ಇನ್ನು ಬೀದಿ ಬದಿ ಆಹಾರಕ್ಕೂ ಪ್ರಮಾಣ ಪತ್ರ?
Team Udayavani, Dec 22, 2017, 6:00 AM IST
ಹೊಸದಿಲ್ಲಿ: ರಸ್ತೆ ಬದಿಯ ಆಹಾರ ಸೇವನೆ ಒಳ್ಳೆಯದಲ್ಲ. ಆದರೆ, ಇನ್ನು ಮುಂದೆ ಅಲ್ಲಿ ಸಿಗುವ ಆಹಾರ ಸುರಕ್ಷಿತ ಹೌದೋ ಅಲ್ಲವೋ ಎಂಬ ಪ್ರಮಾಣ ಪತ್ರ ಸಿಗಲಿದೆ!
ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ದೇಶದ ಹಲವು ಭಾಗಗಳಲ್ಲಿ ಶುಚಿಯಾಗಿ ಬೀದಿ ಬದಿಯ ಆಹಾರ ಸಿಗುವ ಸ್ಥಳಗಳನ್ನು ಗುರುತಿಸಲು ಮುಂದಾಗಿದೆ. “ಕ್ಲೀನ್ ಸ್ಟ್ರೀಟ್ ಫುಡ್ ಹಬ್’ ಎಂದು ಗುರುತಿಸಲೋಸುಗ ಈ ಕ್ರಮಕ್ಕೆ ಮುಂದಾಗಿದೆ ಪ್ರಾಧಿಕಾರ.
ಅದಕ್ಕಾಗಿ ಕೆಲವು ನಿಯಮ ಸಿದ್ಧಪಡಿಸುತ್ತಿದ್ದು, ರಸ್ತೆ ಬದಿಯ ಆಹಾರ ಮಾರಾಟಗಾರರು ಅದಕ್ಕೆ ಒಳಪಟ್ಟರೆ ಮಾನ್ಯತೆ ನೀಡಲಾಗುತ್ತದೆ ಎಂದು ಎಫ್ಎಸ್ಎಸ್ಎಐ ಸಿಇಒ ಪವನ್ ಅಗರ್ವಾಲ್ ಹೇಳಿದ್ದಾರೆ. ಈ ಬಗ್ಗೆ “ದ ಹಿಂದೂಸ್ಥಾನ್ ಟೈಮ್ಸ್’ ವರದಿ ಮಾಡಿದೆ.
“ದೇಶದ ಹೆಚ್ಚಿನ ಭಾಗಗಳಲ್ಲಿ ರಸ್ತೆ ಬದಿಯ ಆಹಾರ ಸೇವನೆ ಜನಪ್ರಿಯ. ಶುಚಿ ಮತ್ತು ಗುಣಮಟ್ಟದಲ್ಲಿ ಅದನ್ನು ಪೂರೈಕೆ ಮತ್ತು ಸೇವನೆ ಪ್ರಾಧಿಕಾರದ ಆದ್ಯತೆ’ ಎಂದಿದ್ದಾರೆ ಅಗರ್ವಾಲ್. ಸರಿಯಾದ ರೀತಿಯಲ್ಲಿ ಆಹಾರ ತ್ಯಾಜ್ಯ ವಿಲೇವಾರಿ, ಆಹಾರ ಸಿದ್ಧಪಡಿಸುವ ವ್ಯಕ್ತಿಯೂ ವೈಯಕ್ತಿಕ ಶುಚಿತ್ವ ಕಾಯ್ದುಕೊಳ್ಳುವುದು, ಅಡುಗೆ ಮಾಡುವ ಮತ್ತು ಅದಕ್ಕೆ ಸಂಬಂಧಿಸಿದ ಸ್ಥಳ ಎಂದು ಪ್ರತ್ಯೇಕಿಸುವುದು, ಬೀದಿ ದೀಪ, ಕೀಟಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳ ಲಾಗಿದೆಯೇ ಎಂಬ ವಿಚಾರಗಳನ್ನು ಗಮನಿಸ ಲಾಗುತ್ತದೆ. ಕೆಲವೊಂದು ಅಂಶಗಳು ಪ್ರಾಧಿ ಕಾರದ ವ್ಯಾಪ್ತಿಯಿಂದ ಹೊರತಾಗಿರುವ ಕಾರಣ ಸ್ಥಳೀಯ ಆಡಳಿತ ಸಂಸ್ಥೆಗಳ ನೆರವು ಪಡೆಯಲೇಬೇಕಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!
Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ
MUST WATCH
ಹೊಸ ಸೇರ್ಪಡೆ
Kasaragod: ಯುವತಿ ನಾಪತ್ತೆ; ದೂರು ದಾಖಲು
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Mangaluru: ಜ.11, 12ರಂದು ಮಂಗಳೂರು ಲಿಟ್ ಫೆಸ್ಟ್… ಕಲೆ, ಸಾಹಿತ್ಯ, ಜಾನಪದಗಳ ಸಂಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.