IPL ಮಾದರಿ: ತಮಿಳುನಾಡಿನಲ್ಲಿ ಜಲ್ಲಿಕಟ್ಟಿಗೆ ನವಸ್ವರೂಪ
Team Udayavani, Jan 25, 2024, 6:12 AM IST
ಮಧುರೈ: ಕರ್ನಾಟಕದ ಕಂಬಳವನ್ನು ಐಪಿಎಲ್ ಮಾದರಿಯಲ್ಲಿ ನಡೆಸುವ ಬಗ್ಗೆ ಮಾತುಕತೆಗಳು ಕೇಳಿಬರುತ್ತಿರುವಾಗಲೇ; ತಮಿಳುನಾಡಿನಲ್ಲಿ ಅತ್ಯಂತ ಜನಪ್ರಿಯ ಗ್ರಾಮೀಣ ಕ್ರೀಡೆಯಾಗಿರುವ ಜಲ್ಲಿಕಟ್ಟು ಐಪಿಎಲ್ ಮಾದರಿಗೆ ಬದಲಾಗಿಯಾಗಿದೆ! ಸ್ವತಃ ತಮಿಳು ನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಐಪಿಎಲ್ ಮಾದರಿಯ ಜಲ್ಲಿಕಟ್ಟು ಕೂಟವನ್ನು ಮಧುರೈ ಜಿಲ್ಲೆಯ ಕೀಲಕಾರೈ ಹಳ್ಳಿಯಲ್ಲಿ ಉದ್ಘಾಟಿಸಿದ್ದಾರೆ. 66 ಎಕ್ರೆ ವಿಸ್ತಾರದಲ್ಲಿ, 44 ಕೋ.ರೂ. ವೆಚ್ಚದಲ್ಲಿ ಇದಕ್ಕೆಂದೇ ನಿರ್ಮಾಣವಾಗಿ ರುವ ಕಲೈನಾರ್ ಶತಮಾನೋತ್ಸವ ಜಲ್ಲಿಕಟ್ಟು ಮೈದಾನವೂ ಲೋಕಾರ್ಪಣೆ ಯಾಗಿದೆ. ಇದು ಜಲ್ಲಿಕಟ್ಟು ಕ್ರೀಡೆಗೆಂದೇ ಸಿದ್ಧವಾಗಿರುವ ದೇಶದ ಬೃಹತ್ ಮೈದಾನ.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಪ್ರಿಯವಾಗಿರುವ ಕಂಬಳ, ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿತ್ತು. ಉದ್ಯಾನ ನಗರಿಯಲ್ಲಿ ದೊಡ್ಡ ಸದ್ದು ಮಾಡಿದ್ದ ಕಂಬಳವನ್ನು, ಆಗಲೇ ಐಪಿಎಲ್ ಮಾದರಿ ಯಲ್ಲಿ ನಡೆಸುವ ಬಗ್ಗೆ ರಾಜ್ಯದಲ್ಲಿ ಮಾತು ಗಳು ಕೇಳಿಬಂದಿದ್ದವು. ಅದಿನ್ನೂ ಸಾಕಾರ ಗೊಂಡಿಲ್ಲ. ಅಷ್ಟರಲ್ಲೇ ತಮಿಳುನಾಡಿನ ಮಧುರೈ ಜಿಲ್ಲಾಡಳಿತ ಐಪಿಎಲ್ ಮಾದರಿಯ ಜಲ್ಲಿಕಟ್ಟು ಆರಂಭಿಸಿದೆ.
ಬುಧವಾರ ಜಲ್ಲಿಕಟ್ಟು ಪಂದ್ಯಗಳಿಗೆ ಚಾಲನೆ ನೀಡಿದ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್, ತಮ್ಮ 3 ವರ್ಷಗಳ ಆಡಳಿತಾ ವಧಿಯಲ್ಲಿ ಮೂರು ಸ್ಥಳೀಯ ಗ್ರಾಮೀಣ ಸಂಸ್ಕೃತಿಗಳಿಗೆ ವಿಶೇಷ ಆದ್ಯತೆ ನೀಡಿದ್ದೇನೆ ಎಂದು ತಿಳಿಸಿದರು.
ತಮಿಳುನಾಡಿನ ಮಧುರೈ, ಶಿವಗಂಗಾ, ಪುದುಕೊಟ್ಟೈ ಜಿಲ್ಲೆಗಳಲ್ಲಿ ಓಡುವ ಗೂಳಿಗಳನ್ನು ಹಿಡಿಯುವ ಜಲ್ಲಿಕಟ್ಟು ಕ್ರೀಡೆ ಜನಪ್ರಿಯವಾಗಿದೆ. ಹಾಗೆಯೇ ಅದರ ಹಿಂಸಾತ್ಮಕ ಸ್ವರೂಪದಿಂದ ವಿವಾದವನ್ನೂ ಕೆರಳಿಸಿದೆ. ಪ್ರಾಣಿದಯಾ ಸಂಘದವರ ವಿರೋಧದ ಹಿನ್ನೆಲೆಯಲ್ಲಿ ಒಮ್ಮೆ ಸವೋ ìಚ್ಚ ನ್ಯಾಯಾಲಯವೂ ಈ ಕ್ರೀಡೆಯನ್ನು ನಿಷೇಧಿಸಿತ್ತು. ತಮಿಳುನಾಡು ಸರಕಾರದ ಮೇಲ್ಮನವಿ ಹಿನ್ನೆಲೆಯಲ್ಲಿ ಮತ್ತೆ ಅನುಮತಿ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.