ಸುರಕ್ಷತಾ ಚೀಲ, ಹೆಲ್ಮೆಟ್ ಅಗತ್ಯ ..!
ಹೊಸ ನಿಯಮ ಸಾಧ್ಯತೆ |ಬೈಕಲ್ಲಿ ಮಕ್ಕಳ ಬೆಲ್ಟ್ ಕಡ್ಡಾಯ?
Team Udayavani, Oct 27, 2021, 10:59 AM IST
ನವದೆಹಲಿ: ನೀವು ಸ್ಕೂಟರ್, ಬೈಕ್‌ಗಳಲ್ಲಿ ಮಕ್ಕಳನ್ನೂ ಕೂರಿಸಿ ಕೊಂಡು ಪ್ರಯಾಣಿಸುತ್ತೀರಾ? ಹಾಗಿದ್ದರೆ ಇಲ್ಲಿ ಕೇಳಿ. ಮೋಟಾರು ಬೈಕ್‌ಗಳಲ್ಲಿ ಪ್ರಯಾಣಿ ಸುವ ಮಕ್ಕಳ ಸುರಕ್ಷತೆಗಾಗಿ ಕೇಂದ್ರ ಸರ್ಕಾರವು ಹೊಸ ನಿಯಮವೊಂ ದನ್ನು ಜಾರಿ ಮಾಡಲು ಚಿಂತನೆ ನಡೆಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಕುರಿತ ಕರಡು ನಿಯಮಗಳನ್ನು ಸಿದ್ಧಪಡಿಸಿದ್ದು, ಸಾರ್ವಜನಿಕ ರಿಂದ ಅಭಿಪ್ರಾಯಗಳನ್ನು ಕೋರಿದೆ. 30 ದಿನ ಗಳೊಳಗಾಗಿ ಅಭಿಪ್ರಾಯ ಸಲ್ಲಿಸುವಂತೆ ಸೂಚಿಸಲಾಗಿದೆ.
9 ತಿಂಗಳಿಂದ 4 ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನ ದಲ್ಲಿ ಕೂರಿಸಿಕೊಂಡು ಹೋಗುವವರಿಗೆ ಈ ನಿಯಮ ಅನ್ವಯವಾಗುತ್ತದೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವೇಳೆ ಮಕ್ಕಳನ್ನು ಸುರಕ್ಷತಾ ಚೀಲ (ಸೇಪ್ಟಿ ಹಾರ್ನೆಸ್)ಗಳಲ್ಲೇ ಕುಳ್ಳಿರಿಸಿಕೊಂಡು ಕರೆದೊಯ್ಯಬೇಕು ಹಾಗೂ ಆ ಚೀಲದ ಬೆಲ್ಟ್ ಅನ್ನು ಚಾಲಕನ ದೇಹಕ್ಕೆ ಅಳವಡಿಸಿರಬೇಕು ಎಂದು ಕರಡು ನಿಯಮದಲ್ಲಿ ಉಲ್ಲೇ ಖೀಸಲಾಗಿದೆ. ಮಕ್ಕಳನ್ನು ಅಪಾಯದಿಂದ ರಕ್ಷಿಸುವ ನಿಟ್ಟಿ ನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:- ಅದ್ದೂರಿ ರಾಜ್ಯೋತ್ಸವಕ್ಕೆ ಒತ್ತಾಯ
ಸುರಕ್ಷತಾ ಚೀಲ ಹೇಗಿರಬೇಕು?: ಸುರಕ್ಷತಾ ಚೀಲವು ಹಗುರವಾ ಗಿದ್ದು, ವಾಟರ್‌ಪ್ರೂಫ್ ಮತ್ತು ಬಾಳಿಕೆ ಬರುವಂಥದ್ದಾಗಿರಬೇಕು. ಅಲ್ಲದೆ, ಅದನ್ನು ಸುಲಭವಾಗಿ ಹೊಂದಾಣಿಕೆ (ಅಡೆjಸ್ಟ್) ಮಾಡಲು ಸಾಧ್ಯವಾಗಬೇಕು. ಅದನ್ನು ಅಧಿಕ ಸಾಂದ್ರತೆ ಯುಳ್ಳ ಫೋಮ್‌ನೊಂದಿಗೆ ಗಟ್ಟಿಯಾದ ನೈಲಾನ್ ಅಥವಾ ಮಲ್ಟಿಫಿಲಮೆಂಟ್ ನೈಲಾನ್‌ನಿಂದ ನಿರ್ಮಿ ಸಿರ ಬೇಕು. 30 ಕೆಜಿಯಷ್ಟು ತೂಕ ವನ್ನು ತಾಳಿಕೊಳ್ಳುವ ಸಾಮರ್ಥ್ಯವನ್ನೂ ಅದು ಹೊಂದಿರಬೇಕು.
ಹೊಸ ಪ್ರಸ್ತಾಪಗಳೇನು?
9 ತಿಂಗಳಿಂದ 4 ವರ್ಷಗಳ ವಯೋಮಾನದ ಮಕ್ಕಳು ಕುಳಿತಿದ್ದರೆ, ಮೋಟಾರ್‌ಸೈಕಲ್‌ನ ವೇಗವು ಗಂಟೆಗೆ 40 ಕಿ.ಮೀ. ಮೀರಬಾರದು.
ಹಿಂಬದಿ ಸವಾರರಾಗಿ ಕುಳಿತುಕೊಳ್ಳುವ ಮಕ್ಕಳು ಕ್ರ್ಯಾಶ್ ಹೆಲ್ಮೆಟ್ ಅಥವಾ ಬೈಸಿಕಲ್ ಹೆಲ್ಮೆಟ್ = ಧರಿಸಿರಬೇಕು
ಮಗುವನ್ನು ಚಾಲಕನೊಂದಿಗೆ ಬೆಸೆದಿರುವಂತೆ ಮಾಡಲು ಸುರಕ್ಷತಾ ಚೀಲವನ್ನು ಬಳಸಬೇಕು. ಆ ಚೀಲದಲ್ಲಿ ಮಗುವನ್ನು ಕೂರಿಸಿ, ಅದರ ಬೆಲ್ಟ್ ಅನ್ನು ಚಾಲಕನ ಸೊಂಟಕ್ಕೆ ಕಟ್ಟಿರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.