![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Jan 31, 2021, 12:21 PM IST
ನವ ದೆಹಲಿ : ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಟೂರಿಸಮ್ ಕಾರ್ಪೋರೇಷನ್ ( ಐ ಆರ್ ಸಿ ಟಿ ಸಿ) ತನ್ನ ಇ ಕ್ಯಾಟರಿಂಗ್ ಸೇವೆಗಳನ್ನು ಪುನರಾರಂಭಿಸಲು ಸಜ್ಜಾಗಿದೆ.
ಓದಿ : ವಿದ್ಯಾರ್ಥಿಗಳಲ್ಲಿಸಾಮಾಜಿಕ ಜಾಲತಾಣದಲ್ಲಿನ ಕಳೆದುಹೋಗುವ ಭಯ ಕಡಿಮೆ ಮಾಡುವುದು ಹೇಗೆ?
ಕೋವಿಡ್ ಕಾರಣದಿಂದಾಗಿ ಸುಮಾರು ಒಂದು ವರ್ಷ ಸ್ಥಗಿತಗೊಂಡಿದ್ದ ಇ ಕ್ಯಾಟರಿಂಗ್ ಸೇವೆಯನ್ನು ನಾಳೆ(ಫೆ. 1) ಯಿಂದ ಪ್ರಾರಂಭಿಸಲಾಗುತ್ತಿದೆ.
ಐ ಆರ್ ಸಿ ಟಿ ಸಿ ಪ್ರಯಾಣಿಕರಿಗೆ ಸುಲಭ ಸೌಲಭ್ಯಕ್ಕಾಗಿ 2014ರಲ್ಲಿ ಈ ಸೇವೆಯನ್ನು ಆರಂಭಿಸಿತ್ತು. ಈ ಸೇವೆಯನ್ನು ರೈಲು ಪ್ರಯಾಣಿಕರು, “ಫುಡ್ ಆನ್ ಟ್ರ್ಯಾಕ್” ಅಪ್ಲಿಕೇಶನ್ ಮೂಲಕ ಅಥವಾ ಐ ಆರ್ ಸಿ ಟಿ ಸಿ ಯ ಅಧಿಕೃತ ವೆಬ್ ಸೈಟ್ WWW.ecatering.irctc.com ನಲ್ಲಿಯೂ ಕೂಡ ಪಡೆಯಬಹುದು ಎಂದು ಹೇಳಿದೆ.
ಓದಿ : ಕೆಲವು ಅವಧಿಯ ನಂತರ ಸ್ಟ್ರೀಮಿಂಗ್ ಮಾಡುವುದನ್ನು ನಿಲ್ಲಿಸಲಿದೆ ನೆಟ್ ಪ್ಲಿಕ್ಸ್ ..!?
“ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯ ರೈಲ್ವೆ ಸ್ಥಗಿತಗೊಳಿಸಿದ್ದ ಇ-ಕ್ಯಾಟರಿಂಗ್ ಸೇವೆಯನ್ನು ನಾಳೆ (ಫೆ 1) ಯಿಂದ ಪುನರಾರಂಭಿಸಲಿದೆ. ಪ್ರಯಾಣಿಕರಿಗೆ ಉತ್ತಮ ಮತ್ತು ಆದ್ಯತೆಯ ಸೇವೆಯನ್ನು ಒದಗಿಸಲು ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಪಾಲಿಸುವುದರ ಮೂಲಕ ಈ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ” ರೈಲ್ವೆ ಸಚಿವಾಲಯವು ಹಿಂದಿಯಲ್ಲಿ ಟ್ವೀಟ್ ಮಾಡಿದೆ.
ಆರಂಭದ ಹಂತದಲ್ಲಿ ನವ ದೆಹಲಿ, ಲಕ್ನೋ, ಪಾಟ್ನಾ, ಸೂರತ್, ಭೋಪಾಲ್, ಅಹಮದಬಾದ್, ಪುಣೆ, ವಿಜಯವಾಡ, ಎರ್ನಾಕುಲಮ್, ಉಜೈನ್, ಪನ್ವೆಲ್ ಹಾಗೂ ಹೌರಾ ರೈಲ್ವೇ ಸ್ಟೇಷನ್ ಗಳನ್ನೊಳಗೊಂಡು ದೇಶದಾದ್ಯಂತ 62 ಸ್ಟೇಷನ್ ಗಳಲ್ಲಿ ಇ ಕ್ಯಾಟರಿಂಗ್ ನ್ನು ಪ್ರಾರಂಭಿಸಲಾಗುತ್ತಿದೆ.
ಐ ಆರ್ ಸಿ ಟಿ ಸಿ ಇ ಕ್ಯಾಟರಿಂಗ್ ಸೇವೆಯನ್ನು ಪಡೆಯುವುದು ಹೇಗೆ..?
* ಐ ಆರ್ ಸಿ ಟಿ ಸಿ ಇ ಯ ಅಧಿಕೃತ ವೆಬ್ ಸೈಟ್(WWW.ecatering.irctc.com) ಮೂಲಕ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. · * ಟೆಲಿಫೋನ್ ಮೂಲಕ ಕೂಡ ಸೇವೆಯನ್ನು ಪಡೆಯಬಹುದು. 1323 ನಂಬರ್ ಗೆ ಕರೆ ಮಾಡುವುದರ ಮೂಲಕ ಐ ಆರ್ ಸಿ ಟಿ ಸಿ ಇ ಕ್ಯಾಟರಿಂಗ್ ಸೇವೆಯನ್ನು ಪಡೆಯಬಹುದಾಗಿದೆ.
*ಐ ಆರ್ ಸಿ ಟಿ ಸಿ ಯ ಅಪ್ಲಿಕೇಶನ್ “ಫುಡ್ ಆನ್ ಟ್ರ್ಯಾಕ್” ನ ಮೂಲಕವೂ ಪ್ರಯಾಣಿಕರಿಗೆ ಈ ಸೇವೆ ಲಭ್ಯವಿದೆ.
* ಕ್ಯಾಶ್ ಆನ್ ಡೆಲಿವರಿ ಸೌಲಭ್ಯವು ಕೂಡ ಲಭ್ಯವಿದೆ.
ಓದಿ : “ಹಾರ್ಮ್ ಫುಲ್ ಕಂಟೆಂಟ್ ಗಳನ್ನು ನಿಯಂತ್ರಿಸಲು ಹೊಸ ತಂತ್ರ” : ಫೇಸ್ ಬುಕ್
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.