ಐಸಿಸ್ ವಿರುದ್ಧದ ಸಮರ ಕೊನೆ ಎಂದ ಇರಾಕ್ ಪಿಎಂ
Team Udayavani, Dec 10, 2017, 8:00 AM IST
ಬಾಗ್ಧಾದ್: ಇರಾಕ್‌ನಲ್ಲಿ ಉಗ್ರ ಸಂಘಟನೆ ಐಸಿಸ್ ವಿರುದ್ಧದ ಹೋರಾಟ ಮುಕ್ತಾಯವಾಗಿದೆ. ಹೀಗೆಂದು ಅಲ್ಲಿನ ಪ್ರಧಾನಿ ಹೈದರ್ ಅಲ್-ಅಬಾಡಿ ಶನಿವಾರ ಘೋಷಣೆ ಮಾಡಿದ್ದಾರೆ. ಸಿರಿಯಾ ಜತೆಗೆ ಹೊಂದಿಕೊಂಡಿರುವ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತಾಪಡೆಗಳು ಉಗ್ರ ಸಂಘಟನೆ ಜತೆಗಿನ ಹೋರಾಟದಲ್ಲಿ ಯಶಸ್ಸುಗಳಿಸಿವೆ. ಜತೆಗೆ ವಶಪಡಿಸಿಕೊಂಡ ಸ್ಥಳಗಳನ್ನು ಕಾಯ್ದುಕೊಳ್ಳುತ್ತಿವೆ ಎಂದು ಅವರು ಹೇಳಿದ್ದಾರೆ. ಇದರ ಜತೆಗೆ ಇರಾಕ್ ಸೇನೆಯ ಹಿರಿಯ ಅಧಿಕಾರಿ ಕೂಡ ಹೋರಾಟ ಮುಕ್ತಾಯಗೊಂಡಿರುವುದನ್ನು ಖಚಿತಪಡಿಸಿದ್ದಾರೆ. ಬರೋಬ್ಬರಿ ಮೂರುವರೆ ವರ್ಷಗಳಿಂದ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಸೇನಾ ಪಡೆಯ ಸಹಕಾರದೊಂದಿಗೆ ಇರಾಕ್ ಸೇನಾ ಪಡೆ ಉಗ್ರ ಸಂಘಟನೆ ಐಸಿಸ್ ವಿರುದ್ಧ ಹೋರಾಟ ನಡೆಸುತ್ತಿತ್ತು. ಈ ಹೋರಾಟದ ಫಲವಾಗಿ ಉಗ್ರ ಸಂಘಟನೆಯನ್ನು ಹೊಡೆದಟ್ಟುವಲ್ಲಿ ಯಶಸ್ವಿಯಾಗಿದೆ.
ನವೆಂಬರ್‌ನಲ್ಲಿ ಸಿರಿಯಾ ಗಡಿ ಪ್ರದೇಶದಲ್ಲಿರುವ ಪ್ರಮುಖ ನಗರ ರಾವಾವನ್ನು ವಶಕ್ಕೆ ಪಡೆಯಲಾಗಿತ್ತು. ಉಗ್ರರ ವಿರುದ್ಧ ಜಯ ಸಾಧಿಸಿದರೂ, ಐಸಿಸ್ ಆಗಾಗ ಇರಾಕ್‌ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.