![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jul 10, 2018, 6:00 AM IST
ಹೊಸದಿಲ್ಲಿ: ಸದ್ಯದಲ್ಲೇ ಮನುಷ್ಯರ ಅಧಿಕ ರಕ್ತದೊತ್ತಡದ ಗಡಿರೇಖೆಯನ್ನು ಈಗಿರುವ 140/90 ಮಾಪನಕ್ಕಿಂತ 130/80ಕ್ಕೆ ಇಳಿಸುವ ಬಗ್ಗೆ ಭಾರತೀಯ ವೈದ್ಯರು ಒಲವು ತೋರಿದ್ದಾರೆಂದು ಹೈದರಾಬಾದ್‌ನ ಅಪೊಲೊ ಆಸ್ಪತ್ರೆಯ ಹಿರಿಯ ಸಲಹೆಗಾರ ಸಿ. ವೆಂಕಟ ಎಸ್. ರಾಮ್ ತಿಳಿಸಿದ್ದಾರೆ.
ಸದ್ಯಕ್ಕೆ ಸಾಮಾನ್ಯ ರಕ್ತದೊತ್ತಡವನ್ನು 120/80ರಿಂದ 129/80 ಎಂದು ಪರಿಗಣಿಸ ಲಾ ಗುತ್ತದೆ. ಈ ಮೌಲ್ಯ 140/80ರಷ್ಟಿದ್ದಾಗ ಅದನ್ನು ಅಧಿಕ ರಕ್ತದೊತ್ತಡದ ಗಡಿರೇಖೆ ಎಂದು ಹೇಳಲಾಗುತ್ತದೆ. ಆದರೆ, ಇನ್ನು ಮುಂದೆ 130/80ಯ ಮಾಪನವನ್ನೇ ಅಧಿಕ ರಕ್ತದೊತ್ತಡದ ಗಡಿ ಎಂದು ಪರಿಗಣಿಸಲು ಆಲೋಚಿಸಲಾಗಿದೆ. ಈ ಬಗ್ಗೆ, ಇಂಡಿಯನ್ ಹಾರ್ಟ್ ಜರ್ನಲ್ ಎಂಬ ನಿಯತ ಕಾಲಿಕೆ ಯಲ್ಲಿ ಅಂಕಣವನ್ನೂ ಬರೆದಿರುವ ರಾಮ್, 130/80ಯನ್ನು “ಚಿಕಿತ್ಸೆ ಆರಂಭಿಸಬೇಕಾದ ಅಂಕಿಅಂಶ’ವೆಂದೇ ಪರಿಗಣಿಸಬೇಕೆಂದು ಆಗ್ರಹಿಸಿದ್ದಾರೆ. ಈ ವರೆಗೆ 130/80 ಹಾಗೂ ಅದಕ್ಕಿಂತ ಕೊಂಚ ಹೆಚ್ಚಿನ ರಕ್ತದೊತ್ತಡ ಇರುವ ಲಕ್ಷಾಂತರ ಜನರಿಗೆ “ಹೈ ಬಿಪಿ ರೋಗಿಗಳೆಂಬ’ ಎಂಬ ಹಣೆಪಟ್ಟಿ ಬೀಳಲಿದೆ. ಈ ಬಗ್ಗೆ “ನ್ಯೂಸ್18′ ವರದಿ ಮಾಡಿದೆ.
ಆದರೆ, ಸದ್ಯಕ್ಕಿದು ಇನ್ನೂ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟದ ವೈದ್ಯಕೀಯ ರಂಗಗಳಲ್ಲಿ ಮಾತ್ರ ಜಾರಿಯಾಗಿದ್ದು, ಭಾರತಕ್ಕಿನ್ನೂ ಕಾಲಿಟ್ಟಿಲ್ಲ. ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಮತ್ತು ದ ಅಮೆರಿಕನ್ ಹಾರ್ಡ್ ಅಸೋಸಿಯೇಷನ್‌ನ ತಜ್ಞರ ಸಮಿತಿಗಳು ಈ ಬದಲಾವಣೆಗೆ ಈಗಾಗಲೇ ಸೂಚನೆ ನೀಡಿವೆ ಎಂದು ಅವರು ವಿವರಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.