ದಾವೂದ್ ಜತೆಗೆ ಮಹಾ ನೇತಾರರ ಗಟ್ಟಿ ನಂಟು?
Team Udayavani, Sep 20, 2017, 8:37 AM IST
ಮುಂಬೈ/ನವದೆಹಲಿ: ಪಾಕಿಸ್ತಾನದಲ್ಲಿದ್ದುಕೊಂಡೇ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮುಂಬೈನಲ್ಲಿ ತನ್ನ ದಂಧೆಗಳನ್ನು ಮುಂದುವರಿಸಿದ್ದಾನೆಯೇ ಎಂಬ ಸಂಶಯಗಳು ಶುರುವಾಗಿವೆ.
ದಾವೂದ್ ಇಬ್ರಾಹಿಂಗೂ ತನಗೂ ಸಂಬಂಧ ಇಲ್ಲವೆಂದು ಪೊಲೀಸರಿಗೆ ಆತನ ಸಹೋದರ ಇಕ್ಬಾಲ್ ಕಸ್ಕರ್ ಹೇಳಿಕೊಂಡಿದ್ದಾನೆ. ಆದರೆ ಉದ್ಯಮಿಯೊಬ್ಬರಿಗೆ ಹಣ ನೀಡುವಂತೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ನೇರವಾಗಿ ಅಥವಾ ಪ್ರತ್ಯಕ್ಷವಾಗಿ ಪಾತಕಿಯೇ ಭಾಗಿಯಾಗಿದ್ದಾನೆಯೇ ಎನ್ನುವುದನ್ನು ಕಂಡುಕೊಳ್ಳಲು ಮುಂಬೈ ಪೊಲೀಸರು ನಿರ್ಧರಿಸಿದ್ದಾರೆ. ಹೀಗಾಗಿ, ಮತ್ತೆ ಭೂಗತ ಪಾತಕಿ ಮುಂಬೈ, ಥಾಣೆ ಪ್ರದೇಶಗಳಲ್ಲಿ ಸಕ್ರಿಯನಾಗಿದ್ದಾನೆ ಎಂಬ ಸಂಶಯ ಬರುವಂತಾಗಿದೆ. ಮತ್ತೂಂದು ಮಹತ್ವಪೂರ್ಣ ಬೆಳವಣಿಗೆಯಲ್ಲಿ ಕಸ್ಕರ್‌ನ ಜತೆಗೆ ಥಾಣೆ ಮಹಾನಗರ
ಪಾಲಿಕೆಯ ಎನ್‌ಸಿಪಿ ಕಾರ್ಪೊರೇಟರ್ ನಜೀಬ್ ಮುಲ್ಲಾ ನಿಕಟ ಸಂಪರ್ಕ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಸ್ಕರ್‌ನ ವಿಚಾರಣೆ ವೇಳೆ ಬೆದರಿಕೆ ಹಾಕುವ ಪ್ರಕರಣದಲ್ಲಿ ಹಲವು ರಾಜಕೀಯ ನಾಯಕರ ಹೆಸರುಗಳು ಪ್ರಸ್ತಾಪಗೊಂಡಿವೆ ಎಂದು ಥಾಣೆ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಹೇಳಿದ್ದಾರೆ. ಇತ್ತೀಚಿನ ದಿನಗಳಿಂದ ಕೆಲ ಬಿಲ್ಡರ್ಸ್‌ಗಳಿಗೆ ದಾವೂದ್ ಹೆಸರಲ್ಲಿ ಬೆದರಿಕೆ ಕರೆ ಬರುತ್ತಿವೆ. ಇದುವೇ ಈ ಸಂಶಯಕ್ಕೆ ಕಾರಣ. ಒಂದು ವೇಳೆ ತನಿಖೆಯಲ್ಲಿ ಭೂಗತ ಪಾತಕಿಯ ನೇರ ಕೈವಾಡ ಇರುವುದು ಸಾಬೀತಾದರೆ ಆತನ ಹೆಸರನ್ನೂ ಪ್ರಕರಣದಲ್ಲಿ
ಸೇರಿಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
8 ದಿನ ಪೊಲೀಸ್ ವಶಕ್ಕೆ: ಇನ್ನು ಉದ್ಯಮಿಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಮೊಹಮ್ಮದ್ ಯಾಸಿನ್ ಖ್ವಾಜಾ ಹುಸೈನ್ ಎಂಬ ಮಾದಕ ವಸ್ತುಗಳ ಮಾರಾಟಗಾರನನ್ನು ಬಂಧಿಸಲಾಗಿದೆ. ಜತೆಗೆ ಮುಮ್ತಾಜ್ ಶೇಕ್ ಮತ್ತು ಇಸ್ರಾರ್ ಅಲಿ ಜಮೀರ್ ಸಯ್ಯದ್ ಎಂಬಿಬ್ಬರನ್ನು ಬಂಧಿಸಲಾಗಿದೆ.
ಇದೀಗ ಆತನನ್ನು 8 ದಿನಗಳ ಕಾಲ ಪೊಲೀಸ್ ವಶಕ್ಕೊಪ್ಪಿಸಿ ಥಾಣೆ ನ್ಯಾಯಾಲಯ ಆದೇಶಿಸಿದೆ.
ಸೋಮವಾರ ರಾತ್ರಿ ಮುಂಬೈ ನಾಗಪಾಡ ಪ್ರದೇಶದಲ್ಲಿರುವ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್ ನಿವಾಸದಿಂದ ಆತನನ್ನು ವಶಕ್ಕೆ ಪಡೆಯಲಾಗಿತ್ತು. ತಡರಾತ್ರಿಯ ವರೆಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ಮಾಹಿತಿ ಪಡೆಯಲಾಗಿತ್ತು. ಈ ಹಂತದಲ್ಲಿ ರಾಜಕೀಯ ನಾಯಕರು ಮತ್ತು ಇತರರ ಹೆಸರುಗಳು ಬಹಿರಂಗವಾಗಿವೆ ಎಂದಿದ್ದಾರೆ ಪೊಲೀಸ್ ಆಯುಕ್ತ. ಬಳಿಕ ಅತನನ್ನು ಅಧಿಕೃತವಾಗಿ ಬಂಧಿಸಲಾಯಿತು
ಎಂದು ಸಿಂಗ್ ತಿಳಿಸಿದ್ದಾರೆ.
ಏನಿದು ಪ್ರಕರಣ?: ಥಾಣೆಯ ಬಿಲ್ಡರ್ ಒಬ್ಬರಿಗೆ 30 ಲಕ್ಷ ರೂ. ಮತ್ತು ನಾಲ್ಕು ಫ್ಲ್ಯಾಟ್‌ಗಳನ್ನು ದಾವೂದ್ ಇಬ್ರಾಹಿಂಗೆ ನೀಡಬೇಕು ಎಂದು ಇಕ್ಬಾಲ್ ಕಸ್ಕರ್ ಮತ್ತು ಆತನ ಅನುಚರ ಫೋನ್‌ನಲ್ಲಿ ಧಮಕಿ ಹಾಕಿದ್ದ. ಗತ್ಯಂತರವಿಲ್ಲದೆ 30 ಲಕ್ಷ ರೂ. ಮತ್ತು 5 ಕೋಟಿ ರೂ.ಮೌಲ್ಯದ ಫ್ಲ್ಯಾಟ್‌ಗಳನ್ನು ಆತನಿಗೆ ನೀಡಿದ್ದರು. ಕೆಲ ದಿನಗಳ ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಸಂದರ್ಭದಲ್ಲಿ ಸ್ಥಳೀಯ ಇಬ್ಬರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆ ನಡೆಸಿದಾಗ ಕಸ್ಕರ್ ಹೆಸರು ಬೆಳಕಿಗೆ ಬಂದಿತು.
ಥಾಣೆ ಕಾರ್ಪೊರೇಟರ್ ಹೆಸರು ಬಯಲು
ಉದ್ಯಮಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಥಾಣೆ ಮಹಾನಗರ ಪಾಲಿಕೆಯ ಎನ್‌ಸಿಪಿ ಕಾರ್ಪೊರೇಟರ್ ನಜೀಬ್ ಮುಲ್ಲಾ ಹೆಸರೂ ದಾಖಲಾಗಿದೆ. ಹೀಗಾಗಿ, ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ನೇತೃತ್ವದ ಪಕ್ಷ ಈಗ ಇಕ್ಕಟ್ಟಿನಲ್ಲಿ ಸಿಲುಕಿದೆ. ಆದರೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮುಲ್ಲಾ, “ಇಕ್ಬಾಲ್ ಕಸ್ಕರ್ ಗೊತ್ತೇ ಇಲ್ಲ. ಆತನ ಜತೆಗೆ ವ್ಯಾವಹಾರಿಕ ಸಂಬಂಧವೂ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿರಿಯಾನಿ ತಿನ್ನುತ್ತಾ ಕೆಬಿಸಿ ನೋಡುತ್ತಿದ್ದ ಕಸ್ಕರ್
ಪೊಲೀಸರ ತಂಡ ಮುಂಬೈನಲ್ಲಿರುವ ದಾವೂದ್ ಸಹೋದರಿ ಹಸೀನಾ ಪಾರ್ಕರ್ ಮನೆಗೆ ಸೋಮವಾರ ರಾತ್ರಿ ತೆರಳಿದಾಗ, ಕಸ್ಕರ್ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮ ನೋಡುತ್ತಿದ್ದ. ಜತೆಗೆ ಹಾಯಾಗಿ ಬಿರಿಯಾನಿ ಸೇವಿಸುತ್ತಿದ್ದ. ಪೊಲೀಸರನ್ನು ಕಂಡ ಕೂಡಲೇ ಆತ ಗಲಿಬಿಲಿಗೊಳ್ಳಲಿಲ್ಲ. ಬಿರಿಯಾನಿ ಮುಗಿಸಿ ಹೊರಟ ಎಂದು ಹೇಳಲಾಗಿದೆ.
ಯಾರೀಇಕ್ಬಾಲ್ ಕಸ್ಕರ್?
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ ಈತ. 2003ರಲ್ಲಿ ಇವನನ್ನು ಸಂಯುಕ್ತ ಅರಬ್ ಗಣರಾಜ್ಯದಿಂದ ಗಡಿಪಾರು ಮಾಡಲಾಗಿತ್ತು. ಅವನೇ ಮುಂಬೈ-ಥಾಣೆಯಲ್ಲಿ ದಾವೂದ್‌ನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾನೆ ಎನ್ನುವುದು ಪೊಲೀಸರ ಅಂಬೋಣ. ಸರಾ ಸಹರಾ ಅಕ್ರಮ ಕಟ್ಟಡ ನಿರ್ಮಾಣದಲ್ಲಿ ಅವನ ವಿರುದ್ಧ ಕೇಸು ದಾಖಲಾಗಿತ್ತು. 2007ರಲ್ಲಿ ಅದರಿಂದ ಆತ ದೋಷಮುಕ್ತಿಗೊಂಡಿದ್ದ.
ರಾಜಕೀಯ ಪಕ್ಷಗಳು ಮತ್ತು ಪಾತಕಿ ದಾವೂದ್ ಇಬ್ರಾಹಿಂ ಜತೆಗೆ ಸಂಪರ್ಕ ಇರಿಸಿಕೊಂಡಿದ್ದಾರೆ ಎಂದು ಹೇಳಿಕೊಳ್ಳುವುದಕ್ಕೆ ಇದು ಸಕಾಲವಲ್ಲ.
ಮಜೀದ್ ಮೆಮನ್, ಎನ್‌ಸಿಪಿ ನಾಯಕ
ದಾವೂದ್‌ನ ಬಲಗೈ ಬಂಟ ಶಾಹಿದ್ ಬಲ್ವಾನೇ ಮುಂಬೈನಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ನಿಯಂತ್ರಿಸುತ್ತಿದ್ದಾನೆ. ಆತನ ವಿರುದ್ಧವೂ ಕ್ರಮ ಕೈಗೊಳ್ಳಿ.
ಡಾ.ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ರಾಜ್ಯಸಭಾ ಸದಸ್ಯ
ಯುಪಿಎ ಸರ್ಕಾರ ಇರುವಾಗ ದಾವೂದ್ ಸೆರೆಗೆ ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಇದೀಗ ಪೊಲೀಸರ ಕ್ರಮ ಸರಿಯಾಗಿಯೇ ಇದೆ.
ರಾಜೀವ್ ಶುಕ್ಲಾ, ಕೇಂದ್ರದ ಮಾಜಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.