ಮುಂಬರುವ ಗಣತಂತ್ರ ದಿನ ಪರೇಡ್‌ ಸಂಪೂರ್ಣ ನಾರೀಶಕ್ತಿಮಯ?

Team Udayavani, May 8, 2023, 8:25 AM IST

ಮುಂಬರುವ ಗಣತಂತ್ರ ದಿನ ಪರೇಡ್‌ ಸಂಪೂರ್ಣ ನಾರೀಶಕ್ತಿಮಯ?

ಹೊಸದಿಲ್ಲಿ: ಕೆಲವು ವರ್ಷಗಳಿಂದ ಗಣರಾಜ್ಯ ದಿನೋತ್ಸವ ಪಥ ಸಂಚಲನದಲ್ಲಿ ಹಂತಹಂತವಾಗಿ “ನಾರಿ ಶಕ್ತಿ ಪ್ರದರ್ಶನ’ವನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತಂದಿದ್ದ ಕೇಂದ್ರ ಸರಕಾರ ಮುಂದಿನ ವರ್ಷ ದೊಡ್ಡ ದೊಂದು ಸೀಮೋಲ್ಲಂಘನ ನಡೆಸಲಿದೆ. 2024ರ ಗಣತಂತ್ರ ದಿನ ಪರೇಡ್‌ ಸಂದರ್ಭ ಕರ್ತವ್ಯ ಪಥದಲ್ಲಿ ಬ್ಯಾಂಡ್‌, ಪಥ ಸಂಚಲನ, ಸ್ತಬ್ಧಚಿತ್ರ ಸಹಿತ ಎಲ್ಲ ತಂಡಗಳಲ್ಲಿಯೂ ಮಹಿಳೆಯರೇ ಇರಲಿದ್ದಾರೆ ಎಂದು ರಕ್ಷಣ ಸಚಿವಾಲಯದ ಮೂಲಗಳು ತಿಳಿಸಿವೆ.

ಈ ಸಂಬಂಧ ರಕ್ಷಣ ಸಚಿವಾಲಯವು ಮಾರ್ಚ್‌ ತಿಂಗಳಿ ನಲ್ಲಿಯೇ ಸೇನೆಯ ಮೂರೂ ವಿಭಾಗಗಳು, ಸಂಬಂಧ ಪಟ್ಟ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಅಧಿಕೃತ ಸೂಚನೆಯನ್ನು ರವಾನಿಸಿದ್ದು, ಅಗತ್ಯ ಸಿದ್ಧತೆ ಗಳನ್ನು ಮಾಡಿಕೊಳ್ಳಲು ಆದೇಶಿಸಿದೆ ಎಂದು ಮೂಲಗಳು ಹೇಳಿವೆ. ಸರಕಾರ ಮತ್ತು ರಕ್ಷಣ ಸಚಿವಾಲಯಗಳ ಉನ್ನತ ಮಟ್ಟದಲ್ಲಿ ಈ ಬಗ್ಗೆ ಫೆಬ್ರವರಿ ತಿಂಗಳಿನಲ್ಲಿ ಸಮಾಲೋಚನೆ ನಡೆಸಲಾಗಿದ್ದು, ಮುಂದಿನ ವರ್ಷದ ಗಣತಂತ್ರ ದಿನದ ಪಥಸಂಚಲನವನ್ನು ಸಂಪೂರ್ಣ ನಾರೀಶಕ್ತಿಮಯವಾಗಿಸಲು ತೀರ್ಮಾನಿಸಲಾಗಿದೆ.

ನಾರೀಶಕ್ತಿ ಪ್ರಗತಿ
ಕಳೆದ ಕೆಲವು ವರ್ಷಗಳಿಂದ ಗಣತಂತ್ರ ದಿನದ ಪರೇಡ್‌ನ‌ಲ್ಲಿ ಕೆಲವು ಸಂಪೂರ್ಣ ಮಹಿಳಾ ತಂಡಗಳು, ಕೆಲವು ತಂಡಗಳಲ್ಲಿ ಪುರುಷರ ಜತೆಗೆ ಸ್ತ್ರೀಯರು, ಪುರುಷ ಮಿಲಿಟರಿ ತಂಡಗಳಿಗೆ ಮುಂದಾಳುವಾಗಿ ಮಹಿಳೆ- ಹೀಗೆ ನಾರೀ ಶಕ್ತಿಯನ್ನು ಅನಾವರಣಗೊಳಿಸುತ್ತ ಬರಲಾಗಿದೆ. ಪ್ರಸ್ತುತ ವರ್ಷದ ಜನವರಿ 26ರಂದು ನಡೆದ ಪರೇಡ್‌ಗೆ “ನಾರೀಶಕ್ತಿ’ಯೇ ಧ್ಯೇಯವಾಕ್ಯವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಇದಕ್ಕೂ ಹಿಂದೆ, ರಾಜಪಥವು “ಕರ್ತವ್ಯ ಪಥ’ವಾಗಿ ಮರು ನಾಮಕರಣಗೊಂಡ ವರ್ಷ, 2023ರಲ್ಲಿ 144 ಮಂದಿ ವಾಯು ಸೇನಾ ಯೋಧರ ತಂಡವನ್ನು ಮಹಿಳಾ ಅಧಿಕಾರಿ ಮುನ್ನಡೆಸಿದ್ದರು. ಅದೇ ವರ್ಷ ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ತ್ರಿಪುರ ರಾಜ್ಯ ಗಳ ಸ್ತಬ್ಧಚಿತ್ರಗಳಿಗೆ “ನಾರಿಶಕ್ತಿ’ ಧ್ಯೇಯ ವಾಕ್ಯವಾಗಿತ್ತು.

ಕೇಂದ್ರ ಸರಕಾರವು ಇತ್ತೀಚೆಗಿನ ವರ್ಷಗಳಲ್ಲಿ ಸಶಸ್ತ್ರ ಪಡೆಗಳಿಗೆ ಹೆಚ್ಚು ಸಂಖ್ಯೆಯಲ್ಲಿ ಮಹಿಳಾ ಯೋಧರು ಮತ್ತು ಅಧಿಕಾರಿಗಳನ್ನು ನೇಮಕ ಮಾಡಿ ಕೊಳ್ಳುತ್ತಿದೆ. ಭಾರತೀಯ ಸೇನೆಯು ಇತ್ತೀಚೆಗೆ ತನ್ನ ಆರ್ಟಿಲರಿ ರೆಜಿಮೆಂಟ್‌ಗೆ ಐವರು ಮಹಿಳಾ ಅಧಿಕಾರಿಗಳನ್ನು ಸೇರ್ಪಡೆ ಮಾಡಿಕೊಂಡಿರುವುದು ಕೂಡ ಉಲ್ಲೇಖಾರ್ಹವಾಗಿದೆ.

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.