ಪೆಟ್ರೋಲ್ ಬೆಲೆಯ 9 ಪೈಸೆ ಇಳಿಕೆ ಪ್ರಧಾನಿ ಪರಿಹಾರ ನಿಧಿಗೆ ದಾನ !
Team Udayavani, Jun 6, 2018, 7:30 PM IST
ಕರೀಂನಗರ, ತೆಲಂಗಾಣ : ಪೆಟ್ರೋಲ್, ಡೀಸಿಲ್ ಬೆಲೆಯಲ್ಲಿನ ಅತ್ಯಲ್ಪ ಇಳಿಕೆಯಿಂದ ರೋಸಿಹೋಗಿರುವ ತೆಲಂಗಾಣದ ಚಂದು ಗೌಡ್ (38) ಎಂಬವರು ಪ್ರಧಾನಿ ಪರಿಹಾರ ನಿಧಿಗೆ 9 ಪೈಸೆಯ ವಂತಿಗೆ ನೀಡಿದ್ದಾರೆ.
ನೆರೆಯ ಸಿರ್ಸಿಲಾ ಜಿಲ್ಲೆಯ ಚಂದ್ರಾಮಪೇಟೆ ಗ್ರಾಮದ ನಿವಾಸಿಯಾಗಿರುವ ಚಂದು ಗೌಡ್ ಅವರು ಸರಕಾರಿ ಅಧಿಕಾರಿಗಳಿಗೆ ಅಹವಾಲು ಸಲ್ಲಿಸುವ ಸಭೆಯಲ್ಲಿ ಪ್ರಧಾನಿಯವರ ಪರಿಹಾರ ನಿಧಿಗೆ 9 ಪೈಸೆ ವಂತಿಗೆ ನೀಡುವ ಚೆಕ್ಕನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿ ಇದು ಈಚೆಗೆ ಇಳಿಕೆಯಾಗಿರುವ ಪೆಟ್ರೋಲ್ ಬೆಲೆ ಎಂದು ಹೇಳಿ ನೆರೆದವರನ್ನು ಹಾಗೂ ಅಧಿಕಾರಿಗಳನ್ನು ಅಚ್ಚರಿಗೀಡು ಮಾಡಿದರು.
‘ಪೆಟ್ರೋಲ್ ಬೆಲೆಯನ್ನು 16 ಪೈಸೆ ಏರಿಸಿದ ಬಳಿಕ 9 ಪೈಸೆಯನ್ನು ಇಳಿಸಲಾಗಿದೆ; ಆದುದರಿಂದ ನಾನು 9 ಪೈಸೆಯನ್ನು ಪ್ರಧಾನಿ ಪರಿಹಾರ ನಿಧಿಗೆ ವಂತಿಗೆಯಾಗಿ ನೀಡಲು ನಿರ್ಧರಿಸಿದೆ’ ಎಂದು ಗೌಡ್ ಹೇಳಿದರೆಂದು ಅಧಿಕಾರಿಗಳು ತಿಳಿಸಿದರು.
ಕಳೆದ ಎಂಟು ದಿನಗಳಿಂದ ಕೆಲ ಪೈಸೆಗಳಷ್ಟು ಇಳಿಸಲಾಗುತ್ತಿರುವ ಪೆಟ್ರೋಲ್, ಡೀಸಿಲ್ ಬೆಲೆಯನ್ನು ಮೇ 30ರಂದು ಹಾಸ್ಯಾಸ್ಪದವಾಗಿ 1 ಪೈಸೆಯಷ್ಟು ಇಳಿಸಲಾಗಿತ್ತು. ದೇಶಾದ್ಯಂತ ಆಕ್ರೋಶಿತ ಜನರು ಕೇಂದ್ರ ಸರಕಾರವನ್ನು ಅಪಹಾಸ್ಯ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.