ಫ್ಲೋರಿಡಾದತ್ತ ಇರ್ಮಾ: 56ಲಕ್ಷ ಜನರ ಸ್ಥಳಾಂತರ
Team Udayavani, Sep 10, 2017, 8:50 AM IST
ಮಿಯಾಮಿ: ಕೆರಿಬಿಯನ್ ದ್ವೀಪಗಳಲ್ಲಿ ಭಾರೀ ಅನಾಹುತ ಸೃಷ್ಟಿಸಿದ ಇರ್ಮಾ ಚಂಡಮಾರುತ ಭಾನುವಾರ ಬೆಳಗ್ಗೆ ಅಮೆರಿಕದ ಫ್ಲೋರಿಡಾಗೆ ಅಪ್ಪಳಿಸಲಿದೆ. ಇಡೀ ಅಮೆರಿಕವನ್ನೇ ನಾಶ ಮಾಡಬಲ್ಲಂಥ ಪ್ರಬಲ ಚಂಡಮಾರುತ ಇದಾಗಿದ್ದು, ಈಗಾಗಲೇ ಫ್ಲೋರಿಡಾದಿಂದ ಸುಮಾರು 56 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಕೆರಿಬಿಯನ್ ದ್ವೀಪಗಳಲ್ಲಿ ಇರ್ಮಾದ ಅಬ್ಬರಕ್ಕೆ 19 ಮಂದಿ ಬಲಿಯಾಗಿದ್ದು, ಅಪಾರ ಆಸ್ತಿಪಾಸ್ತಿ ಹಾನಿ ಉಂಟಾಗಿದೆ. ಗಂಟೆಗೆ 155 ಮೈಲು ವೇಗದಲ್ಲಿ ಗಾಳಿ ಬೀಸುತ್ತಿದ್ದು, ಫ್ಲೋರಿಡಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. “ಇದೊಂದು ಅಪಾಯಕಾರಿ ಚಂಡಮಾರುತ. ಹಾಗಾಗಿ, ನಿಮಗೆ ಹೆಚ್ಚಿನ ಸಮಯವಿಲ್ಲ. ಆದಷ್ಟು ಬೇಗ ಸುರಕ್ಷಿತ ಪ್ರದೇಶಗಳಿಗೆ ತೆರಳಿ’ ಎಂದು ನಾಗರಿಕರಿಗೆ ಎಚ್ಚರಿಸಲಾಗಿದೆ. ಇರ್ಮಾವು 1992ರಲ್ಲಿ 65 ಮಂದಿಯನ್ನು ಬಲಿತೆಗೆದು ಕೊಂಡ ಆ್ಯಂಡ್ರೂé ಚಂಡಮಾರುತಕ್ಕಿಂತಲೂ ಬಲಶಾಲಿಯಾಗಿದೆ ಎಂದು ಇಲ್ಲಿನ ಗವರ್ನರ್ ಹೇಳಿದ್ದಾರೆ.
ಇದೇ ವೇಳೆ, ಇರ್ಮಾ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿ ಮೇಲೆ ನಿಗಾ ಇಟ್ಟಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮೆಕ್ಸಿಕೋ ಸುನಾಮಿ: ಮೃತರ ಸಂಖ್ಯೆ 61ಕ್ಕೇರಿಕೆ
ಶುಕ್ರವಾರ ಮೆಕ್ಸಿಕೋ ಕರಾವಳಿಗೆ ಅಪ್ಪಳಿಸಿದ ಸುನಾಮಿಯಿಂದ ಮೃತ ಪಟ್ಟವರ ಸಂಖ್ಯೆ 61ಕ್ಕೇರಿಕೆಯಾಗಿದೆ. ರಿಕ್ಟರ್ ಮಾಪಕದಲ್ಲಿ 8.1 ತೀವ್ರತೆಯ ಭೂಕಂಪದಿಂದಾಗಿ ಹಲವು ಕಟ್ಟಡಗಳು, ಶಾಲೆಗಳು, ಚರ್ಚುಗಳು ನೆಲಸಮವಾ ಗಿದ್ದು, ಇನ್ನೂ ಅನೇಕ ಮಂದಿ ಅವಶೇಷ ಗಳಡಿ ಸಿಲುಕಿರುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯಾ ಚರಣೆ ಭರದಿಂದ ಸಾಗಿದ್ದು, ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಭೀತಿಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್ಬಾಟ್ ಹೇಳಿಕೆ
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
MUST WATCH
ಹೊಸ ಸೇರ್ಪಡೆ
Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್ ಸ್ಟಾರ್
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.