ಬರಲಿದೆಯೇ ಸರಕಾರಿ ವಾಟ್ಸ್‌ಆ್ಯಪ್?
ಸ್ಥಳೀಯ ಸರ್ವರ್‌ಗಳಲ್ಲೇ ಸೇವ್ ಆಗುವಂಥ ಮಾಧ್ಯಮ
Team Udayavani, Jun 28, 2019, 5:24 AM IST
ಹೊಸದಿಲ್ಲಿ: ಸರಕಾರಿ ವಾಟ್ಸ್‌ಆ್ಯಪ್ ಬರುತ್ತಾ?
ಹೌದು. ಕೇಂದ್ರ ಸರಕಾರ ಇಂಥದ್ದೊಂದು ಗಂಭೀರ ಚಿಂತನೆಗೆ ಮುಂದಾಗಿದೆ. ನಾವು ಏಕೆ ಹೊರ ದೇಶಗಳ ವಾಟ್ಸ್‌ಆ್ಯಪ್, ಜಿ ಮೇಲ್ನಂಥ ಸಂವಹನ ಮಾಧ್ಯಮಗಳ ಮೇಲೆ ಅವಲಂಬಿತರಾಗಬೇಕು? ನಮ್ಮದೇ ಆದ ಒಂದು ಸಂವಹನ ಮಾಧ್ಯಮವನ್ನು ಸೃಷ್ಟಿ ಮಾಡಿಕೊಳ್ಳಬಾರದೇಕೆ ಎಂಬ ನಿಲುವಿಗೆ ಕೇಂದ್ರ ಸರಕಾರ ಬಂದಿದೆ. ವಾಟ್ಸ್‌ಆ್ಯಪ್ ಸಂಸ್ಥೆಯ ಜಿಗುಟುತನ ಮತ್ತು ಅಮೆರಿಕ ಸರಕಾರದ ಹಠಮಾರಿ ಧೋರಣೆಯಿಂದಾಗಿ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಚಿಂತನೆ ಶುರುವಾಗಿದೆ. ಈ ಬಗ್ಗೆ ಇಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಅಮೆರಿಕದ ಸಮಸ್ಯೆ ಏನು?
ಸದ್ಯ ಅಮೆರಿಕದಲ್ಲಿ ಚೀನದ ಹುವಾಯಿ ಮೊಬೈಲ್ ಫೋನ್ ಮತ್ತು ಉತ್ಪನ್ನಗಳನ್ನು ನಿಷೇಧಿಸಲಾಗಿದೆ. ಜತೆಗೆ ಅಮೆರಿಕದ ಕಂಪೆನಿಗಳು ಯಾವುದೇ ಸಾಫ್ಟ್ವೇರ್‌ಗಳನ್ನು ಈ ಸಂಸ್ಥೆಗೆ ಮಾರಾಟ ಮಾಡದಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಗ್ರಾಹಕರ ಮಾಹಿತಿಗಳನ್ನು ಗೌಪ್ಯವಾಗಿಡುವುದಿಲ್ಲ ಎಂಬ ಕಾರಣಕ್ಕಾಗಿ ಈ ನಿರ್ಧಾರಕ್ಕೆ ಬಂದಿದೆ. ಇದೇ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಅಮೆರಿಕ ಸರಕಾರವು ಭಾರತದ ಮೇಲೂ ಒತ್ತಡ ತಂದಿದೆ. ಹುವಾಯಿಯ 5ಜಿ ಸೇವೆಯನ್ನೂ ಸ್ಥಗಿತ ಮಾಡಿ ಎಂದಿದೆ.
ಒಂದು ವೇಳೆ ಭಾರತವು ಅಮೆರಿಕಕ್ಕೆ ಪೂರಕವಾದ ನಿರ್ಧಾರ ತೆಗೆದುಕೊಳ್ಳದೇ ಹೋದಲ್ಲಿ, ವಾಟ್ಸ್ ಆ್ಯಪ್ ಸೇವೆಯನ್ನು ಸ್ಲೋ ಮಾಡಬಹುದು ಎಂಬ ಆತಂಕವೂ ಇದೆ. ಏಕೆಂದರೆ ವಾಟ್ಸ್‌ಆ್ಯಪ್, ಫೇಸ್‌ಬುಕ್, ಜಿಮೇಲ್ ಸಹಿತ ಪ್ರಮುಖ ಕಂಪೆನಿಗಳ ಬಹುತೇಕ ಸರ್ವರ್ ಇರುವುದು ಅಮೆರಿಕದಲ್ಲೇ.
ವಾಟ್ಸ್‌ಆ್ಯಪ್‌ನ ಜಿಗುಟುತನವೇನು?
ಇತ್ತೀಚಿನ ವರ್ಷಗಳಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಂದಾಗಿ ಗುಂಪುಥಳಿತದಂಥ ಪ್ರಕರಣಗಳು ಹೆಚ್ಚಾಗಿದ್ದವು. ಆಗ ಭಾರತ ವಾಟ್ಸ್ ಆ್ಯಪ್ ಸಂಸ್ಥೆಯ ಮೇಲೆ ಸಮರವನ್ನೇ ಸಾರಿತ್ತು. ಹಿಂಸಾಚಾರಕ್ಕೆ ಕಾರಣವಾದ ಮೆಸೇಜ್ ಅನ್ನು ಕಳುಹಿಸಿದ ಮೂಲ ವ್ಯಕ್ತಿ ಯಾರು ಎಂಬ ಬಗ್ಗೆ ಮಾಹಿತಿ ಕೊಡಬೇಕು ಎಂಬುದು ಕೇಂದ್ರ ಸರಕಾರದ ವಾದವಾಗಿತ್ತು. ಆದರೆ ಇದಕ್ಕೆ ವಾಟ್ಸ್‌ಆ್ಯಪ್ ಇನ್ನೂ ಒಪ್ಪಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.