗಳ ಬಂಧನ... ಪೊಲೀಸರಿಗೇ ಬೆದರಿಕೆ!..ಬೆಂಗಳೂರಿಗೂ ನಂಟು
Team Udayavani, Sep 11, 2023, 3:52 PM IST
ಪಣಜಿ: ಅಂತಾರಾಷ್ಟ್ರೀಯ ಸೆಕ್ಸ್ ರಾಕೆಟ್ ಅನ್ನು ಭೇದಿಸಿದ ಹಣಜುಣ ಪೊಲೀಸರು ಐವರು ಯುವತಿಯರನ್ನು ಬಿಡುಗಡೆ ಮಾಡಿದ್ದಾರೆ. ಪೋಲಿಸರು ಕಾರ್ಯಾಚರಣೆ ನಡೆಸಿ ಇಬ್ಬರು ಕೀನ್ಯಾದ ಮಹಿಳಾ ಪಿಂಪ್‍ಗಳನ್ನು ಬಂಧಿಸಿದ್ದಾರೆ. ಆತಿಥ್ಯ ಉದ್ಯಮದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಕೀನ್ಯಾದ ವಿದ್ಯಾವಂತ ಯುವತಿಯರನ್ನು ಗೋವಾದಲ್ಲಿ ವೇಶ್ಯಾವಾಟಿಕೆಗೆ ಕಳ್ಳಸಾಗಣೆ ಮಾಡುತ್ತಿರುವುದು ಬಹಿರಂಗವಾಗಿದೆ.
ಈ ನಡುವೆ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದ್ದು, ಈ ದಂಧೆ ಪೊಲೀಸರಿಗೆ ಬೆದರಿಕೆಯೊಡ್ಡಿದೆ ಎನ್ನಲಾಗುತ್ತಿದೆ. ಪೊಲೀಸರು ಬಯಲಿಗೆಳೆದ ಸೆಕ್ಸ್ ರಾಕೆಟ್ ಪ್ರಕರಣದಲ್ಲಿ ಹಣಜುಣ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯ ಕೈವಾಡವಿರುವುದು ಬಯಲಾಗಿದೆ. ಭಾಗಿಯಾದ ಶಂಕಿತ ಆರೋಪಿಯಿಂದ ಪೊಲೀಸ್ ನೌಕರ ರಕ್ಷಣೆ ಧನ ಪಡೆಯುತ್ತಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ಪೊಲೀಸ್ ಸಿಬಂದಿಯನ್ನು ತತ್ ಕ್ಷಣವೇ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದ್ದು, ಆಂತರಿಕ ವಿಚಾರಣೆ ಆರಂಭಿಸಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಕಿನ್ಯಾದ ಹುಡುಗಿಯರನ್ನು ಬೆಂಗಳೂರಿನಲ್ಲಿ ವೇಶ್ಯಾವಾಟಿಕೆಗೆ ದಲ್ಲಾಳಿಗಳು ನೇಮಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಮಹಿಳಾ ಕಳ್ಳಸಾಗಣೆ ವಿರೋಧಿ ಎನ್‍ಜಿಒ ಅರ್ಜ್‍ಗೆ ಸಿಕ್ಕಿತ್ತು. ಹಣಜುಣ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗಿದೆ. ಸುಮಾರು ಐದು ವರ್ಷಗಳಿಂದ ಗೋವಾದಲ್ಲಿ ಈ ದಂಧೆ ಆರಂಭವಾಗಿತ್ತು. ಆದರೆ, ಈ ದಂಧೆ ನಡೆಸುತ್ತಿರುವ ಶಂಕಿತರು ಪದೇ ಪದೇ ಸ್ಥಳ ಬದಲಾಯಿಸುವುದರಿಂದ ಪೊಲೀಸರಿಗೆ ಸಿಕ್ಕಿ ಬೀಳುತ್ತಿರಲಿಲ್ಲ. ಉದ್ಯೋಗದ ನೆಪದಲ್ಲಿ ಕೀನ್ಯಾದಿಂದ ಗೋವಾಕ್ಕೆ ಕರೆತಂದ ಈ ಯುವತಿಯರು ಗೋವಾ ಮತ್ತು ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ. ಪೋಲಿಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.