ಪೆಸಿಫಿಕ್ ದ್ವೀಪ ರಾಷ್ಟ್ರ ವನುವಾತುವಲ್ಲಿ ನಿತ್ಯಾನಂದ ಠಿಕಾಣಿ?
Team Udayavani, Jan 24, 2020, 9:15 PM IST
ಹೊಸದಿಲ್ಲಿ: ದೇಶ ಬಿಟ್ಟು ಪರಾರಿಯಾಗಿರುವ ಬಿಡದಿಯ ನಿತ್ಯಾನಂದ ಸ್ವಾಮಿ ಪೆಸಿಫಿಕ್ ಸಾಗರ ವ್ಯಾಪ್ತಿಯಲ್ಲಿರುವ ವನುವಾತು ಎಂಬ ದ್ವೀಪ ರಾಷ್ಟ್ರದಲ್ಲಿ ಬೀಡು ಬಿಟ್ಟಿದ್ದಾನೆಂಬ ಗುಮಾನಿ ಇದೆ. ನಿತ್ಯಾನಂದ ಸ್ವಾಮಿಯ ನಿಕಟವರ್ತಿಗೆ ಕಳುಹಿಸಿದ ಇ-ಮೇಲ್‌ನಿಂದ ಈ ಅಂಶ ಬಹಿರಂಗವಾಗಿದೆ.
ಸ್ವಘೋಷಿತ ದೇವಮಾನವನ ಸಂಸ್ಥೆಗೆ ದೇಣಿಗೆಯನ್ನು ಹೇಗೆ ಕಳುಹಿಸಬಹುದು ಎಂದು ಕೇಳಿದ್ದಾಗ ವನುವಾತು ದ್ವೀಪ ರಾಷ್ಟ್ರದಲ್ಲಿರುವ ಖಾತೆಗೆ ವರ್ಗಾಯಿಸುವ ಬಗ್ಗೆ ನಿಕಟವರ್ತಿ ಸಲಹೆ ನೀಡಿದ್ದರು.
ವನುವಾತು ಎನ್ನುವುದು ತೆರಿಗೆ ಸ್ವರ್ಗ ರಾಷ್ಟ್ರವಾಗಿದ್ದು, ಇ-ಮೇಲ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಮೊತ್ತವನ್ನು ‘ಕೈಲಾಸ ಲಿಮಿಟೆಡ್’ ಎಂಬ ಹೆಸರಿನ ಖಾತೆಗೆ ಜಮೆ ಮಾಡುವಂತೆ ಸಲಹೆ ಮಾಡಲಾಗಿದೆ. ನ್ಯಾಷನಲ್ ಬ್ಯಾಂಕ್ ಆಫ್ ವನುವಾತುವಿನ ಪೋರ್ಟ್ ವಿಲ್ಲಾ ಎಂಬಲ್ಲಿರುವ ಶಾಖೆಯಲ್ಲಿ ಆತ ಖಾತೆಯನ್ನೂ ಹೊಂದಿದ್ದಾನೆ.
ಈ ಹೊಸ ಬೆಳವಣಿಗೆಯಿಂದ ಆತ ವನುವಾತುವಿನಲ್ಲಿಯೇ ಇದ್ದಾನೆಯೋ ಅಥವಾ ಅಲ್ಲಿ ಆತನ ವಹಿವಾಟುಗಳು ಮಾತ್ರ ಇವೆಯೋ ಎಂಬ ಪ್ರಶ್ನೆ ಮೂಡಿದ್ದು, ಸೂಕ್ತ ತನಿಖೆಯಿಂದ ಇದಕ್ಕೆಲ್ಲ ಉತ್ತರ ಸಿಗುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.