ಐಐಟಿ ಮದ್ರಾಸ್ ಕಾರ್ಯಕ್ರಮದಲ್ಲಿ ಸಂಸ್ಕೃತ ಸ್ವಸ್ತಿ ಗೀತೆ: ವಿವಾದ
Team Udayavani, Feb 26, 2018, 4:34 PM IST
ಚೆನ್ನೈ : ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಹಣಕಾಸು ಸಹಾಯಕ ಸಚಿವ ಪೊನ್ ರಾಧಾಕೃಷ್ಣನ್ ಭಾಗವಹಿಸಿದ್ದ ಐಐಟಿ ಮದ್ರಾಸ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಸ್ಕೃತ ಸ್ವಸ್ತಿ ಗೀತೆ ಹಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಬಂದರು, ಜಲಮಾರ್ಗ ಮತ್ತು ಕರಾವಳಿಗಳ ರಾಷ್ಟ್ರೀಯ ತಂತ್ರಜ್ಞಾನ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದಿವಂಗತ ಕವಿ ಮುತ್ತುಸ್ವಾಮಿ ದೀಕ್ಷಿತರ್ ವಿರಚಿತ ಸುಪ್ರಸಿದ್ಧ “ಮಹಾ ಗಣಪತಿಂ ಮನಸಾ ಸ್ಮರಾಮಿ’ ಸಂಸ್ಕೃತ ಗೀತೆಯನ್ನು ಸ್ವಸ್ತಿ ಗೀತೆಯಾಗಿ ಹಾಡಿದರು. ಸಾಮಾನ್ಯವಾಗಿ ತಮಿಳು ನಾಡಿನ ಸರಕಾರಿ ಕಾರ್ಯಕ್ರಮಗಳಲ್ಲಿ “ತಮಿಳ್ ತಾಯಿ ವಳತ್ತು’ ಗೀತೆಯನ್ನು ಸ್ವಸ್ತಿ ಗೀತೆಯಾಗಿ ಹಾಡುವುದು ವಾಡಿಕೆ.
”ಇದಕ್ಕೆ ವ್ಯತಿರಿಕ್ತವಾಗಿ ಸಂಸ್ಕೃತ ಗೀತೆಯನ್ನು ಹಾಡಲಾಗಿದೆ; ಈ ಮೂಲಕ ಕೇಂದ್ರವು ರಾಜ್ಯದಲ್ಲಿ ಸಂಸ್ಕೃತ ಮತ್ತು ಹಿಂದಿಯನ್ನು ಹೇರುತ್ತಿದೆ” ಎಂದು ಎಂಡಿಎಂಕೆ ಮುಖ್ಯಸ್ಥ ವೈಕೋ ಖಂಡಿಸಿದರು.
ಆದರೆ ಐಐಟಿ ಮದ್ರಾಸ್ ಆಡಳಿತೆಯು ಸ್ಪಷ್ಟನೆ ನೀಡಿ, ಸ್ವಸ್ತಿ ಗೀತೆಯಾಗಿ ಯಾವ ಗೀತೆ ಹಾಡಬೇಕೆಂಬ ಬಗ್ಗೆ ಆಡಳಿತೆಯು ವಿದ್ಯಾರ್ಥಿಗಳಿಗೆ ಸೂಚನೆ ನೀಡುವ ಕ್ರಮವಿಲ್ಲ. ಇದು ಅವರ ಆಯ್ಕೆಯೇ ವಿನಾ ಆಡಳಿತೆಯದ್ದಲ್ಲ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
MUST WATCH
ಹೊಸ ಸೇರ್ಪಡೆ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.