ಲಸಿಕೆ ವಿತರಣೆ ಜಾಲ ಹೇಗಿದೆ ಭಾರತದ ಸಿದ್ಧತೆ?


Team Udayavani, Dec 19, 2020, 6:38 AM IST

ಲಸಿಕೆ ವಿತರಣೆ ಜಾಲ ಹೇಗಿದೆ ಭಾರತದ ಸಿದ್ಧತೆ?

ಸಾಂದರ್ಭಿಕ ಚಿತ್ರ

ಕೋವಿಡ್‌ ವಿರುದ್ಧದ ಹೋರಾಟ ಈಗ ನಿರ್ಣಾಯಕ ಘಟ್ಟ ತಲುಪಿದೆ. ಅತ್ತ ಬ್ರಿಟನ್‌ ಮತ್ತು ಅಮೆರಿಕ ತನ್ನ ದೇಶವಾಸಿಗಳಿಗೆ ಫೈಜರ್‌ ಲಸಿಕೆಯ ವಿತರಣೆ ಆರಂಭಿಸಿರುವ ವೇಳೆಯಲ್ಲೇ ಇತ್ತ ಜಗತ್ತಿನ ಅತೀದೊಡ್ಡ ಲಸಿಕೆ ಉತ್ಪಾದಕ ರಾಷ್ಟ್ರವೂ ಆಗಿರುವ ಭಾರತ ಅಂತಿಮ ಪ್ರಯೋಗದ ಹಂತದಲ್ಲಿರುವ ಲಸಿಕೆಗಳ ಮೇಲೆ ಚಿತ್ತ ನೆಟ್ಟಿದೆ. ಫೈಜರ್‌ ಲಸಿಕೆಯನ್ನೂ° ತರಿಸಿಕೊಳ್ಳುವ ವಿಚಾರದಲ್ಲೂ ಮಾತುಕತೆ ಆರಂಭವಾಗಿದೆ. ಆದರೆ ಭಾರತದಂಥ ಅಗಾಧ ಭೂಪ್ರದೇಶ ಹಾಗೂ ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲಿ ಲಸಿಕೆ ವಿತರಣೆ ಬಹುದೊಡ್ಡ ಸವಾಲು. ಪ್ರತೀ ರಾಜ್ಯಗಳಲ್ಲೂ ಅಗತ್ಯ ಕೋಲ್ಡ್‌ ಸ್ಟೋರೇಜ್‌ ಪಾಯಿಂಟ್‌ಗಳು, ವಾಕಿನ್‌ ಫ್ರೀಜರ್‌ಗಳು, ವ್ಯಾನ್‌ಗಳು ಅತ್ಯಗತ್ಯ. ಆದರೆ ಲಸಿಕಾಕರಣ ಪ್ರಕ್ರಿಯೆಯಲ್ಲಿ ಅನೇಕ ಅಡ್ಡಿಗಳ ನಡುವೆಯೂ ಭಾರತಕ್ಕೆ ಬಹಳ ಅನುಭವವಿದೆ. ಹಾಗಿದ್ದರೆ ಈ ವಿಚಾರದಲ್ಲಿ ಭಾರತದ ತಯಾರಿ ಹೇಗಿದೆ?
ಲಸಿಕೆ ವಿತರಣೆ ಜಾಲ ಹೇಗಿರುತ್ತದೆ? ಇಲ್ಲಿದೆ ಮಾಹಿತಿ…

30 ಕೋಟಿಗೆ ಜನರಿಗೆ 60 ಕೋಟಿ ಡೋಸ್‌?
ಆಗಸ್ಟ್‌ 2021ರ ವೇಳೆಗೆ ನಿರ್ದಿಷ್ಟ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಆರೋಗ್ಯ ಇಲಾಖೆಗೆ ಇದೆ. ಲಸಿಕೆಯೇನಾದರೂ ಎರಡು ಡೋಸ್‌ಗಳಲ್ಲಿ ಬಂದರೆ, 60 ಕೋಟಿ ಡೋಸ್‌ಗಳು ಅಷ್ಟರಲ್ಲಿ ಸಿದ್ಧವಿರಬೇಕಾಗುತ್ತದೆ. ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸೇರಿದಂತೆ ಭಾರತದ ಹಲವು ಲಸಿಕೆ ಉತ್ಪಾದನ ಸಂಸ್ಥೆಗಳಿಗೆ ಈ ಮಟ್ಟದ ಡೋಸ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆಯಾದರೂ ಅಷ್ಟನ್ನೆಲ್ಲ ಸಂರಕ್ಷಿಸಿಡುವ ಶೀತಲ ಘಟಕಗಳು ಹಾಗೂ ವ್ಯಾನ್‌ಗಳ ಅಗತ್ಯವಂತೂ ಇದ್ದೇ ಇರುತ್ತದೆ. ಇದರ ಜತೆಗೆ ಅನ್ಯ ರೋಗಗಳ ಲಸಿಕೆಯಲ್ಲೂ ಅಡಚಣೆಯಾಗದಂತೆ ನೋಡಿಕೊಳ್ಳುವ ಸವಾಲೂ ಇರುತ್ತದೆ.

ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೇಂದ್ರ ಹಾಗೂ ರಾಜ್ಯಗಳು ಖಾಸಗಿ ಕೋಲ್ಡ್‌ ಸ್ಟೋರೇಜ್‌ ಸಂಸ್ಥೆಗಳ ಜತೆ ಮಾತುಕತೆ ನಡೆಸಿವೆ. ಉದಾಹರಣೆಗೆ ಭಾರತದ ಅತೀದೊಡ್ಡ ಖಾಸಗಿ ಕೋಲ್ಡ್‌ ಸ್ಟೋರೇಜ್‌ ಉದ್ಯಮವಾದ ಸ್ನೋಮ್ಯಾನ್‌ ಸಂಸ್ಥೆಗೆ 10 ಕೋಟಿ ಡೋಸ್‌ಗಳ ಸಂರಕ್ಷಣೆ ಹಾಗೂ ಸಾಗಣೆಯ ಸಾಮರ್ಥ್ಯವಿದ್ದು, ವಿವಿಧ ರಾಜ್ಯ ಸರಕಾರಗಳು ಆ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿವೆ ಎನ್ನುತ್ತಾರೆ ಅದರ ಸಿಇಒ ಸುನಿಲ್‌ ನಾಯರ್‌. ಮಾರುಕಟ್ಟೆ ಅಧ್ಯಯನ ಸಂಸ್ಥೆ ಐಎಂಎಆರ್‌ಸಿ ಪ್ರಕಾರ 2021ರ ವೇಳೆಗೆ ಭಾರತದ ಖಾಸಗಿ ಕೋಲ್ಡ್‌ ಸ್ಟೋರೇಜ್‌ ಪೂರೈಕೆ ಮಾರುಕಟ್ಟೆಯಲ್ಲಿ ಅಪಾರ ಬೆಳವಣಿಗೆಯಾಗಲಿದ್ದು, ಫಾರ್ಮಾ ಕಂಪೆನಿಗಳು, ಶೀತಲೀಕರಣ ವ್ಯಾನ್‌ಗಳ ಮಾಲಕರಿಗೆ ಭಾರೀ ಲಾಭವಾಗಲಿದೆ. ಇದರಿಂದಾಗಿ ಭಾರತದ ಕೋಲ್ಡ್‌ ಚೈನ್‌ ಮಾರುಕಟ್ಟೆಯಲ್ಲಿ 2021ಲ್ಲಿ 17 ಪ್ರತಿಶತ ಬೆಳವಣಿಗೆ ಕಾಣಲಿದೆ.

ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಿ ವೈದ್ಯಕೀಯ ಸಂಗ್ರಹಣ ಘಟಕಗಳು ಭಾರತದ ಸರಕಾರಿ ಲಸಿಕೆ ವಿತರಣ ಜಾಲದಲ್ಲಿ ನಾಲ್ಕು ಪ್ರಮುಖ ಕೊಂಡಿಗಳಿವೆ. ಕರ್ನಾಲ್‌, ಮುಂಬಯಿ, ಚೆನ್ನೈ ಹಾಗೂ ಕೋಲ್ಕತಾದಲ್ಲಿರುವ ಕೇಂದ್ರ ಸರಕಾರದ ವೈದ್ಯಕೀಯ ಸಂಗ್ರಹಣ ಘಟಕಗಳು(ಜಿಎಂಎಸ್‌ಡಿ) ಲಸಿಕೆ ಉತ್ಪಾದಕರಿಂದ ಡೋಸ್‌ಗಳನ್ನು ತರಿಸಿಕೊಂಡು ವಿವಿಧ ರಾಜ್ಯಗಳಲ್ಲಿರುವ ಸಂಗ್ರಹಣ ಘಟಕಗಳಿಗೆ(ಎಸ್‌ವಿಎಸ್‌) ಕಳುಹಿಸುತ್ತವೆ, ದೇಶದಲ್ಲಿ ಒಟ್ಟು 53 ಎಸ್‌ವಿಎಸ್‌ಗಳಿದ್ದು, ಇವು ನೇರವಾಗಿ ಉತ್ಪಾದಕರಿಂದಲೇ ಲಸಿಕೆಗಳನ್ನು ತರಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ರಾಜ್ಯದ ಲಸಿಕೆ ಸಂಗ್ರಹಣ ಘಟಕಗಳು, ಅನಂತರ ಶೀತಲ ವ್ಯಾನ್‌ಗಳ ಮೂಲಕ ಜಿಲ್ಲೆ ಹಾಗೂ ಪಟ್ಟಣಗಳಲ್ಲಿನ ಶೀತಲ ಘಟಕಗಳಿಗೆ ಲಸಿಕೆಗಳನ್ನು ಹಂಚುತ್ತವೆ.

ವಿತರಣ ಜಾಲದಲ್ಲಿ ಅಸಮರ್ಪಕತೆ
ದೇಶಾದ್ಯಂತ ಎಲ್ಲ ರಾಜ್ಯಗಳಲ್ಲೂ ಕೋಲ್ಡ್‌ ಚೈನ್‌ ಘಟಕಗಳು ಇವೆಯಾದರೂ, ಇವುಗಳ ವಿತರಣೆ ಸರಿಯಾಗಿಲ್ಲ. ಹೀಗಾಗಿ ಕೇಂದ್ರ ಸರಕಾರವು ಉತ್ತರ ಪ್ರದೇಶ, ಬಿಹಾರ, ಹರಿಯಾಣ, ಪಶ್ಚಿಮ ಬಂಗಾಲದಂಥ. ಜನಸಂಖ್ಯೆಗೆ ತಕ್ಕಂತೆ ಕೋಲ್ಡ್‌ ಚೈನ್‌ ಘಟಕಗಳ ಅಭಾವ ಎದುರಿಸುತ್ತಿರುವ ರಾಜ್ಯಗಳಿಗೆ ಹೆಚ್ಚುವರಿ ವಾಕಿನ್‌ ಕೂಲರ್‌ಗಳು, ವಾಕಿನ್‌ ಫ್ರೀಜರ್‌ಗಳು ಹಾಗೂ ಶೀತಲೀಕರಣ ವ್ಯಾನ್‌ಗಳನ್ನು ಪೂರೈಸಲು ಸಿದ್ಧತೆ ನಡೆಸಿದೆ. ಕರ್ನಾಟಕದ ವಿಚಾರಕ್ಕೇ ಬಂದರೆ, ರಾಜ್ಯ ಕೋವಿಡ್‌ ಕಾರ್ಯಪಡೆ ಸಭೆ ಸೇರಿ ಈ ಕುರಿತು ಚರ್ಚೆ ನಡೆಸಿದ್ದು, ಲಸಿಕೆ ಸಂಗ್ರಹ ಹಾಗೂ ವಿತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯಾದ್ಯಂತ 29,451 ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಿದ್ದು, ಲಸಿಕೆ ವಿತರಣೆ ಮಾಡಲು 10,008 ವ್ಯಾಕ್ಸಿನೇಟರ್‌ ಸಿಬಂದಿಯನ್ನು ಗುರುತಿಸಲಾಗಿದೆ. ಇದಷ್ಟೇ ಅಲ್ಲದೇ, ಕೇಂದ್ರ ಸರಕಾರವು ರಾಜ್ಯಕ್ಕೆ ಹೆಚ್ಚುವರಿ ವಾಕ್‌ ಇನ್‌ ಕೂಲರ್‌ಗಳು ಮತ್ತು ಫ್ರೀಜರ್‌ಗಳನ್ನು ಕಳುಹಿಸುವ ನಿರ್ಧಾರಕ್ಕೆ ಬಂದಿದೆ.

ಇ-ವಿನ್‌ ಜಾಲದ ಬಳಕೆ
ಕಳೆದ ಕೆಲವು ವರ್ಷಗಳಿಂದ ಭಾರತದ ಲಸಿಕೆ ನಿರ್ವಹಣ ವ್ಯವಸ್ಥೆಯು ತ್ವರಿತ ಪೂರೈಕೆಗಾಗಿ ಎಲಕ್ಟ್ರಾನಿಕ್‌ ವ್ಯಾಕ್ಸಿನ್‌ ಇಂಟೆಲಿಜೆನ್ಸ್‌ ನೆಟ್‌ವರ್ಕ್‌
(ಇ-ವಿನ್‌) ಎನ್ನುವ ಜಾಲವನ್ನು ಸೃಷ್ಟಿಸಿದೆ. ಆಗಸ್ಟ್‌ 2020ರ ವೇಳೆಗೆ, ಇ-ವಿನ್‌ ವ್ಯವಸ್ಥೆಯನ್ನು 32 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನಕ್ಕೆ ತರಲಾಗಿದ್ದು, ಈ ವ್ಯವಸ್ಥೆಯು ತ್ವರಿತ ಲಸಿಕೆ ವಿತರಣೆಯಲ್ಲಿ ಬಹಳ ಅನುಕೂಲಕ್ಕೆ ಬರಲಿದೆ.

ಖಾಸಗಿ ಕಂಪೆನಿಗಳ ಹೂಡಿಕೆ
2,100 ಕೋಟಿ ರೂ.: ಸೀರಂ ಇನ್‌ಸ್ಟಿ ಟ್ಯೂಟ್‌ ಆಫ್ ಇಂಡಿಯಾ. ಐದು ಲಸಿಕೆ ಸಂಶೋಧನ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಯೋಗ ನಡೆಸಿದೆ.
500 ಕೋಟಿ ರೂ.: ಜೈಡಸ್‌ ಕೆಡಿಲಾ.
2 ಲಸಿಕೆಗಳ ಮೇಲೆ ಸಂಶೋಧನೆ ನಡೆಸಿದೆ.
300-400 ಕೋಟಿ ರೂ.: ಭಾರತ್‌ ಬಯೋಟೆಕ್‌. 3 ಲಸಿಕೆಗಳ ಪ್ರಯೋಗ, ಅಭಿವೃದ್ಧಿಗೆ ಒಪ್ಪಂದ ಮಾಡಿಕೊಂಡಿದೆ.

ಭಾರತದಲ್ಲಿ ಪ್ರಸಕ್ತ 29 ಸಾವಿರ ಕೋಲ್ಡ್‌ ಚೈನ್‌ ಪಾಯಿಂಟ್‌ಗಳು, 76000 ಕೋಲ್ಡ್‌ ಚೈನ್‌ ಉಪಕರಣಗಳು, 700 ಶೀತಲ ವ್ಯಾನ್‌ಗಳು, 55,000 ಕೋಲ್ಡ್‌ ಚೈನ್‌ ನಿರ್ವಾಹಕರು ಹಾಗೂ ಲಸಿಕೆ ಸಾಗಣೆ ಜಾಲದ ಭಾಗವಾಗಿ 25 ಲಕ್ಷ ಆರೋಗ್ಯ ಕಾರ್ಯಕರ್ತರನ್ನು ಹೊಂದಿವೆ.

ಟಾಪ್ ನ್ಯೂಸ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Yasin Malik

SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ

ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ

ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.