ಚೀನದಿಂದ ‘ಸೂಪರ್ ಸೈನಿಕ’ರ ಸೃಷ್ಟಿ
Team Udayavani, Dec 5, 2020, 6:17 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕಲ್ಪಿಸಿಕೊಳ್ಳಿ… -20 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಮೈ ಕೊರೆಯುವ ಚಳಿ. ಗಾಲ್ವಾನ್ ತೀರದ ಆಚೆಗಿನ ಹಿಮಗಡ್ಡೆಯ ಅಡಿಯಲ್ಲಿ ಕುತಂತ್ರಿ ಚೀನೀ ಸೈನಿಕ ತಿಂಗಳುಗಟ್ಟಲೆ ಅವಿತಿದ್ದಾನೆ! ಅವನಿಗೆ ಘೋರ ಚಳಿ ತಟ್ಟದು. ಅಷ್ಟು ಕಡು ಶೀತ ಇದ್ದರೂ ಯಾವ ಸೋಂಕಿಗೂ ತುತ್ತಾಗ ದಷ್ಟು ಗಟ್ಟಿ ಮುಟ್ಟು ಆತ. ಆ ರಣ ರಕ್ಕಸನಿಗೆ ದಣಿವಿಲ್ಲ. ಹಸಿವಿಲ್ಲ. ರೋಗಗಳ ದಿಗಿಲಿಲ್ಲ!
ಭವಿಷ್ಯದ ಯುದ್ಧಭೂಮಿಯಲ್ಲಿ ಕಾದಾಡಲು ಇಂಥ “ಸೂಪರ್ ಸೈನಿಕ’ ರನ್ನು ರೂಪಿಸಲು ಚೀನ ಪಿತೂರಿ ಆರಂಭಿ ಸಿದೆ. ಇದಕ್ಕಾಗಿ ಜೈವಿಕ ತಂತ್ರಜ್ಞಾನದ ಮೊರೆ ಹೋಗಿದೆ. ಸೈನಿಕರ ವಂಶವಾಹಿಗಳನ್ನೇ ತಿದ್ದಿ, ಲಸಿಕೆ ಮೂಲಕ ಅವರಲ್ಲಿ “ಅತಿಮಾನುಷ’ ಶಕ್ತಿ ತುಂಬುವ ನೀಚ ಕೆಲಸಕ್ಕೆ ಇಳಿದಿದೆ.
ಹಾಲಿವುಡ್ ಸಿನೆಮಾಗಳಲ್ಲಿ “ಸೂಪರ್ ಸೈನಿಕ’ರ ದೃಶ್ಯಗಳಿವೆ. ಚೀನವು ಇಂತಹ ತಂತ್ರಜ್ಞಾನವನ್ನು ತನ್ನ ಸೇನೆಯಲ್ಲಿ ಅಳವಡಿಸಿಕೊಳ್ಳುತ್ತಿದೆ ಎಂದು ಯುಎಸ್ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಜಾನ್ ರ್ಯಾಟ್‌ಕ್ಲಿಫ್ “ವಾಲ್ ಸ್ಟ್ರೀಟ್ ಜರ್ನಲ್’ಗೆ ಬರೆದ ಲೇಖನದಲ್ಲಿ ಆರೋಪಿಸಿದ್ದಾರೆ.
“ಅಧಿಕಾರಕ್ಕಾಗಿ ಬೀಜಿಂಗ್ ಯಾವ ನೈತಿಕ ಚೌಕಟ್ಟುಗಳನ್ನೂ ಇಟ್ಟುಕೊಳ್ಳುವುದಿಲ್ಲ’ ಎಂದು ರ್ಯಾಟ್ ಕ್ಲಿಫ್ ಎಚ್ಚರಿಸಿದ್ದಾರೆ.
ಏನಿದು “ಸೂಪರ್ ಪವರ್’?
ಸೈನಿಕರನ್ನು ಜೈವಿಕ ಪರೀಕ್ಷೆಗೆ ಒಳಪಡಿಸಿ, ಜೀನ್ (ವಂಶವಾಹಿ) ಸಾಮರ್ಥ್ಯ ಅಧ್ಯಯನ ಮಾಡಲಾಗುತ್ತದೆ. ಇವರಲ್ಲಿ ಅರ್ಹರಿಗೆ ಜೀವವರ್ಧಕ ಲಸಿಕೆ ನೀಡಿ ಜೀನ್‌ಗಳನ್ನು ತಿದ್ದುವ ಮೂಲಕ ಸೂಪರ್ ಪವರ್ ಸೈನಿಕರನ್ನಾಗಿ ರೂಪಿಸಲಾಗುತ್ತದೆ. ಇಂಥವರನ್ನು ಮುಂಚೂಣಿಯ ನೆಲೆಗಳಲ್ಲಿ ಕಾದಾಡಲು ಛೂ ಬಿಡುವುದು ಚೀನದ ಕುತಂತ್ರ. “ಸಿಆರ್‌ಐಎಸ್‌ಪಿಆರ್ ಸಾಧನದ ಮೂಲಕ ಚೀನವು, ಪಿಎಲ್‌ಎ ಸೈನಿಕರ ಜೀನ್‌ಗಳನ್ನು ತಿದ್ದುತ್ತಿದೆ’ ಎಂದು ಅಮೆರಿಕದ ತಜ್ಞರು ಕಳೆದ ವರ್ಷವೇ ಖಚಿತಪಡಿಸಿದ್ದರು. ರ್ಯಾಟ್‌ಕ್ಲಿಫ್ ಇದನ್ನು ಪುನರುಚ್ಚರಿಸಿದ್ದಾರೆ.
“ಕ್ಯಾಪ್ಟನ್ ಆಫ್ ಅಮೆರಿಕ’ ಪ್ರೇರಣೆ?
ಹಾಲಿವುಡ್‌ನ “ಕ್ಯಾಪ್ಟನ್ ಆಫ್ ಅಮೆರಿಕ’ ಚಲನಚಿತ್ರವು ಇಂಥ “ಸೂಪರ್ ಸೈನಿಕ’ನ ಪಾತ್ರವನ್ನು ಸೃಷ್ಟಿಸಿತ್ತು. ಆ ಚಿತ್ರದಲ್ಲಿ ಕ್ಯಾಪ್ಟನ್ ಸ್ಟೀವ್ ರೋಜರ್ಸ್‌ಗೆ ಮಿಲಿಟರಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಪ್ರಯೋಗಿಸುವ ಮೂಲಕ ಆತನಿಗೆ ಅತಿಮಾನುಷ ಶಕ್ತಿ ನೀಡಲಾಗುತ್ತದೆ. ಚೀನವು ಇದನ್ನು ಯುದ್ಧಭೂಮಿಯಲ್ಲಿ ನಿಜವಾಗಿಸುತ್ತಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.