ಉಗ್ರ ಸಂಚಿನ ಹಿಂದೆ ಪಾಕ್‌ ಕೈವಾಡ ಸ್ಪಷ್ಟ 

Team Udayavani, Sep 16, 2021, 7:30 AM IST

ಉಗ್ರ ಸಂಚಿನ ಹಿಂದೆ ಪಾಕ್‌ ಕೈವಾಡ ಸ್ಪಷ್ಟ 

ಹೊಸದಿಲ್ಲಿ: ಭಾರತದಲ್ಲಿ ನವರಾತ್ರಿ, ರಾಮ್‌ಲೀಲಾ ಸಂದರ್ಭದಲ್ಲಿ ಅತಿದೊಡ್ಡ ವಿಧ್ವಂಸಕ ಕೃತ್ಯದ ಸಂಚಿನ ಹಿಂದೆ ಪಾಕಿಸ್ಥಾನದ ಕೈವಾಡವಿರುವುದು ಸ್ಪಷ್ಟವಾಗಿದೆ.

ಮಂಗಳವಾರ ಮೂರು ರಾಜ್ಯಗಳಲ್ಲಿ ನಡೆದ ಕ್ಷಿಪ್ರ ಕಾರ್ಯಾಚರಣೆ ಯಲ್ಲಿ 6 ಉಗ್ರರು ಬಂಧಿತರಾದ ಬೆನ್ನಲ್ಲೇ ಈ ವಿಚಾರ ಬೆಳಕಿಗೆ ಬಂದಿದೆ.

ಉಗ್ರರನ್ನು ಬಂಧಿಸುವ ವೇಳೆ ವಶಪಡಿಸಿ ಕೊಳ್ಳಲಾದ ಶಸ್ತ್ರಾಸ್ತ್ರಗಳು ಮತ್ತು ಪಂಜಾಬ್‌ನ ಗಡಿ ನಿಯಂತ್ರಣ ರೇಖೆಯ ಸಮೀಪ ಡ್ರೋನ್‌ಗಳು ಕೆಳಕ್ಕೆ ಹಾಕಿ ಹೋಗಿದ್ದ ಶಸ್ತ್ರಾಸ್ತ್ರಗಳಿಗೂ ಸಾಮ್ಯತೆ ಕಂಡುಬಂದಿದೆ. ಅಂದರೆ ಡ್ರೋನ್‌ ಮೂಲಕ ಪಾಕ್‌ ಕಳುಹಿಸುತ್ತಿದ್ದ ಶಸ್ತ್ರಾಸ್ತ್ರಗಳನ್ನೇ ದೇಶದಲ್ಲಿ ಉಗ್ರ ಕೃತ್ಯ ಎಸಗಲು ಉದ್ದೇಶಿಸಿದ ಈ ಉಗ್ರರೂ ಬಳಸಲು ಮುಂದಾಗಿರುವುದು ಪಾಕ್‌ ಬಣ್ಣವನ್ನು ಬಯಲು ಮಾಡಿದೆ. ಈ ಹಿಂದೆ ಪಂಜಾಬ್‌ನ ಗಡಿ ರೇಖೆಯ ಸಮೀಪವೇ ಡ್ರೋನ್‌ ಮೂಲಕ ಕೆಳಗಿಳಿಸಿ ಹೋಗಿದ್ದ ಟಿಫಿನ್‌ ಬಾಂಬ್‌ಗಳು, ಗ್ರೆನೇಡ್‌ಗಳು, 100 ಪಿಸ್ತೂಲು ಕಾಟ್ರಿಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

14 ದಿನ ಪೊಲೀಸ್‌ ವಶಕ್ಕೆ:

ಇದೇ ವೇಳೆ ಉತ್ತರಪ್ರದೇಶ, ದಿಲ್ಲಿ, ಮಹಾ ರಾಷ್ಟ್ರಗಳಲ್ಲಿನ ಕಾರ್ಯಾಚರಣೆ ಯಲ್ಲಿ ಬಂಧಿತರಾದ ಜಾನ್‌ ಮೊಹಮ್ಮದ್‌ ಶೇಖ್‌, ಒಸಾಮ, ಮೂಲ್‌ಚಂದ್‌, ಝೀಶಾನ್‌ ಖಮರ್‌, ಮೊಹಮ್ಮದ್‌ ಅಬೂ ಬಕ್ಕರ್‌ ಮತ್ತು ಮೊಹಮ್ಮದ್‌ ಅಮೀರ್‌ ಜಾವೇದ್‌ನನ್ನು ಬುಧವಾರ ದಿಲ್ಲಿ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು ಎಲ್ಲರನ್ನೂ 14 ದಿನಗಳ ಕಾಲ ಪೊಲೀಸ್‌ ವಶಕ್ಕೊಪ್ಪಿಸಿದೆ.

ಟ್ರಾವೆಲ್‌ ಏಜೆಂಟ್‌ ವಶಕ್ಕೆ:

6 ಉಗ್ರರನ್ನು ಬಂಧಿಸಿದ ಬೆನ್ನಲ್ಲೇ ಪೊಲೀಸರು ಬುಧವಾರ ಮುಂಬಯಿ ಯಲ್ಲಿ ಟ್ರಾವೆಲ್‌ ಏಜೆಂಟ್‌ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಸೆ. 13ರಂದು ಇದೇ ಏಜೆಂಟ್‌ ಈ ಉಗ್ರರಿಗೆ ರೈಲ್ವೇ ಟಿಕೆಟ್‌ ಬುಕ್‌ ಮಾಡಿ ಕೊಟ್ಟಿದ್ದ ಎನ್ನಲಾಗಿದೆ. ಇದೇ ವೇಳೆ ಶಂಕಿತ ಉಗ್ರ ಜಾನ್‌ ಮೊಹಮ್ಮದ್‌ ಶೇಖ್‌ ಎಂಬಾತನ ಕುಟುಂಬದ ಸದಸ್ಯರನ್ನು ಬುಧವಾರ ಮುಂಬಯಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಗರಿಷ್ಠ ಪ್ರಾಣಹಾನಿಗೆ ಪಾಕ್‌  ಸೇನೆಯಿಂದಲೇ ತರಬೇತಿ! :

ಬಂಧಿತ 6 ಉಗ್ರರ ಪೈಕಿ ಪಾಕ್‌ನಲ್ಲಿ ತರಬೇತಿ ಪಡೆದ ಇಬ್ಬರಿಗೆ ಕರಾಚಿಯ ಹೊರವಲಯದಲ್ಲಿ ಪಾಕ್‌ ಸೇನಾ ಸಿಬಂದಿಯೇ “ಉಗ್ರ ತರಬೇತಿ’ ನೀಡಿದ್ದರು. ಭಾರತದಲ್ಲಿ “ನವರಾತ್ರಿಯ ಸಮಯ ದಲ್ಲಿ ಮಾಡುವ ಸ್ಫೋಟ’ದಲ್ಲಿ ಗರಿಷ್ಠ ಪ್ರಾಣಹಾನಿ ಆಗುವಂತೆ ನೋಡಿಕೊಳ್ಳುವುದು ಹೇಗೆ ಎಂಬ ಬಗ್ಗೆಯೂ ಕಲಿಸಿಕೊಡಲಾಗಿತ್ತು.

ಉಗ್ರರ ತಂಡವು ಮೊದಲು ಮಾನ್ಯತೆ ಪಡೆದ ವೀಸಾ ಮೂಲಕ ಮಸ್ಕತ್‌ಗೆ ತೆರಳಿ 10 ದಿನ ಕ್ವಾರಂಟೈನ್‌ಗೆ ಒಳಗಾಗಿದ್ದರು. ಅಲ್ಲಿಂದ ಸಮುದ್ರ ಮಾರ್ಗದಲ್ಲಿ ಇರಾನ್‌ಗೆ ತೆರಳಿದ್ದರು. ಇರಾನ್‌ನಿಂದ ಹಡಗಿನ ಮೂಲಕ ಕರಾಚಿಗೆ ಪ್ರಯಾಣಿಸಿದ್ದರು. ಅಲ್ಲಿ ಪಾಕ್‌ ಸೇನೆಯ ಮೂವರು ಸಿಬಂದಿ, ಬಾಂಬ್‌-ಐಇಡಿ ತಯಾರಿಕೆ,

ಮ್ಯಾಪ್‌ ಓದುವುದು, ದೈನಂದಿನ ಬಳಕೆಯ ವಸ್ತು

ಗಳನ್ನು ಬಳಸಿ ಸ್ಫೋಟಕ ತಯಾರಿಸುವುದು, ಬಾಂಬ್‌ ಸ್ಫೋಟಿಸಿ ಗರಿಷ್ಠ ಹಾನಿ ಉಂಟುಮಾಡುವುದು ಇತ್ಯಾದಿ ವಿಚಾರಗಳ ಕುರಿತು ತರಬೇತಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ನಿಮ್ಮಿಂದ ಪಾಠ ಕಲಿಯಬೇಕಿಲ್ಲ’ :

“ಒಂದು ವಿಫ‌ಲ ದೇಶದಿಂದ ಪಾಠ ಕಲಿಯುವ ಅಗತ್ಯ ನಮಗಿಲ್ಲ.’ ಇದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಲ್ಲಿ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ ಪಾಕಿಸ್ಥಾನಕ್ಕೆ ಭಾರತ ನೀಡಿರುವ ಖಡಕ್‌ ಉತ್ತರ.

ಕಾಶ್ಮೀರ ವಿಚಾರ ಪ್ರಸ್ತಾವಿಸಿದ್ದ ಪಾಕ್‌ಗೆ ತಿರುಗೇಟು ನೀಡಿರುವ ಭಾರತದ ರಾಜತಾಂತ್ರಿಕ ಅಧಿಕಾರಿ ಪವನ್‌ ಬಾಧೆ, “ಪಾಕಿಸ್ಥಾನವು ಭಯೋ ತ್ಪಾದನೆಯ ಕೇಂದ್ರಬಿಂದು ಮತ್ತು ಒಂದು ವಿಫ‌ಲ ದೇಶ ಎಂಬುದು ಜಗತ್ತಿಗೇ ಗೊತ್ತು. ಉಗ್ರರನ್ನು ಪೋಷಿಸುತ್ತಾ ಬಂದಿರುವ ನಿಮ್ಮಂಥವರಿಂದ ಪಾಠ ಕಲಿಯಬೇಕಾದ ಅಗತ್ಯ ನಮಗಿಲ್ಲ’ ಎಂದಿದ್ದಾರೆ.

ಟಾಪ್ ನ್ಯೂಸ್

MM-Singh

Mourning: ಮನಮೋಹನ್‌ ಸಿಂಗ್‌ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Kundapura: ಬಾವಿಗೆ ಬಿದ್ದು ಯುವತಿ ಸಾವುKundapura: ಬಾವಿಗೆ ಬಿದ್ದು ಯುವತಿ ಸಾವು

Kundapura: ಬಾವಿಗೆ ಬಿದ್ದು ಯುವತಿ ಸಾವು

ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MM-Singh

Mourning: ಮನಮೋಹನ್‌ ಸಿಂಗ್‌ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

MM-Singh

Mourning: ಮನಮೋಹನ್‌ ಸಿಂಗ್‌ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.