ಅಮಾನ್ಯಗೊಂಡ ನೋಟು ಖರೀದಿಸುತ್ತಿದ್ದ ಐಎಸ್‌ಐ!
Team Udayavani, Jun 9, 2018, 6:00 AM IST
ಹೊಸದಿಲ್ಲಿ: “ಅಪನಗದೀಕರಣದ ಬಳಿಕ ಬ್ಯಾಂಕುಗಳಿಗೆ ಜಮೆಯಾಗದಂಥ ಹಳೆಯ ನೋಟುಗಳು ಏನಾದವು, ಅಲ್ಲಿ ಇಲ್ಲಿ ಅಮಾನ್ಯಗೊಂಡ ನೋಟುಗಳನ್ನು ಸಾಗಿಸಿ ಸಿಕ್ಕಿಬಿದ್ದವರು ಆ ನೋಟುಗಳನ್ನು ಎಲ್ಲಿಗೆ ಒಯ್ಯುತ್ತಿದ್ದರು’ ಎಂಬ ಸಂಶಯಕ್ಕೆ ನಾನಾ ರೀತಿಯ ಸಮಜಾಯಿಷಿಗಳು ಕೇಳಿ ಬಂದಿದ್ದವು. ಆದರೆ, ದೇಶವೇ ಬೆಚ್ಚಿ ಬೀಳುವ ಸುದ್ದಿಯೊಂದನ್ನು ಇದೀಗ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.
ಹೌದು, ನಂಬಲೇಬೇಕಾದ ಸುದ್ದಿ ಇದು. ರದ್ದಾದ 500, 1000 ರೂ. ಮುಖಬೆಲೆಯ ನೋಟುಗಳು ಪಾಕಿಸ್ಥಾನದ ಐಎಸ್‌ಐ ಕೈಗೆ ಸೇರುತ್ತಿವೆಯಂತೆ. ಪಾಕ್‌ನ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಭಾರತದಲ್ಲಿ ರದ್ದಾದ ನೋಟುಗಳನ್ನೆಲ್ಲ ಖರೀದಿಸಿಕೊಂಡು, ಮತ್ತೆ ನಕಲಿ ನೋಟುಗಳಿಗಾಗಿ ಬಳಸಿಕೊಳ್ಳುತ್ತಿವೆ ಎಂದು ಗುಪ್ತಚರ ಇಲಾಖೆ ತಿಳಿಸಿರುವುದ್ದಾಗಿ ಝೀ ನ್ಯೂಸ್ ವರದಿ ಮಾಡಿದೆ.
ಸಾಗಾಟ ಹೇಗೆ?: ಹೀಗೆ ಖರೀದಿಸಲಾದ ಕಂತೆ ಕಂತೆ ನೋಟುಗಳನ್ನು ಯಾರಿಗೂ ಗೊತ್ತಾಗದಂತೆ ನೇಪಾಳಕ್ಕೆ ಸಾಗಿಸಲಾಗುತ್ತಿತ್ತು. ಅಲ್ಲಿಂದ ಕರಾಚಿ ಮತ್ತು ಪೇಶಾವರದಲ್ಲಿರುವ ಪ್ರಿಂಟಿಂಗ್ ಪ್ರಸ್‌ಗಳಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರರ ನೆರವಿನಿಂದ ಸಾಗಿಸಲಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಅಮಾನ್ಯಗೊಂಡ ನೋಟುಗಳಲ್ಲಿರುವಂಥ ಆರ್‌ಬಿಐನ ಭದ್ರತಾ ಅಂಶಗಳನ್ನು ತೆಗೆದು, ಹೊಸದಾಗಿ ತಯಾರಾಗುವ 500, 1000 ರೂ. ಮುಖಬೆಲೆಯ ನಕಲಿ ನೋಟುಗಳಲ್ಲಿ ಅಳವಡಿಸಲಾಗುತ್ತದೆ ಎಂಬ ಆಘಾತಕಾರಿ ವಿಚಾರವೂ ಬಹಿರಂಗವಾಗಿದೆ. ಮತ್ತೆ ಮುದ್ರಣವಾಗಿ ಬಂದ ನಕಲಿ ನೋಟುಗಳನ್ನು ದುಬೈ ಮತ್ತು ಬಾಂಗ್ಲಾದೇಶಗಳಿಗೆ ರವಾನಿಸಲಾಗುತ್ತಿತ್ತು. ಇದಕ್ಕೂ ಪಾತಕಿ ದಾವೂದ್ ಸಹಚರರನ್ನೇ ಬಳಸಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ.
ಎಲ್ಲೆಲ್ಲಿ ನೋಟು ಖರೀದಿ?
ಗುಪ್ತಚರ ಇಲಾಖೆ ವರದಿಯ ಪ್ರಕಾರ ಕರ್ನಾಟಕವೂ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಿಂದ ಅಮಾನ್ಯಗೊಂಡ ನೋಟುಗಳನ್ನು ಖರೀದಿಸಲಾಗುತ್ತಿತ್ತು. ದಾಳಿಯ ವೇಳೆ ಲಕ್ಷಾಂತರ ನೋಟುಗಳು ಲಭ್ಯವಾಗಿವೆ. ಇದೇ ವೇಳೆ ಈ ಎಲ್ಲಾ ವಿಚಾರಗಳು ಬಹಿರಂಗವಾಗಿವೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳೇ ಹೇಳಿ ದ್ದಾರೆ ಎನ್ನಲಾಗಿದೆ. ಆದರೆ, ಈ ವರೆಗೆ ಎಷ್ಟು ಮೌಲ್ಯದ ನೋಟುಗಳನ್ನು ಸಾಗಿಸಲಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಲಾಗಿದೆ. ಈ ಸಂಬಂಧ ಈಗ ಎನ್‌ಐಎ ಕೂಡ ಮಾಹಿತಿ ಸಂಗ್ರಹಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.